nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕುರ್ಚಿ ಉಳಿಸಿಕೊಳ್ಳಲು ಶಾಸಕರನ್ನು ವಿದೇಶಕ್ಕೆ ಕಳಿಸುತ್ತಿದ್ದಾರೆ ಸಿದ್ದರಾಮಯ್ಯ: ಬಿ.ವೈ.ವಿಜಯೇಂದ್ರ ವಾಗ್ದಾಳಿ

    February 12, 2026

    ರಾಜಕಾರಣ ಮಾಡಲೇಬೇಕು, ನನಗೆ ಸದಾ ಯಶಸ್ಸು ಸಿಗುತ್ತದೆ: ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

    February 12, 2026

    ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಖಾಲಿ, ಇದು ‘ಪಾಪರ್’ ಸರ್ಕಾರ: ಆರ್. ಅಶೋಕ್ ಕಿಡಿ

    February 12, 2026
    Facebook Twitter Instagram
    ಟ್ರೆಂಡಿಂಗ್
    • ಕುರ್ಚಿ ಉಳಿಸಿಕೊಳ್ಳಲು ಶಾಸಕರನ್ನು ವಿದೇಶಕ್ಕೆ ಕಳಿಸುತ್ತಿದ್ದಾರೆ ಸಿದ್ದರಾಮಯ್ಯ: ಬಿ.ವೈ.ವಿಜಯೇಂದ್ರ ವಾಗ್ದಾಳಿ
    • ರಾಜಕಾರಣ ಮಾಡಲೇಬೇಕು, ನನಗೆ ಸದಾ ಯಶಸ್ಸು ಸಿಗುತ್ತದೆ: ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
    • ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಖಾಲಿ, ಇದು ‘ಪಾಪರ್’ ಸರ್ಕಾರ: ಆರ್. ಅಶೋಕ್ ಕಿಡಿ
    • ಶಾಸಕ ಭೈರತಿ ಬಸವರಾಜ್‌ ಗೆ ಸುಪ್ರೀಂ ಕೋರ್ಟ್‌ನಲ್ಲೂ ಬಿಗ್ ಶಾಕ್: ನಿರೀಕ್ಷಣಾ ಜಾಮೀನು ಅರ್ಜಿ ವಜಾ
    • ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಕಾಪಾಡಿದ್ದೇವೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್
    • ಫೆಬ್ರವರಿ 20 ರಿಂದ ಆರು ದಿನಗಳ ಕಾಲ ತೋರೆಮನೆಯಲ್ಲಿ ಅಂತರಗಟ್ಟೆ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ
    • ಶಾಲೆಯ ಆವರಣದಲ್ಲೇ ಸಂತೆ:  ಹೊಳವನಹಳ್ಳಿ ಹಿಂದೂಸ್ತಾನ್ ಶಾಲೆಯಲ್ಲಿ ಗಮನ ಸೆಳೆದ ಸಂತೆ ಮೇಳ
    • ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಸಿಡಿದೆದ್ದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು: ಬೃಹತ್ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಾಲೆಯ ಆವರಣದಲ್ಲೇ ಸಂತೆ:  ಹೊಳವನಹಳ್ಳಿ ಹಿಂದೂಸ್ತಾನ್ ಶಾಲೆಯಲ್ಲಿ ಗಮನ ಸೆಳೆದ ಸಂತೆ ಮೇಳ
    ಕೊರಟಗೆರೆ February 12, 2026

    ಶಾಲೆಯ ಆವರಣದಲ್ಲೇ ಸಂತೆ:  ಹೊಳವನಹಳ್ಳಿ ಹಿಂದೂಸ್ತಾನ್ ಶಾಲೆಯಲ್ಲಿ ಗಮನ ಸೆಳೆದ ಸಂತೆ ಮೇಳ

    By adminFebruary 12, 2026No Comments2 Mins Read

    ಕೊರಟಗೆರೆ: ವಿದ್ಯಾರ್ಥಿಗಳಲ್ಲಿ ವ್ಯಾಪಾರ ಮನೋಭಾವನೆ, ವ್ಯವಹಾರಿಕ ಜೀವನ ನಿರ್ವಹಣೆ ಮಹತ್ವ ತಿಳಿಸುವ ಉದ್ದೇಶದಿಂದ ಹೊಳವನಹಳ್ಳಿ ಹಿಂದೂಸ್ತಾನ್ ಇಂಟರ್ ನ್ಯಾಷನಲ್ ಶಾಲಾ ಆವರಣದಲ್ಲಿ ಎಲ್‌ ಕೆ ಜಿ, ಯಿಂದ 8 ನೇ ತರಗತಿ ವರೆಗಿನ ಮಕ್ಕಳಿಂದ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು.

    ಓದು, ಆಟ–ಪಾಠಕ್ಕೆ ಮೀಸಲಾಗಿದ್ದ ಶಾಲಾ ಆವರಣ ಸಂತೆಯ ರೀತಿ ಮಾರ್ಪಾಡಗಿತ್ತು. ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದಂತಹ ವಿವಿಧ ಬಗೆ ಬಗೆಯ ತಾಜಾ ತರಕಾರಿ, ಹೂವು, ಸೊಪ್ಪು, ಹಣ್ಣು-ಹಂಪಲು ಹಾಗೂ ತಿಂಡಿ ತಿನ್ನಿಸುಗಳು, ತಂಪು ಪಾನೀಯಗಳು ಸಂತೆಯಲ್ಲಿದ್ದವು. ಮೊದಲೇ ಹಳ್ಳಿ ಮಕ್ಕಳಾದ್ದರಿಂದ ಪೈಪೋಟಿಗೆ ಬಿದ್ದವರಂತೆ ಭರ್ಜರಿ ವ್ಯಾಪಾರ ಮಾಡಿ ಓದಕ್ಕೂ ಸೈ, ವ್ಯಾಪಾರಕ್ಕೂ ಜೈ ಎನಿಸಿಕೊಂಡರು.


    Provided by
    Provided by

    ಶಾಲಾ ಮಕ್ಕಳ ವ್ಯಾಪಾರಕ್ಕೆ ಹಿರಿಯ ವಿದ್ಯಾರ್ಥಿಗಳು ಸಹಕಾರ ನೀಡಿದರು. ವ್ಯಾಪಾರ ಮಾಡುವ ಕೌಶಲ್ಯ ಹೇಳಿಕೊಟ್ಟರು, ಚಿಲ್ಲರೆ ಕೊಡುವ ಲೆಕ್ಕಚಾರ ಕಲಿಸಿದರು. ಒಟ್ಟಿನಲ್ಲಿ ಶಾಲೆಯ ಎಲ್ಲ ಮಕ್ಕಳಿಗೂ ಸಂತೆ ಮೇಳ ಹೊಸ ಕಲೆ ಕಲಿಸಿದಂತಿತ್ತು. ಈ ಮೇಳದಲ್ಲಿ ಶಿಕ್ಷಕರು, ಪೋಷಕರೇ ಗ್ರಾಹಕರಾಗಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸು, ತರಕಾರಿಗಳು ಹಾಗೂ ಇತರ ಪದಾರ್ಥಗಳನ್ನು ಮಾರಾಟ ಮಾಡಿದರು.

    ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ಕೌಶಲ್ಯವನ್ನು ಬೆಳೆಸಲು ಮಕ್ಕಳ ಸಂತೆ ಆಯೋಜಿಸಲಾಗಿತ್ತು.

    ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಕ್ಕಳೂ ಸಹ ಲವಲವಿಕೆಯಿಂದ ಪಾಲ್ಗೊಂಡು ಶಾಲೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಠಿಸಿದ್ದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಫೈರೋಜ್ ಬೇಗಂ ಹಿಂದೂಸ್ತಾನ್ ಶಾಲೆಗೆ  ಭೇಟಿ ನೀಡಿ ಸಂತೆ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಕ್ಕಳಿಂದ ತಿಂಡಿ ತಿನಿಸುಗಳನ್ನು  ಖರೀದಿಸಿ ಸಂತೆ ಮೇಳಕ್ಕೆ ಮಕ್ಕಳ ತೋರುಸುತ್ತಿದ್ದ ಆಸಕ್ತಿ ಆಲಿಸಿದರು. ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ನಡೆಸಿ ಮಕ್ಕಳ ಪ್ರತಿಭೆಗೆ ವೇದಿಕೆ ಸೃಷ್ಟಿಸಿದೆ. ಈ ಜೊತೆಗೆ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಸಂತೆ ಮೇಳ ನಡೆಸುತ್ತಿದ್ದು ಮಕ್ಕಳಿಗೆ ಶಾಲೆಯ ಹೊರತಾದ ಪ್ರಪಂಚ ಪರಿಚಯ ಮಾಡಲಾಗುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ  ತಿಳಿಸಿದರು.

    ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಾದ ಯಾಸ್ಮಿನ್ ಸುಲ್ತಾನ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರ್ಥಿಕ ವ್ಯವಹಾರ ನಡೆಸುವುದು ಹೇಗೆ ಎಂಬ ಬಗ್ಗೆ ಈ ಸಂತೆ ಮೇಳದಿಂದ ಅರಿವು ಮೂಡುತ್ತದೆ. ಇದರಿಂದ ಮಕ್ಕಳಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಉಪಯೋಗ ಆಗಲಿದೆ ಎಂದು ಹೇಳಿದರು.

    ಸಂತೆ ಮೇಳ ಕಾರ್ಯಕ್ರದಲ್ಲಿ ಮಕ್ಕಳು ತಂದಿದ್ದoತಹ ಆಹಾರ ಪದಾರ್ಥಗಳು, ತಿಂಡಿ, ನೀರು, ಜ್ಯೂಸ್ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಪೋಷಕರು ಖರೀದಿ ಮಾಡಿ ಸಂತೆ ಮೇಳ ಕಾರ್ಯಕ್ರಮ ಯಶಸ್ವಿಗೊಳಿಸಿದರು.

    ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಅಮೀನ್ ಖಾನ್, ಶಿಕ್ಷಕರುಗಳಾದ ಪಲ್ಲವಿ, ವನಜಾಕ್ಷಿ, ದೇವರಾಜ್, ರೇಷ್ಮಾಬಾನು,ರಾಬೀಯಾ ಬೇಗಂ, ಸೈಯಿದಾ ಬೇಗಂ,ಇನಿಸಿಯಾ ಫಾತಿಮಾ ಉಮೇ ಕುಲ್ಸುಮ್, ಸಮರ್ ಸೇರಿದಂತೆ ಪೋಷಕರು ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳು ಇದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಕಾಪಾಡಿದ್ದೇವೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್

    February 12, 2026

    ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಸಿಡಿದೆದ್ದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು: ಬೃಹತ್ ಪ್ರತಿಭಟನೆ

    February 12, 2026

    ಪ್ರಪಥಮ ಬಾರಿಗೆ ಸಿದ್ದರಬೆಟ್ಟದಲ್ಲಿ ಅದ್ದೂರಿ ಮಹಾ ಶಿವರಾತ್ರಿ ಜಾಗರಣೆ ಮಹೋತ್ಸವ

    February 10, 2026

    Leave A Reply Cancel Reply

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕುರ್ಚಿ ಉಳಿಸಿಕೊಳ್ಳಲು ಶಾಸಕರನ್ನು ವಿದೇಶಕ್ಕೆ ಕಳಿಸುತ್ತಿದ್ದಾರೆ ಸಿದ್ದರಾಮಯ್ಯ: ಬಿ.ವೈ.ವಿಜಯೇಂದ್ರ ವಾಗ್ದಾಳಿ

    February 12, 2026

    ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳಿಸುತ್ತಿದ್ದಾರೆ ಎಂದು ಬಿಜೆಪಿ…

    ರಾಜಕಾರಣ ಮಾಡಲೇಬೇಕು, ನನಗೆ ಸದಾ ಯಶಸ್ಸು ಸಿಗುತ್ತದೆ: ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

    February 12, 2026

    ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಖಾಲಿ, ಇದು ‘ಪಾಪರ್’ ಸರ್ಕಾರ: ಆರ್. ಅಶೋಕ್ ಕಿಡಿ

    February 12, 2026

    ಶಾಸಕ ಭೈರತಿ ಬಸವರಾಜ್‌ ಗೆ ಸುಪ್ರೀಂ ಕೋರ್ಟ್‌ನಲ್ಲೂ ಬಿಗ್ ಶಾಕ್: ನಿರೀಕ್ಷಣಾ ಜಾಮೀನು ಅರ್ಜಿ ವಜಾ

    February 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.