ಔರಾದ: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಎಕಲಾರ ಗ್ರಾಮ ಪಂಚಾಯತ್ ಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೇ ನಿರ್ಲಕ್ಷ್ಯವಹಿಸುತ್ತಿದ್ದು, ಇದರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2 ದಿನಗಳಿಂದ ಇಲ್ಲಿನ ಕೊಲ್ಲೂರು ಗ್ರಾಮದ ಯುವಕರು ಪಂಚಾಯತ್ ಗೆ ಭೇಟಿ ನೀಡಿದರೂ ಇಲ್ಲಿ ಯಾವುದೇ ಅಧಿಕಾರಿಗಳು ಕೂಡ ಕಂಡು ಬರುತ್ತಿಲ್ಲ. ಸಮಯ ಮಧ್ಯಾಹ್ನ 12:28 ಕಳೆದರೂ ಯಾವುದೇ ಅಧಿಕಾರಿಗಳು ಕೂಡ ಪಂಚಾಯತ್ ಗೆ ಆಗಮಿಸುತ್ತಿಲ್ಲ ಎಂದು ಯುವಕ ಕೊಲ್ಲೂರು ಗ್ರಾಮದ ಸಂದೀಪ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಪಂಚಾಯತ್ ಅಧಿಕಾರಿಗಳು ಯಾವುದೇ ಸಹಕಾರ ನೀಡುತ್ತಿಲ್ಲ, ಸ್ವಚ್ಛ ಭಾರತದ ಕಸವಿಲೇವಾರಿಯ ವಾಹನ ಕೂಡ ಪಂಚಾಯತ್ ಆವರಣದಲ್ಲಿದ್ದು, ಇದು ಕಾರ್ಯಾಚರಿಸದೇ ನಿಂತಿದ್ದು, ತುಕ್ಕು ಹಿಡಿಯಲು ಸಿದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


