ಅಹಮದಾಬಾದ್: ಕುಟುಂಬ ಗಿಫ್ಟ್ ಆಗಿ ನೀಡಿದ ಹೆಲಿಕಾಪ್ಟರ್‌ನ್ನು ವೈದ್ಯಕೀಯ ತುರ್ತುಸ್ಥಿತಿಗಾಗಿ ದಾನ ಮಾಡಿ ಮೆಚ್ಚುಗೆಗೆ ಪಾತ್ರರಾದ ಪದ್ಮಶ್ರೀ ಪುರಸ್ಕೃತರು.
59 ವರ್ಷದ ಸೂರತ್ ನಿವಾಸಿಯಾಗಿರುವ ಸಾವ್ಜಿ ಧೋಲಾಕಿಯಾ ಅವರು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪಡೆದಿದ್ದಾರೆ. ಈ ಕಾರದಿಂದ ಕುಟುಂಬ ಸದಸ್ಯರು ಹೆಲಿಕಾಪ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು. 50 ಕೋಟಿ ರೂ.ಬೆಲೆಯ ಹೊಚ್ಚಹೊಸ ಹೆಲಿಕಾಪ್ಟರ್‌ನ್ನು ಅವರು, ಸೂರತ್‍ನ ವೈದ್ಯಕೀಯ ಮತ್ತು ಇತರ ತುರ್ತು ಪರಿಸ್ಥಿತಿಗಳಿಗಾಗಿ ಕೊಡುಗೆಯಾಗಿ ನೀಡುವ ಮೂಲಕ ಎಲ್ಲಡೆ ಮೆಚ್ಚುಗೆ ಪಡೆದಿದ್ದಾರೆ.
ಧೋಲಾಕಿಯಾ ಅವರು ಹರಿಕೃಷ್ಣ ಡೈಮಂಡ್ ಕಂಪನಿಯ ಮಾಲೀಕರಾಗಿದ್ದಾರೆ. ಇವರು ಕೆಲವು ದಿನಗಳಿಂದ ಸೂರತ್‍ನ ಜನರಿಗೆ ಹೆಲಿಕಾಪ್ಟರ್ ಉಡುಗೊರೆಯಾಗಿ ನೀಡಲು ಯೋಜಿಸಿದ್ದರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಹೆಲಿಕಾಪ್ಟರ್‌ನ್ನೇ ಉಡುಗೊರೆಯನ್ನು ಸ್ವೀಕರಿಸಿದ ನಂತರ ಅವರು ಅದನ್ನೇ ಸೂರತ್ ಜನತೆಗೆ ಕೊಡುಗೆಯಾಗಿ ನೀಡಿದ್ದಾರೆ.
ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೂರತ್ ಗುಜರಾತ್‍ನ ಆರ್ಥಿಕ ರಾಜಧಾನಿಯಾಗಿದೆ. ಆದರೆ ತನ್ನದೇ ಆದ ಹೆಲಿಕಾಪ್ಟರ್ ಹೊಂದಿಲ್ಲ. ಹೀಗಾಗಿ, ನಾನು ಈ ಉಡುಗೊರೆಯನ್ನು ಸೂರತ್‍ನ ಜನರಿಗೆ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ಅರ್ಪಿಸುತ್ತಿದ್ದೇನೆ ಎಂದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB