ಗಣ್ಯ ವ್ಯಕ್ತಿಗಳ ಪ್ರೀತಿಯ ಮಾಮಾ, ಸ್ಯಾಂಟ್ರೋ ರವಿ, ಇಂದು ಕರ್ನಾಟಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನ್ನ ಅಕ್ರಮ ದಂಧೆಗಳಿಂದ ಕೋಟ್ಯಂತರ ರೂ. ಆಸ್ತಿ ಮಾಡಿರುವ ಕೆ.ಎಸ್.ಮಂಜುನಾಥ್ ಯಾನೆ ಸ್ಯಾಂಟ್ರೋ ರವಿಯ ಕಥೆಗಳು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಂಡಿತ್ತು.
ಸ್ಯಾಂಟ್ರೋ ರವಿಗೆ ಮನೆ ಬಾಡಿಗೆಗೆ ನೀಡಿದ್ದ ವ್ಯಕ್ತಿ ಹೇಳುವ ಪ್ರಕಾರ, ಸ್ಯಾಂಟ್ರೋ ರವಿ ಅಪಾರ್ಟ್ ಮೆಂಟ್ ಬಾಡಿಗೆ ಪಡೆದುಕೊಂಡಿದ್ದಾಗ, ಮನೆಗೆ ನಟಿಯರು, ಮಾಡೆಲ್ ಗಳು, ಸರ್ಕಾರಿ ಅಧಿಕಾರಿಗಳು ಬರುತ್ತಿದ್ದರು ಎಂದು ಹೇಳಿದ್ದಾರೆ.
2000ನೇ ಇಸವಿಯಿಂದ 2005ರವರೆಗೆ ಮಂಡ್ಯ, ಮೈಸೂರಿನಲ್ಲಿ ತನ್ನ ವೃತ್ತಿಯನ್ನು ಆರಂಭಿಸಿದ್ದ ಸ್ಯಾಂಟ್ರೋ ರವಿ, ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನು ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದ. ತನ್ನ ಪತ್ನಿ ವಕೀಲೆ ಎಂದು ಬೆದರಿಸಿ ಹಲವರಿಗೆ ವಂಚಿಸಿದ್ದ ಎನ್ನಲಾಗಿದೆ. ತನ್ನ ಶೋಕಿಗಾಗಿ ಮೂರು ನಾಲ್ಕು ಕಾರುಗಳನ್ನು ಈತ ಇಟ್ಟುಕೊಂಡಿದ್ದ.
ಆರ್.ಆರ್ ನಗರ ಪೊಲೀಸರ ಎದುರೇ ಸ್ಯಾಂಟ್ರೋ ರವಿ ತಾವು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನಂತೆ.. ಸರಿ ಸುಮಾರು 3-4 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಮಾಡಿರುವುದಾಗಿ ಹೇಳಿಕೊಂಡಿದ್ದ ಎನ್ನಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಿಸಿದ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಸ್ಯಾಂಟ್ರೋ ರವಿ ಇದೀಗ ಪೊಲೀಸರ ವಶದಲ್ಲಿದ್ದು, ಈತನ ಒಂದೊಂದೇ ಕೃತ್ಯಗಳು ಬಯಲಾಗಲಿದೆ.
ಅಂದ ಹಾಗೆ ಈತ ವರ್ಗಾವಣೆ ಮಾಡಿಸಿರುವ ಪೊಲೀಸ್ ಅಧಿಕಾರಿಗಳಿಗೆ ಕೂಡ ಸಂಕಷ್ಟವಾಗಲಿದೆ ಎನ್ನಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲೇ ಇಂತಹ ಅಕ್ರಮಗಳು ನಡೆಯುತ್ತಿದೆ ಎಂದರೆ, ನಮ್ಮ ಭದ್ರತಾ ವ್ಯವಸ್ಥೆಗಳ ಗತಿ ಏನು? ಅನ್ನೋ ಪ್ರಶ್ನೆಗಳನ್ನ ಜನರು ಕೇಳುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


