ಸಂತಪೂರ್: 2024–25ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಮಾರ್ಚ್/ಏಪ್ರಿಲ್ 2025ರಲ್ಲಿ ಜರುಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆ –1 ಬರೆಯುವ ವಿದ್ಯಾರ್ಥಿಗಳಿಗೆ ಪರಿಣಿತ ತಜ್ಞರಿಂದ ಒಂದು ದಿನದ ಕಾರ್ಯಾಗಾರವನ್ನು ದೀಪಾಲಯ ಪ್ರೌಢಶಾಲೆ ಸಂತಪೂರ್ ನಲ್ಲಿ ಆಯೋಜಿಸಲಾಗಿತ್ತು.
ಡಾ.ಶಾಂತಿ ದೇಸಾಯಿ ಇಂಗ್ಲೀಷ್ ವಿಷಯದ ಪರಿಣಿತ ತಜ್ಞರು SSLC ವಿದ್ಯಾರ್ಥಿಗಳಿಗೆ ಇಂಗ್ಲಿಷ್ ನ ಸಂಪೂರ್ಣ ಪಠ್ಯವನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿ ಬಲಭೀಮ ಕುಲಕರ್ಣಿ ಮಾತನಾಡಿ, ಈ ಒಂದು ಕಾರ್ಯಕ್ರಮ ಮಕ್ಕಳಿಗೆ ಪರೀಕ್ಷಾ ಕಾರ್ಯಕ್ಕಾಗಿ ಉತ್ತಮವಾಗಿರುತ್ತದೆ. ಮಕ್ಕಳು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 15 ರಿಂದ 16 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು. ಸುಮಾರು 850 ವಿದ್ಯಾರ್ಥಿಗಳು ಈ ಒಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ದೀಪಾಲಯ ಪ್ರೌಢಶಾಲೆಯ ಮುಖ್ಯ ಗುರುಗಳು ಸಿಸ್ಟರ್ ಪ್ರೀತಿ, ಸರ್ಕಾರಿ ಪ್ರೌಢಶಾಲೆ ಮುಖ ಗುರುಗಳಾದ ಅಜಯ್ ಕುಮಾರ್ ದುಬೆ, ಶಿಕ್ಷಣ ಸಂಯೋಜಕರಾದ ರಾಜಕುಮಾರ್, ಸಿಆರ್ಪಿಗಳಾದ ಜ್ಯೋತಿ ಜೀರಿಗೆ, ರವೀಂದ್ರ ಕುಮಾರ್ , ಗಫರ್ ಖಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx