ಸರಗೂರು: ತಾಲೂಕಿನ ಮುಳ್ಳೂರು ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಶಾಸಕ, ಅರಣ್ಯ ಮತ್ತು ವಸತಿ ವಿಹಾರ ಸಂಸ್ಥೆಗಳ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು.
ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಸೋಮವಾರ ಮುಳ್ಳೂರು–ಬಿರ್ವಾಳ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರಗೂರು ಈ ಮೊದಲು ಹೋಬಳಿ ಕೇಂದ್ರವಾಗಿತ್ತು. ಆನಂತರ ಕೋಟೆಯಿಂದ ಬೇರ್ಪಟ್ಟು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿತ್ತು. ಹೀಗಾಗಿ ಸರಗೂರು ಹೋಬಳಿ ಕೇಂದ್ರವಾಗಿಯೇ ಇದೆ. ಅದನ್ನು ಹೀಗಾಗಿ ಸರಗೂರು ಹೋಬಳಿ ಎಂಬುದನ್ನು ತೆಗೆದುಹಾಕಿ ಮುಳ್ಳೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಸರಕಾರದೊಂದಿಗೆ ಚರ್ಚಿಸಿ ಮಾಡಲಾಗುವುದು ಎಂದು ಅವರು ಹೇಳಿದರು.
ಪಿಯು ಕಾಲೇಜು: ಮುಳ್ಳೂರು ಭಾಗದ ಹತ್ತಾರು ಗ್ರಾಮಗಳಿಗೆ ಹೃದಯ ಭಾಗವಾಗಿದ್ದು, ಜನಸಂಖ್ಯೆಯು ಹೆಚ್ಚಿದೆ. ಇಲ್ಲಿಂದ ನೂರಾರು ವಿದ್ಯಾರ್ಥಿಗಳು ನಂಜನಗೂಡು, ಸರಗೂರು, ಹೆಡಿಯಾಲಕ್ಕೆ ಹೋಗುತ್ತಿರುವುದು ಗಮನಕ್ಕೆ ಬಂದಿದ್ದು, ಪಿಯು ಕಾಲೇಜು ಮಂಜೂರಿಗೆ ಶ್ರಮಿಸಲಾಗುವುದು. ಇದಲ್ಲದೆ ಬ್ಯಾಂಕ್ ತೆರೆಯಲು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಮುಳ್ಳೂರು ಗ್ರಾಮವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು.ಮಡಿವಾಳರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡಲಾಗುವುದು ಅಂಬೇಡ್ಕರ್ ಸಮುದಾಯ ಭವನಕ್ಕೂ ಸಹಾಯಧನ ನೀಡಲಾಗುವುದು. ಇದಕ್ಕೂ ಮೊದಲು ಮುಳ್ಳೂರು ಗ್ರಾಮಕ್ಕೆ ಎಲ್ಲಾ ಸಮುದಾಯದ ಭವನ ಹಾಗೂ ಸಿಸಿ ರಸ್ತೆಗಳಿಗೆ ಗ್ರಾಮವನ್ನು ಅಭಿವೃದ್ಧಿಗೆ ಒಟ್ಟು 16 ಕೋಟಿ ವೆಚ್ಚದಲ್ಲಿ ಅನುದಾನವನ್ನು ನೀಡಲಾಗಿದೆ ಹಾಗೂ ಮತ್ತೆ ಅನುದಾನವನ್ನು ಬೇಡಿಕೆ ನೀಡಿದ್ದೀರಿ ಅದರಂತೆ ಗ್ರಾಮವನ್ನು ಅಭಿವೃದ್ಧಿಗೆ ಆದ್ಯತೆ ನೀಡಿ ಅನುದಾನವನ್ನು ನೀಡುತ್ತಾನೆ ಎಂದರು.
ಬಹು ಮುಖ್ಯ ಬೇಡಿಕೆ ಎಂದರೆ ಈ ಭಾಗದ ಕಾಡಂಚಿನ ಭಾಗದಲ್ಲಿರುವ ಜಮೀನುಗಳು ಹೆಚ್ಚು ಕಳೆದ ಬಾರಿ ಶಾಸಕರಾಗಿ ಸಮಯದಲ್ಲಿ ಸಾವಿರಾರು ಸಾಗುವಳಿ ಪತ್ರವನ್ನು ಮುಕ್ಕಾಲು ಭಾಗ ಸಾಗುವಳಿ ವಿತರಿಸಲಾಗಿದೆ. ಇನ್ನೂ ಸಾಗುವಳಿ ಪತ್ರ ನೀಡಿಲ್ಲ ನನ್ನ ಗಮನಕ್ಕೆ ತಂದಿದ್ದಿರಾ ಕಂದಾಯ ಇಲಾಖೆ ಅಧಿಕಾರಿಗಳು ನೀಡುವ ಸಮಯದಲ್ಲಿ ಅರಣ್ಯ ಇಲಾಖೆಯವರು ಈ ಜಮೀನು ಅರಣ್ಯಕ್ಕೆ ಸೇರಿದ್ದು, ಹೇಳಿರುವುದರಿಂದ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿ ಎಂದು ಸೂಚನೆ ನೀಡಲಾಗಿದೆ. ಅದರಂತೆ ಜಂಟಿ ಸರ್ವೆ ಮಾಡುತ್ತಿದ್ದಾರೆ. ಮಾಡಿದ ಮೇಲೆ ಸಾಗುವಾಳಿ ಕೊಡಲಾಗುವುದು. ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು. ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ, ಜಿಪಂ ಇಲಾಖಾಧಿಕಾರಿಗಳು ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದಿರುವ ಜಂಗಲ್ ಕಟ್ಟಿಂಗ್ ಅನ್ನು ಮಾಡಬೇಕು. ಇವಾಗ ಹುಲಿ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ರಸ್ತೆಯ ಬದಿಯಲ್ಲಿ ಇಕ್ಕೆಲು ಬೆಳೆದಿದೆ ಸಾರ್ವಜನಿಕರು ತಿರುಗಾಡಲು ಕಷ್ಟವಾಗಿದೆ.ನಾನೆ ಈ ರಸ್ತೆಯಲ್ಲಿ ಬರುವುದರಿಂದ ಜನರು ಯಾವ ರೀತಿಯಲ್ಲಿ ತಿರುಗಾಡುತ್ತಿದ್ದಾರೆ ಎಂದು ಭಯವಾಗುತ್ತಿದೆ. ಶೀಘ್ರದಲ್ಲೇ ಜಂಗಲ್ ಕಟ್ಟಿಂಗ್ ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ದುರಸ್ತಿಯಲ್ಲಿರುವ ಸರಕಾರಿ ಶಾಲೆಯನ್ನು ಕೆಡವಿ ದೇವಸ್ಥಾನ ಕಾರ್ಯಕ್ಕೆ ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು ಭಾಗ್ಯಲಕ್ಷ್ಮಿ, ಚಿಕ್ಕವೀರನಾಯಕ, ಶಿವಪ್ಪ ಕೋಟೆ, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಅಜರುದ್ದೀನ್, ಮಸಹಳ್ಳಿ ನವೀನ್, ಮನುಗನಹಳ್ಳಿ ಗುರುಸ್ವಾಮಿ, ಬಿರ್ವಾಳ್ ಚಿಕ್ಕಣ್ಣ, ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಕಳಸೂರು ಬಸವರಾಜು, ಚನ್ನೀಪುರ ನಾಗರಾಜು, ಕುಂದೂರು ಮೂರ್ತಿ, ಗ್ರಾಪಂ ಅಧ್ಯಕ್ಷೆ ಚಿನ್ನಮ ರಾಮನಾಯಕ, ಸದಸ್ಯ ಡಿ ಚಿನ್ನಸ್ವಾಮಿ, ಭಾಗ್ಯ ಶಿವಚನ್ನಪ್ಪ, ಶ್ರೀನಿವಾಸ , ಶಿವರಾಜು, ಚಂದ್ರ, ಮುಖಂಡರು ಶಂಭುಲಿಂಗನಾಯಕ, ಪುಟ್ಟಸ್ವಾಮಿ, ರವಿಕುಮಾರ್, ಲೋಕೇಶ್, ಮಂಜು, ಚನ್ನನಾಯಕ, ಮಹೇಶ್, ಚಿಕ್ಕಣ್ಣ, ವನಸಿರಿ ಉಮೇಶ್, ಶಶಿ ಪಾಟೀಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
		
					
					


