ಪಾವಗಡ: ತಾಲೂಕಿನ ಜ್ಞಾನ ಬೋಧನಿ ಶಾಲೆಯ ವಾರ್ಷಿಕೋತ್ಸವ “ಸಂಭ್ರಮ 2025” ಭಾನುವಾರ ಸಂಜೆ ಭವ್ಯವಾಗಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಪಾವಗಡ ಘಟಕದ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “ಕಲಿಕೆ ಎನ್ನುವುದು ಮಾನವ ಜೀವನದ ಬಹುಮುಖ್ಯ ಭಾಗ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು, ಉತ್ಸಾಹವನ್ನು ನಿಂದಿರುವ ಜ್ವಾಲೆಯಂತೆ ಪ್ರಜ್ವಲಿಸುತ್ತ ಕೊಂಡೊಯ್ಯಬೇಕು. ಈ ರೀತಿಯ ಕಾರ್ಯಕ್ರಮಗಳು ಅವರ ಪ್ರತಿಭೆಗಳನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಹೇಳಿದರು.
ಪೋಷಕರ ಪಾತ್ರವನ್ನು ಮುಖ್ಯಗೊಳಿಸಿದ ಉದ್ದೇಶಪೂರ್ಣ ಸಂದೇಶ:
ಶಾಲೆಯ ಕಾರ್ಯದರ್ಶಿ ಡಾ. ಕೆ.ಎಸ್. ಅನಿಲ್ ಕುಮಾರ್, ಪೋಷಕರ ಪಾತ್ರವನ್ನು ಪ್ರಸ್ತಾಪಿಸಿ, “ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೋಷಕರಿಂದ ದೊರೆಯುವ ಸಮಯ ಅತಿ ಮುಖ್ಯ. ಇದು ಮಕ್ಕಳಿಗೆ ನಂಬಿಕೆ ಹಾಗೂ ಶ್ರದ್ಧೆ ಮೂಡಿಸುವುದರೊಂದಿಗೆ, ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಈ ಮೂಲಕ ಅವರು ಉತ್ತಮ ಪ್ರಗತಿಯನ್ನು ಸಾಧಿಸಬಹುದು” ಎಂದು ಹೇಳಿದರು.
ಅಭಿಮಾನವನ್ನು ಹೆಚ್ಚಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು:
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ನೃತ್ಯ, ಹಾಡು, ನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರದರ್ಶಿಸಿದರು. ಅವರ ಪ್ರದರ್ಶನಗಳು ಪೋಷಕರು ಹಾಗೂ ಅತಿಥಿಗಳನ್ನು ಮರುಮುಗ್ಧರನ್ನಾಗಿಸಿವೆ.
ಪ್ರಶಸ್ತಿಗಳ ವಿತರಣೆ:
ಕಾರ್ಯಕ್ರಮದ ಕೊನೆಯಲ್ಲಿ, ಅಕಾಡಮಿಕ್ ಸಾಧನೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಜೀವ್ ವೆಂಕಟೇಶ್, ಇಸಿಒ ವೇಣುಗೋಪಾಲ್ ರೆಡ್ಡಿ ಸೇರಿದಂತೆ ಶಾಲೆಯ ಶಿಕ್ಷಕ ವರ್ಗ, ಪೋಷಕರು ಹಾಗೂ ಶೈಕ್ಷಣಿಕ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ: ನಂದೀಶ್ ನಾಯ್ಕ ಪಿ. ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx