ಸರಗೂರು: ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಜೊರಹಳ್ಳ ಗ್ರಾಮಕ್ಕೆ ಬಸ್ ವ್ಯವಸ್ಥೆ ಇರಲಿಲ್ಲ. ಗ್ರಾಮಸ್ಥರು ಶಾಸಕರಿಗೆ ಹಾಗೂ ಕೆಎಸ್ಸಾರ್ಟಿಸಿ ಇಲಾಖೆ ಅಧಿಕಾರಿಗಳಿಗೆ ಮನವಿಕ್ಕೆ ಸ್ಪಂದಿಸಿ. ಮಂಗಳವಾರದಂದು ಬಸ್ ವ್ಯವಸ್ಥೆ ಪ್ರಾರಂಭಿಸಲಾಯಿತು.
ಬಸ್ ಗೆ ಪೂಜೆ ಸಲ್ಲಿಸಿದ ನಂತರ ಚಾಲಕ ನಿರ್ವಾಹಕರಿಗೆ ಸನ್ಮಾನಿಸಿ ನಂತರ ಪ್ರಭಾವಿ ಮುಖಂಡ ದೇವಲಾಪುರ ನಾಗೇಂದ್ರ ಮಾತನಾಡಿ, ಸರಗೂರು ಪಟ್ಟಣದಿಂದ ಸಾಗರೆ ಚನ್ನೀಪುರ, ಹೆಗ್ಗನೂರು ಮಾರ್ಗವಾಗಿ ಜೊರಹಳ್ಳ ಗ್ರಾಮಕ್ಕೆ ನೇರವಾಗಿ ಬಸ್ ಸಂಪರ್ಕ ಕಲ್ಪಿಸುವ ಕುರಿತು ಈ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಈ ಗ್ರಾಮಕ್ಕೆ ಬಸ್ ಕಲ್ಪಿಸಿ ಮೂಲಕ ಕ್ರಮ ಕೈಗೊಂಡಿದ್ದಾರೆ ಎಂದರು.
ನಾವು ಶಾಸಕ ಅನಿಲ್ ಚಿಕ್ಕಮಾದುರವರಿಗೆ ಬಸ್ ಸಮಸ್ಯೆ ಇರುವುದರಿಂದ ಅವರಿಗೆ ಮನವರಿಕೆ ಮಾಡಿಕೊಂಡು ನಂತರ ಸ್ಥಳದಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕರೆ ಮೂಲಕ ಬಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ ಕೂಡಲೇ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಬಸ್ ಇಲ್ಲದಿದ್ದರಿಂದಾಗಿ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಜೊರಹಳ್ಳದಿಂದ ನಾಲ್ಕೈದು ಕಿ.ಮೀ. ದೂರದಲ್ಲಿರುವ ಜೊರಹಳ್ಳ ಗೇಟ್ ಬಳಿ ಬಿ ಮಟಕರೆ ಹಾಗೂ ಹಂಚೀಪುರ ಮಾರ್ಗವಾಗಿ ಬರುವ ಬಸ್ ಯನ್ನು ಹಿಡಿದುಕೊಂಡು ಪಟ್ಟಣಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಟ್ಟಣಕ್ಕೆ ತೆರಳಬೇಕಾದರೆ ಸಮಸ್ಯೆ ಆಗ್ತಿತ್ತು. ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆ ಸೇರಬೇಕಿತ್ತು. ಇಂದಿನಿಂದ ಸರಗೂರು ಪಟ್ಟಣಯಿಂದ ಚನ್ನೀಪುರ ಗ್ರಾಮದಿಂದ ಹೆಗ್ಗನೂರು ಮಾರ್ಗವಾಗಿ ಜೊರಹಳ್ಳಕ್ಕೆ ಬಸ್ ಸಂಚಾರ ಆರಂಭವಾಗಿದೆ. ನಿತ್ಯ ಮೂರು ಹೊತ್ತು ಜೊರಹಳ್ಳ ಗ್ರಾಮಕ್ಕೆ ಬಸ್ ಬರಲಿದೆ.
ಗ್ರಾಮಕ್ಕೆ ಬಸ್ ಬಂದಿದ್ದಕ್ಕೆ ಗ್ರಾಮಸ್ಥರಿಂದ ಹರ್ಷ:
79 ವರ್ಷಗಳ ಬಳಿಕ ಗ್ರಾಮಕ್ಕೆ ಬಸ್ ಬಂದಿದ್ದಕ್ಕೆ ಗ್ರಾಮಸ್ಥರಲ್ಲಿ ಹರ್ಷ ಮನೆ ಮಾಡಿದೆ. ಗ್ರಾಮಸ್ಥರು ತಳಿರುತೋರಣ ಕಟ್ಟಿ ಪೂಜೆ ಮಾಡಿ, ಬಸ್ನ್ನು ಬರಮಾಡಿಕೊಂಡರು. ಗ್ರಾಮಸ್ಥರನ್ನು ಹತ್ತಿಸಿಕೊಂಡು ಇಡೀ ಗ್ರಾಮಸ್ಥರು ಬಸ್ಸಿನಲ್ಲಿ ಪ್ರಯಾಣ ಮಾಡಿ ಹರ್ಷ ವ್ಯಕ್ತಪಡಿಸಿದರು.
ಈ ಕುರಿತು ಗ್ರಾಮಸ್ಥ ಪ್ರಸಾದ್ ಪ್ರತಿಕ್ರಿಯಿಸಿ, ‘ಬಸ್ ಇಂದಿನಿಂದ ಆರಂಭವಾಗಿದೆ. 79 ವರ್ಷಗಳಿಂದ ಸಮಸ್ಯೆ ಇತ್ತು. ಎಲ್ರೂ ನಡೆದುಕೊಂಡೇ ತೆರಳಬೇಕಿತ್ತು. ವಿದ್ಯಾರ್ಥಿಗಳು ಪಾಠಿಚೀಲ ಹಾಕಿ ಐದಾರು ಕಿ.ಮೀ ದೂರ ನಡೆಯಬೇಕಿತ್ತು. ಬಸ್ ಸಮಸ್ಯೆ ಇದ್ದ ಕಾರಣ ವಿದ್ಯಾರ್ಥಿಗಳು ಮನೆ ಬಿಟ್ಟಿದ್ದರು. ಇನ್ಮೇಲೆ ಶಾಲೆಗೆ ಮಕ್ಕಳು ತೆರಳಲಿದ್ದಾರೆ. ಶಾಸಕರು ಹಾಗೂ ಸಾರಿಗೆ ಅಧಿಕಾರಿಗಳ ಅವರ ಸಹಕಾರ ಹೆಚ್ಚಿದೆ’ ಎಂದರು.
ಶಾಸಕರು ಕರೆ ಮೂಲಕ ಮಾತನಾಡಿ, ‘ಜೊರಹಳ್ಳ ಗ್ರಾಮಕ್ಕೆ ಬಸ್ ಸಮಸ್ಯೆ ಸೇರಿದಂತೆ ಸೌಲಭ್ಯಗಳ ಕೊರತೆ ಇದೆ. ಈ ಸುದ್ದಿಯನ್ನು ಗ್ರಾಮಸ್ಥರು ಗಮನಕ್ಕೆ ಬಂದಾದ ತಕ್ಷಣ ಕೆಎಸ್ ಆರ್ ಟಿಸಿ ಡಿಸಿ ಬಳಿ ಮಾತನಾಡಿ, ಬಸ್ ಗೆ ಚಾಲನೆ ನೀಡಿದ್ದೇನೆ. ಗ್ರಾಮಸ್ಥರು ಆ ಊರಿನಲ್ಲಿ ಬಸ್ಸೇ ನೋಡಿದ್ದಿಲ್ಲ. ಸಾಗರೆ ಚನ್ನೀಪುರ ಹೆಗ್ಗನೂರು ಮಾರ್ಗದಲ್ಲಿ ಈ ಬಸ್ ಸಂಚರಿಸಲಿದೆ. ಟ್ರಿಪ್ ಗಳು ಹೆಚ್ಚಾಗಿ ಬೇಕಾಗಿದ್ದಲ್ಲಿ ಅದನ್ನು ಹೆಚ್ಚಳ ಮಾಡಿಸುತ್ತೇವೆ. ಗ್ರಾಮಕ್ಕೆ ಬಸ್ ಬಂದಿದ್ದರಿಂದ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಶಾಲೆಯ ಮಕ್ಕಳು ಮೂರ್ನಾಲ್ಕು ಕಿ.ಮೀ. ನಡೆಯಬೇಕಿತ್ತು, ಬಸ್ ಬಿಟ್ಟಿದ್ದು, ಸಮಸ್ಯೆ ಸರಿಪಡಿಸಿದ್ದೇವೆ’ ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಚೆಲುವರಾಜು ಮಾತನಾಡಿದರು.
ಈ ಸಂದರ್ಭದಲ್ಲಿ ಯಜಮಾನರು ರಂಗಯ್ಯ, ಚಿಕ್ಕಣ್ಣ, ಗ್ರಾಮದ ಮುಖಂಡರು ವಿಷಕಂಠ, ಶ್ರೀನಿವಾಸ, ನಾಗಯ್ಯ, ಸೋಮಣ್ಣ ನಾಗೇಂದ್ರ,ರಾಮು, ಸಿದ್ದಯ್ಯ, ಚಿನ್ನಯ್ಯ, ಸೋಮಯ್ಯ, ಕೃಷ್ಣೇಗೌಡ, ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC