ಬೆಂಗಳೂರು: ಮನೆಯಲ್ಲೇ ಸಾನಿಟೈಸರ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿರುವ ಘಟನೆ ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಹಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶಾಜಿಯಾ ಬಾನು ಎಂದು ಗುರುತಿಸಲಾಗಿದೆ.
ಮದುವೆಯಾಗಿ 8 ವರ್ಷಗಳಾಗಿದ್ದು ದಂಪತಿಗಳು ಮೂರು ಮಂದಿ ಮಕ್ಕಳನ್ನು ಹೊಂದಿದ್ದಾರೆ. ಸುಖವಾಗಿಯೆ ಸಾಗುತ್ತಿದ್ದ ಸಂಸಾರ ಆದರೆ ಇತ್ತೀಚಿಗೆ ‘ನೀನು ಕಪ್ಪಗಿದ್ದೀಯಾ, ಸುಂದರವಾಗಿಲ್ಲ ‘ ಎಂದು ಪತ್ನಿಗೆ ಕಿರುಕುಳ ಕೊಡುತ್ತಿದ್ದ . ಮಗನ ಕಿರುಕುಳ ಸಾಥ್ ಕೊಟ್ಟ ಆತನ ತಾಯಿಯೂ ಸೊಸೆಗೆ ಹಿಂಸಿಸುತ್ತಿದ್ದಳು.
ಇಷ್ಟಕ್ಕೆ ನಿಲ್ಲದ ಕಿರುಕುಳ ಆಕೆ ಹೆತ್ತ ಮೂರು ಮಕ್ಕಳನ್ನೂ ಹತ್ತಿರ ಬೀಡುತ್ತಿರಲಿಲ್ಲ ಗಂಡನ ಈ ದುರ್ವತನೆಗೆ ಬೇಸತ್ತು ಪತ್ನಿ, ಏಪ್ರಿಲ್ 20ರಂದು ಮನೆಯಲ್ಲೇ ಸಾನಿಟೈಸರ್ ಸುರಿದುಕೊಂಡು ಶಾಜಿಯಾ ಬೆಂಕಿ ಹಚ್ಚಿಕೊಂಡಿದ್ದಳು. ಸುಟ್ಟ ಗಾಯದಿಂದ ಬಳಲುತ್ತಿದ್ದ ಶಾಜಿಯಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ ಕೊನೆಯುಸಿರೆಳೆದಿದ್ದಾಳೆ.
ಆಕೆಯ ಸಾವಿಗೆ ಗಂಡ-ಅತ್ತೆಯೇ ಕಾರಣ’ ಎಂದು ಮೃತಳ ಪೋಷಕರು ದೂರಿದ್ದಾರೆ. ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆ ಆರಂಭಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


