ಸರಗೂರು : ತಾಲ್ಲೂಕಿನ ಪಟ್ಟಣದ ಬಸ್ ನಿಲ್ದಾಣ ಎದುರು ಬಳಿ ತಾಲ್ಲೂಕಿನ ಎಲ್ಲಾ ಸ್ವಾಮೀಜಿಗಳ ಸಮ್ಮುಖದಲ್ಲಿ ಹಾಗೂ ಅಪ್ಪಾಜಿ ಕ್ಯಾಂಟಿನ್ ಸಂಸ್ಥಾಪಕ ಹಾಗೂ ಜೆಡಿಎಸ್ ಮುಖಂಡ ಕೆ ಎಂ ಕೃಷ್ಣನಾಯಕ ರವರ ಉಪಸ್ಥಿತಿಯಲ್ಲಿ ನಮ್ಮ ಅಪ್ಪಾಜಿ ಕ್ಯಾಂಟಿನ್ ಉದ್ಘಾಟನೆ ನೆರವೇರಿತು.
ಸರಗೂರು ತಾಲ್ಲೂಕಿನ ನಾಗದೇವತೆ ಚಿಕ್ಕದೇವಮ್ಮನ ಸನ್ನಿಧಾನಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರ ಪಟ್ಟಣದ ಅಂಬೇಡ್ಕರ್ ಭವನದಿಂದ ವಾದ್ಯ ನಗರಿ ಮತ್ತು ಪೂಜೆ ಕುಣಿತ ವೀರಗಾಸೆ ನೃತ್ಯ ಪ್ರದರ್ಶನ ದೊಂದಿಗೆ ಬಂದ ಮೆರವಣಿಗೆ ಬಸ್ ನಿಲ್ದಾಣ ಬಳಿ ತಲುಪಿತು.
ಅಪ್ಪಾಜಿ ಕ್ಯಾಂಟಿನ್ ಉದ್ಘಾಟನೆ ಬಳಿಕ ಪಡಗಲು ವಿರಕ್ತಮಠದ ಶ್ರೀ ಮಹದೇವಸ್ವಾಮಿ ಸ್ವಾಮೀಜಿ ಮಾತನಾಡಿ, ಈ ಕ್ಯಾಂಟಿನ್ ನಿಂದಾಗಿ ಬಡವರು ಹಾಗೂ ಶಾಲಾ ಕಾಲೇಜುಗಳ ಮಕ್ಕಳಿಗೆ ಅನುಕೂಲವಾಗಲಿದೆ. ಎಂ ಕೃಷ್ಣನಾಯಕರವರು ಅಪ್ಪಾಜಿ ಕ್ಯಾಂಟೀನ್ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಯಾಂಟಿನ್ ಸಂಸ್ಥಾಪಕ ಕೆ.ಎಂ.ಕೃಷ್ಣನಾಯಕ ಮಾತನಾಡಿ, ನಾನು ತಾಲ್ಲೂಕಿಗೆ ಬಡವರ ಸೇವೆ ಮಾಡಲು ಬಂದಿದ್ದೇನೆಯೇ ಹೊರತು ರಾಜಕೀಯ ಮಾಡಲು ಅಲ್ಲ. ಕಡುಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಶಾಲೆಯ ಮಕ್ಕಳು, ಕೂಲಿ ಕಾರ್ಮಿಕರು ಅನುಕೂಲವಾಗಲಿ ಅನ್ನೋದು ನಮ್ಮ ಉದ್ದೇಶ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಈ ಕ್ಯಾಂಟಿನ್ ಅನ್ನು ಸರಗೂರು ತಾಲೂಕಿನಲ್ಲಿ ತೆರೆದಿದ್ದೇನೆ ಎಂದು ಅವರು ಹೇಳಿದರು.
ಇದೇ ವೇಳೆ ದಡದಹಳ್ಳಿ ಮಠದ ಪಡಕ್ಷರ ಸ್ವಾಮೀಜಿ, ಹಂಚೀಪುರ ಸ್ವಾಮೀಜಿ, ಸಾರನಾಥ ಬುದ್ದ ವಿಹಾರ ಬಂತೇಜಿ, ಜೆಡಿಎಸ್ ಮುಖಂಡ ಸಿ.ವಿ.ನಾಗರಾಜು ಮಾತನಾಡಿದ್ದರು.
ಬಸವರಾಜು, ಶೇಖರೇಲಿಂಗಗೌಡ, ದಾಸೇಗೌಡ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕರು ಚಾ ಶಿವಕುಮಾರ್, ಶಿವಮಾದು, ಮುಖಂಡರು ಶಂಭೇಗೌಡರು, ಬಸವರಾಜು, ಸಿಂಡೇನಹಳ್ಳಿ ಯತೀಶ್, ಬಿ ಮಟಕೇರಿ ಜಿತೇಂದ್ರ, ವಡ್ಡರಗುಡ್ಡಿ ರಘು, ಗ್ರಾಪಂ ಸದಸ್ಯ ಗಿರೀಶ್, ಮಾರುತಿ, ಹಳ್ಳದಮನುಗನಹಳ್ಳಿ ಸುರೇಶ್, ರಾಮೇಗೌಡ, ಕಾಳಿಹುಂಡಿ ಕಿಟ್ಟಿ, ಹೈರಿಗೆ ಸಿರಿ.ವೈಕುಟನಾಯಕ, ಬಿದರಹಳ್ಳಿ ಪುಟ್ಟಸಿದ್ದನಾಯಕ, ಬೂದುನೂರು ಶಿವಮಲ್ಲಪ್ಪ, ಕಲ್ಲಂಬಾಳು ಗೊವಿಂದರಾಜು, ವಕೀಲರು ಪ್ರಸಾಂತ್ ಜಿ., ಎನ್.ಪ್ರಸನಕುಮಾರ್, ಮುತ್ತಿಗೆಹುಂಡಿ ಬಸವಣ್ಣ, ಎತ್ತಿಗೆ ಶೇಖರ್, ಸಾಗರೆಶಂಖರ್, ಕಾಳಪಾಜಿ, ಶಿವಯ್ಯ, ನೆನಪುರವಿ, ದಿನೇಶ್, ಮುಳ್ಳೂರು ನಿಂಗರಾಜು ಇನ್ನೂ ಪಕ್ಷದ ಕಾರ್ಯಕರ್ತರು 4,000 ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


