ಸರಗೂರು: ಪಟ್ಟಣ 11 ವಾರ್ಡಿನ ಬಿಡಗಲು ಗ್ರಾಮದ ಪಡವಲು ವೀರಕ್ತ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದಿಂದ ಅಭಾವೀಲಿಂ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ರವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡು, ಪೋಟೋಗೆ ಪುಷ್ಪಾರ್ಚನೆ ಶ್ರದ್ಧಾಂಜಲಿ ಗೌರವ ಸಲ್ಲಿಸಲಾಯಿತು.
ನಂತರ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರದಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ಎನ್.ತಿಪ್ಪಣ್ಣನವರು ರಾಷ್ಟ್ರೀಯ ಮಹಾಸಭಾ ಉಪಾಧ್ಯಕ್ಷರಾಗಿ ಮಹಾಸಭಾಕ್ಕೆ ಕೆಲಸ ಕಾರ್ಯಗಳು ಮಾಡಿಕೊಂಡು ಬಂದರು. ಅವರು ಇಲ್ಲ ಎಂದು ತಾಲ್ಲೂಕು ಘಟಕದಿಂದ ಸಂತಾಪ ಸೂಚಿಸಿದ್ದಾರೆ.
ಶ್ರದ್ಧಾಂಜಲಿ ಸಭೆಯನ್ನು ಸಮಾಜದ ಕಚೇರಿಯಲ್ಲಿ ಮಾಡಲಾಗಿತ್ತು. ಇವರು ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯ ಅಧ್ಯಕ್ಷರಾಗಿ ಸೇವಿಸಲ್ಲಿಸಿದ್ದು, ಸೇವೆ ಸಲ್ಲಿಸಿ ನಮ್ಮನ್ನು ಅಗಲಿದ್ದಾರೆ ಎಂದರು
ಪಡವಲು ಮಠ ಮಹಾದೇವಸ್ವಾಮಿಗಳು, ಹಂಚಿಪುರ ಕಿರಿಯ ತೋಂಟದಾರ್ಯ ಶ್ರೀಗಳು, ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಹಾಸಭಾದ ಅಧ್ಯಕ್ಷ ವೀರಭದ್ರಪ್ಪ, ಕೋಶಾಧ್ಯಕ್ಷ ಸಿ.ಕೆ.ಗಿರೀಶ್, ಟೌನ್ ಅಧ್ಯಕ್ಷ ಮೋಹನ್ ಕುಮಾರ್, ನಿರ್ದೇಶಕರು ಡಿ.ಸಿ.ಸಿದ್ದಪ್ಪ, ಮಹದೇವಸ್ವಾಮಿ, ಶ್ರೀಕಂಠ ಚಂದ್ರಪ್ಪ, ಸತೀಶ್, ಮಹದೇವಪ್ಪ, ಮಂಜುನಾಥ್, ಸುರೇಶ್, ಬಸವರಾಜ್, ಜಯಕುಮಾರ, ಪ್ರತಾಪ್, ಸಿದ್ದಪ್ಪ, ಶಿವಾನಂದ್, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC