ಸರಗೂರು: ತಾಲೂಕಿನ ಹೆಗ್ಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಲಾಪುರ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 14ರಲ್ಲಿ ಸರ್ಕಾರಿ ಕೆರೆಗೆ ನಕಾಶೆಯಲ್ಲಿರುವ ರಸ್ತೆ ಬಿಡಿಸುವ ವಿಚಾರವಾಗಿ ದೇವಲಾಪುರ ಗ್ರಾಮಸ್ಥರು ಮತ್ತು ದಲಿತ ಸಂಘರ್ಷ ಸಮಿತಿ ಸಂಯೋಜಕ ಸಮಿತಿ (ವಿ ನಾಗರಾಜು ಬಣ) ಹಾಗೂ ತಾಲೂಕು ಕಂದಾಯ ಇಲಾಖೆ ಹಾಗೂ (ಅಂಬೇಡ್ಕರ್ ವಾದ ) ಸಂಘಟನೆಯವರು ಮಂಗಳವಾರದಂದು ಕೆರೆಗೆ ಹೋಗುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತಹಶೀಲ್ದಾರ್ ಮೋಹನಕುಮಾರಿ ನೇತೃತ್ವದಲ್ಲಿ ಸರ್ವೆ ಮಾಡಿಸಿ ತೆರವುಗೊಳಿಸಿ ಕೊಟ್ಟರು.
ನಂತರ ಮಾತನಾಡಿದ ಅವರು, ರೈತರಿಗೆ ಅನ್ಯಾಯ ಮಾಡಬೇಕೆಂಬ ಉದ್ದೇಶ ನಮಗಿಲ್ಲ ಮತ್ತು ಸರಕಾರದ ಆದೇಶದಂತೆ ಸರ್ವೇ ಕಾರ್ಯ ಕೈಗೆತ್ತಿಕೊಂಡಿದ್ದು, ಕೆರೆಗೆ ಹೋಗುವ ದಾರಿಯನ್ನು ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ತಿಳಿಸಿದರು.
ದಡದಹಳ್ಳಿ ಗ್ರಾಮದ ಪ್ರಭುಸ್ವಾಮಿ ಎಂಬುವರ ಜಮೀನಿನ ಪಕ್ಕದಲ್ಲೇ ಕೆರೆಗೆ ಹೋಗುವ ರಸ್ತೆ ಇದ್ದಾಗಿದ್ದು, ಜಮೀನು ಮಾಲೀಕ 11 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡದರಿಂದ ದಲಿತ ಸಂಘಟನೆಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮೂರು ನಾಲ್ಕು ಬಾರಿ ಸರ್ವೆ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ದಡದಹಳ್ಳಿ ಮತ್ತು ದೇವಲಾಪುರ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ಜಮೀನು ಮಾಲಿಕ ಮತ್ತು ದೇವಲಾಪುರ ಗ್ರಾಮಸ್ಥರಿಗೆ ದನಕರುಗಳಿಗೆ ನೀರು ಕುಡಿಸಲು ಹಾಗೂ ಗ್ರಾಮದ ರೈತರು ಜಮೀನು ಕಡೆಗೆ ಹೋಗುವ ನಿಟ್ಟಿನಲ್ಲಿ ಸರ್ವೆ ಮಾಡಿಸಿ ಜಮೀನು ಮಾಲಿಕರಿಗೆ ಬರುವ ರೈತರಿಗೆ ತೊಂದರೆ ನೀಡಬಾರದು ಎಂದು ಸೂಚನೆ ನೀಡಿದರು.
ಸರಕಾರದ ಆದೇಶದಂತೆ ಮೇಲ್ಪಟ್ಟು ಕೆರೆ ದಾರಿಯನ್ನು ಒತ್ತುವರಿ ಇರುವ ಜಮೀನಿನ ಸರ್ವೆ ಮಾಡಲಾಗುತ್ತಿದೆ. ಇದು ತೆರವು ಕಾರ್ಯಚರಣೆ ಎಂದು ಭಾವಿಸಬಾರದು. ಆದರೆ ಸರಕಾರದ ಆದೇಶವನ್ನು ಪಾಲಿಸಬೇಕಿದ್ದು, ಅದರಂತೆ ಸರ್ವೇ ನಡೆಸಿ ಅ ಜಾಗವನ್ನು ಸರ್ಕಾರಕ್ಕೆ ವಶಪಡಿಸಿಕೊಂಡು ರಾಜಸ್ವ ನಿರೀಕ್ಷಕ ಮುಜೀಬ್ ಗ್ರಾಮಲೆಕ್ಕಿಗರಾಧಿಕಾರಿ ನಾಗಪ್ಪ ಹಾಗೂ ಸರ್ವೆ ನಾಗರಾಜುರವರಿಗೆ ಸರ್ವೇ ಹಾಗೂ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಯೋಜಕ (ವಿ.ನಾಗರಾಜು ಬಣ) ಜಿಲ್ಲಾ ಸಂಘಟನಾ ಸಂಯೋಜಕ ಹುನಗಳ್ಳಿ ಗೋವಿಂದ, ತಾಲೂಕು ಸಂಯೋಜಕ ಮಹೇಶ್ ಕುಮಾರ್ ದೇವಲಾಪುರ, ಎಚ್.ಡಿ.ಕೋಟೆ ತಾಲೂಕು ಸಂಯೋಜಕ ಕುಮಾರ ಹೆಗ್ಗಡಪುರ ಮತ್ತು ತಾಲೂಕು ಸಂಘಟನಾ ಸಂಯೋಜಕ ಮಂಜು ಬಾಡಗ, ಸಂಘಟನಾ ಸಂಯೋಜಕ ಜಯಕುಮಾರ್ ಕೋಳಗಾಲ, ಸೋಮೇಶ್ ಬೀರಂಬಳ್ಳಿ, ಗುಂಡು ಕೊಳ್ಳೇಗಾಲ, (ಅಂಬೇಡ್ಕರ್ ವಾದ) ಸಂಚಾಲಕ ಕೂಡಗಿ ಗೋವಿಂದರಾಜು, ದೇವಲಾಪುರ ದೊಡ್ಡ ಯಜಮಾನರು ಸಿದ್ದಯ್ಯ,ಗುಡಿ ಯಜಮಾನರು ಶಿವು, ಯಜಮಾನರು ಶಿವಣ್ಣ , ಮುಖಂಡರು ವಾಲಿಬಾಲ್ ರಮೇಶ್, ಆಟೋ ಶಿವಣ್ಣ,ಡಿ. ಜಿ.ಸೋಮಣ್ಣ, ಮಲ್ಲಯ್ಯ,ನಿಂಗಯ್ಯ, ಪ್ರಸನ್ನ, ನಾಗರಾಜು, ಸಿದ್ದು ನಾಗರಾಜು ಮುಂತಾದ ಗ್ರಾಮಸ್ಥರು ಈ ರಸ್ತೆ ತೆರವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


