ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪ್ರಸಿದ್ಧ ರಾಧಾನಗರ ಬೀಚ್ ಬಳಿ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಅಲರ್ಟ್ ಲೈಫ್ ಗಾರ್ಡ್ ರಕ್ಷಿಸಿದ್ದಾರೆ.
ದಕ್ಷಿಣ ಅಂಡಮಾನ್ ಜಿಲ್ಲೆಯ ಹ್ಯಾವ್ಲಾಕ್ ದ್ವೀಪದ ರಾಧಾನಗರ ಬೀಚ್‍ನಲ್ಲಿ ಸ್ನಾನ ಮಾಡುತ್ತಿದ್ದಾಗ ಭಾರಿ ಆಲೆಗೆ ಸಿಲುಕಿ ತಂದೆ -ಮಗ ಮುಳುಗುತ್ತಿದ್ದರು ,ಇದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ನೀರಿಗೆ ಹಾರಿ ಅವರನ್ನು ಹೊರಗೆ ತಂದರು ಎಂದು ಅಕಾರಿಗಳು ತಿಳಿಸಿದ್ದಾರೆ.
ಇವರು ಮುಂಬೈನಿಂದ ಬಂದಿದ್ದರು ,ರಾಧಾನಗರ ಬೀಚ್ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದ್ದು ಜೂನ್ ನಿಂದ ಡಿಸೇಂಬರ್ ವರೆಗೆ ಹಚ್ಚು ಜನರು ಬರುತ್ತಾರೆ.ಅವರ ಸುರಕ್ಷತೆ ನಮಗೆ ದೊಡ್ಡ ಜವಾಬ್ದಾರಿ ಎಂದು ಲೈಫ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ .
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy