ಸರಗೂರು: ನಾವೆಲ್ಲರೂ ಸಂಘಟಿತರಾಗುವ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಭೋವಿ ಜನಾಂಗವನ್ನು ಮೇಲೇತ್ತುವ ಕೆಲಸ ಮಾಡಬೇಕಿದೆ ಎಂದರು. ಮಹಾ ಸಂಸ್ಥಾನ ಭೋವಿ ಗುರುಪೀಠ ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ ಆಶೀರ್ವಚನ ನೀಡಿದರು.
ತಾಲ್ಲೂಕಿನ ಪಟ್ಟಣದ ಶಿವಯೋಗಿ ಸಿದ್ಧರಾಮೇಶ್ವರ ಭೋವಿ ಸಮಾಜ ಸೇವೆ ಸಮಿತಿ ವತಿಯಿಂದ ಶಿವಯೋಗಿ ಸಿದ್ಧರಾಮೇಶ್ವರರ 852 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಂಡಿದ್ದು ಗಣ್ಯರು ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.
ಒಬ್ಬ ನೇಯ್ಗೆ ಕಾಯಕದವ, ಇನ್ನೊಬ್ಬ ಕನ್ನಡಿ (ಕ್ಷೌರದ) ಕಾಯಕದವ. ಇವರಿಬ್ಬರಲ್ಲದೆ ಅಮುಗೇಶ್ವರಲಿಂಗ ಎಂಬ ಅಂಕಿತದ ಒಬ್ಬ ವಚನಕಾರನನ್ನು ಕವಿಚರಿತೆಕಾರರು ಹೇಳಿ ಒಂದು ವಚನವನ್ನು ಉದಾಹರಿಸಿ ಆತ ಇನ್ನೊಬ್ಬ ಆಮುಗಿದೇವಯ್ಯನೆಂದು ಅಭಿಪ್ರಾಯಪಟ್ಟಿದ್ದಾರೆ.
ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಇವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಸಕ ಹಾಗೂ ಜಂಗಲ್ ಲಾಡ್ಜ್ ಹಾಗೂ ರೆಸಾರ್ಟ್ ಗಳ ನಿಗಮದ ಅಧ್ಯಕ್ಷ ಅನಿಲ್ ಚಿಕ್ಕಮಾದು ಮಾತನಾಡಿ, ನದಿ, ಕೆರೆ ಕಟ್ಟೆಗಳನ್ನು ನಿರ್ಮಿಸಿ ಶ್ರಮಿಕ ವರ್ಗದ ಆರಾಧ್ಯ ದೈವವಾಗಿ ಗುರುತಿಸಿಕೊಂಡಿರುವ ಶಿವಯೋಗಿ ಸಿದ್ಧರಾಮೇಶ್ವರರು ವಚನದ ಮೂಲಕ ನಾಡಿಗೆ ನೀಡಿದ ಸಂದೇಶ ಅನುಕರಣೀಯವಾದದ್ದು, 12ನೇ ಶತಮಾನದ ಮಹಾಶರಣ ಸಿದ್ಧರಾಮೇಶ್ವರರು ಸಮಾಜದ ಒಳಿತಿಗಾಗಿ ಬದುಕಿದ ನಿಜವಾದ ಕಾಯಕ ಯೋಗಿ. ಹೀಗಾಗಿ ಜಾತಿ, ಮತ, ಪಂಥಗಳೆನ್ನದೆ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಎಲ್ಲರೂ ಆಚರಿಸಬೇಕು. ಅಲ್ಲದೇ, ಅವರ ಆದರ್ಶವನ್ನು ಪಾಲಿಸಬೇಕು ಎಂದರು.
12ನೇ ಶತಮಾನದಲ್ಲಿದ್ದ ಬಹಳಷ್ಟು ಪಿಡುಗುಗಳು, ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ವಚನ ಚಳುವಳಿಕಾರರಲ್ಲಿ ಸಿದ್ದರಾಮೇಶ್ವರರು ಕೂಡ ಪ್ರಮುಖರು .ಇಂತಹ ಮಹಾನ್ ಶಿವಯೋಗಿಗಳ ಜಯಂತಿಯನ್ನು ಒಂದು ಜಾತಿಗೆ ಸೀಮಿತ ಮಾಡದೇ ಇಡೀ ಸಮಾಜಕ್ಕೆ ಅವರ ಕೊಡುಗೆ ಮಾದರಿಯಾಗಬೇಕು’ ಎಂದು ಹೇಳಿದರು.
ಕಾರ್ಯಕ್ರಮ ಮುನ್ನ .ಸಿದ್ದರಾಮೇಶ್ವರರ ಜಯಂತಿ ಪಟ್ಟಣದ ಸಂತೆಮಾಳ ಸಂತೆ ಮಾಸ್ತಮ್ಮ ದೇವಸ್ಥಾನದಿಂದ ಬೆಳ್ಳಿ ರಥದಲ್ಲಿ ಸಿದ್ದರಾಮೇಶ್ವರ ಪೋಟೋ ಇರಿಸಿ ಪುಷ್ಪಾರ್ಚನೆ ಸಲ್ಲಿಸಿ ನಂತರ ಮೆರವಣಿಗೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಚಾಲನೆ ನೀಡಿ.ಆರಂಭಗೊಂಡ ಒಂದನೇ ಮುಖ್ಯ ರಸ್ತೆ ಹಾಗೂ ಮಹಾವೀರ ಸರ್ಕಲ್ ಮತ್ತು ಬಸ್ ನಿಲ್ದಾಣದ ಮುಂಭಾಗದ ಮೂಲಕ ಕೆಇಬಿ ಕಛೇರಿ ಅದೇ ಮಾರ್ಗವಾಗಿ ನಾಮಧಾರಿಗೌಡ ಸಮುದಾಯದವರೆಗೆ ನಡೆಯಿತು.
ಬಳಿಕ ಮಾತನಾಡಿದ ಸಂಸದ ಪ್ರಹ್ಲಾದ್ ಜೋಶಿ, ಸಿದ್ದರಾಮೇಶ್ವರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪಡುವಲ ಮಠದ ಮಹದೇವಸ್ವಾಮಿಜಿ, ದಡದಹಳ್ಳಿ ಮಠದ ಡಾ ಷಡಕ್ಷರ ಸ್ವಾಮೀಜಿ, ಭೋವಿ ನಿಗಮದ ಮಾಜಿ ಅಧ್ಯಕ್ಷ ಜಿ ವಿ ಸೀತಾರಾಮ, ಮಾಜಿ ಜಿಪಂ ಸದಸ್ಯರು ಎಂ.ಪಿ. ನಾಗರಾಜು, ಚಿಕ್ಕವೀರನಾಯಕ, ಪ.ಪಂ. ಸದಸ್ಯೆ ಹೇಮಾವತಿ ರಮೇಶ್, ಶಿವಯೋಗಿ ಸಿದ್ದರಾಮೇಶ್ವರ ಭೋವಿ ಸಮಾಜ ಸೇವೆ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಐಡಿಯಾ ವೆಂಕಟೇಶ್, ಗೌರವಾಧ್ಯಕ್ಷ ಕೆ. ರಾಜು, ಪ.ಪಂ. ಮಾಜಿ ಸದಸ್ಯರು ರಮೇಶ್, ನಾಗೇಂದ್ರ, ಮಧುಸೂದನ್, ವೆಂಕಟರಾಮು, ರಾಘವೇಂದ್ರ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ. ನರಸಿಂಹಮೂರ್ತಿ, ನಂದಿನಾಥಪುರ ಬಸಪ್ಪ, ಶೇಖರ್, ಸುರೇಂದ್ರ, ಬಿಳಿಯಪ್ಪ, ಮಹಾದೇವ, ಪುಟ್ಟಭೋವಿ, ಚಿಕ್ಕಬರಗಿ ನಾಗರಾಜು, ಜಯಲಕ್ಷ್ಮೀಪುರ ವೆಂಕಟರಾಮು, ಸಿದ್ದಭೋವಿ, ಕೂಸಯ್ಯ, ಗೋವಿಂದರಾಜು, ಕಪ್ಯೂಸ್ವಾಮಿ, ಆನಂದ, ಕೆ.ನಾಗೇಂದ್ರ, ಮಲ್ಲಭೋವಿ, ಹನುಮಯ್ಯ ಪಾಳ್ಯ, ಕಾಂತರಾಜು, ನಾಗರಾಜು ವಡ್ಡರಗುಡಿ, ಗಿರಿಯಭೋವಿ, ಮುರಳಿ, ರಾಮಕೃಷ್ಣ, ಎಲ್ಲಾ ಗ್ರಾಮಗಳಿಂದ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ವರದಿ: ಚಂದ್ರ ಹಾದನೂರು