ಔರಾದ : ತಾಲೂಕಿನ ಸಂತಪೂರ ಮುರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುವುದಿಲ್ಲ, ಗ್ರಂಥಾಲಯ, ಪುಸ್ತಕಗಳು, ಆಟದ ಸಲಕರಣೆಗಳು ಸೇರಿದಂತೆ ಹಾಸ್ಟೆಲ್ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ,ಅದನ್ನು ಪ್ರಶ್ನೆ ಮಾಡಿದರೆ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿ ವಾರ್ಡನ್ ವಿರುದ್ಧ ಧಿಕ್ಕಾರ ಕೂಗಿರುವ ಘಟನೆ ಸಂತಪೂರನಲ್ಲಿ ನಡೆದಿದೆ.
ನಮಗೆ ನೀಡುವ ಊಟ ಗುಣಮಟ್ಟದಿರುವುದಿಲ್ಲ, ಅನ್ನ ಸಾಂಬಾರನಲ್ಲಿ ಹುಳಗಳು ಬರುತ್ತವೆ. ಇದೇನು ಎಂದು ಪ್ರಶ್ನಿಸಿದರೆ ಅದನ್ನು ತೆಗೆದು ತಿನ್ನು ಎನ್ನುತ್ತಾರೆ ಮಜ್ಜಿಗೆ ಹಾಗೂ ಚಹಾದಲ್ಲಿ ಬರಿ ನೀರು ಇರುತ್ತದೆ. ಹೀಗಾದ್ರೆ ನಾವು ಎನು ಮಾಡಬೇಕು ಎನ್ನುತ್ತಾರೆ ವಿದ್ಯಾರ್ಥಿಗಳು.
ವಾರ್ಡನ್ ಮಾತು ಎತ್ತಿದರೆ ಸಾಕು, ಬರಿ ನಿಮ್ಮಪ್ಪಾ ನಾ ಜಾ*** ಬೋ***ಮಗನೆ ಅಂತೆಲ್ಲಾ ಬೈಯ್ದು ಬಿಡುತ್ತಾರೆ. ಬೈ ಬೇಡಿ ಸರ್ ಎಂದಾಗ, ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ನಾವ್ ಎನ್ ಮಾಡಬೇಕು ಸರ್ ನಾವುಗಳು ಇಲ್ಲಿ ನರಕಯಾತನೆ ಅನುಭವಿಸುತ್ತಿದೇವೆ ಎಂದು ಮಾಧ್ಯಮದ ಮುಂದೆ ಅಳಲನ್ನು ತೋಡಿಕೊಂಡರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಾರ್ಡನ್ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx