ಹೆಚ್ ಡಿ ಕೋಟೆ/ ಸರಗೂರು: ಮನುಷ್ಯ ಮನುಷ್ಯನನ್ನು ಪ್ರೀತಿಸಿ ಗೌರವಿಸಬೇಕು, ಮನುಷತ್ವ ಮೆರೆದು ಮಾನವೀಯತೆ ಉಳಿಸಿ ಬೆಳೆಸಬೇಕಿದೆ ಎಂದು DCP ಸಿದ್ದರಾಜು ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ 21-22 ನೇ ಸಾಲಿನ ಸರ್ವಧರ್ಮದ ಸಮಾಜ ಸೇವೆಗಾಗಿ ಹೃದಯವಂತರು ಸೇವಾ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಕರ ಮಾತುಗಳನ್ನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಇಂತಹ ಸಂದರ್ಭದಲ್ಲಿ ಸರ್ವಧರ್ಮದ ಹೃದಯವಂತರು ಸೇವಾಸಂಸ್ಥೆ ಹಲವಾರು ಕಷ್ಟದ ಕುಟುಂಬಗಳಿಗೆ ನೆರವು ನೀಡುವುದರ ಮೂಲಕ ಸಾಮಾಜಿಕ ಕಳಕಳಿ ಮತ್ತು ಮಾನವೀಯತೆ ಮೆರೆಯುತ್ತಿದೆ ಎಂದು ಶ್ಲಾಘಿಸಿದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಚಿಕ್ಕದೇವ್ ಹೆಗ್ಗಡಾಪುರ ಇವರ ನೇತೃತ್ವದಲ್ಲಿ ಸಭೆ ನಡೆಯಿತು. ಇದೇ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾಗಿ ಆಗತ್ತೂರು ಜವರನಾಯಕರನ್ನು ಆಯ್ಕೆ ಮಾಡಲಾಯಿತು. ಬಳಿಕ ಸಂಸ್ಥಾಪಕ ಅಧ್ಯಕ್ಷರಾದ ಚಿಕ್ಕದೇವ್ ಹೆಗ್ಗಡಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಸೇವಾಸಂಸ್ಥೆಯ ಬೆಳವಣಿಗೆ ಮತ್ತು ಸೇವಾಕಾರ್ಯ ಹಾಗೂ ಸೇವಾಸಂಸ್ಥೆಯ ನೂರಾರು ಹೃದಯವಂತ ಸದಸ್ಯರ ಸಹಕಾರದ ಬಗ್ಗೆ ವಿವರಿಸಿದರು.
ಸಂಸ್ಥಾಪಕ ಅಧ್ಯಕ್ಷ ಚಿಕ್ಕದೇವ್ ಹೆಗ್ಗಡಾಪುರ, ಗೌರವಾಧ್ಯಕ್ಷ ಬಸವರಾಜು ಹೆಚ್.ಬಿ. ಹೆಚ್.ಡಿ.ಕೋಟೆ, ಗೌರವ ಸಲಹೆಗಾರರು ಸಿದ್ದರಾಜು(DCP)ಸಿದ್ದಯ್ಯನಹುಂಡಿ, ಪರಶಿವಮೂರ್ತಿ, ಸಮಿತಿಯ ಅಧ್ಯಕ್ಷ ಜವರನಾಯಕ ಅಗತ್ತೂರು, ಕಾರ್ಯಾಧ್ಯಕ್ಷ ಸಾಗರೆ ಮಹೇಂದ್ರ, ಉಪಾಧ್ಯಕ್ಷಾರು ಮಹದೇವರಾಜ್ ಚೌಡಹಳ್ಳಿ, ಉಮೇಶ್ ಮನುಗನಹಳ್ಳಿ, ಪ್ರಧಾನ ಕಾರ್ಯದರ್ಶಿ ನಂದಿನಿ ಹೆಗ್ಗಡಾಪುರ, ಸಹ ಕಾರ್ಯದರ್ಶಿ ವಿನೋದ್ ರಾಜ್ ಕೆ.ಎಮ್.ಹಳ್ಳಿ, ಕಮ್ರಾನ್ ಸಿದ್ದಿಬ್ ಕೋಟೆ, ಖಜಾಂಚಿ ಸಣ್ಣಸ್ವಾಮಿ ಬಸವಾಡಿ, ತಾ.ಸಂಘಟನಾ ಕಾರ್ಯದರ್ಶಿ ರಾಜಕುಮಾರ್ ಗೌಡ.ಮಧ್ಯಮ ಸಂಯೋಜಕರು ರಾಜೇಶ್ ಹೆಬ್ಬಲಗುಪ್ಪೆ.ಕಾನೂನು ಸಹಲೆಗಾರು ಸೋಮಶೇಖರ್ ಆರ್ ಕೆ ಎಮ್ ಹಳ್ಳಿ.
“ಹೋಬಳಿ ಸಂಚಾಲಕರ ಸಂಘಟನೆ ಸಮಿತಿ”
ಕಸಬಾ ಹೋಬಳಿ ಬಸವರಾಜು ಹೆಚ್ ಹೆಗ್ಗಡಾಪುರ, ಸರಗೂರು ರೈತ ಪ್ರತಾಪ್ ಹೂವಿನಕೊಳ, ಅಂತರಸಂತೆ ನಿಂಗರಾಜು ಮಚ್ಚರೆ, ಕಂದಲಿಕೆ ರಾಜಮೂರ್ತಿ ಚನ್ನಿಪುರ, ಹಂಪಾಪುರ ಕರಾಟೆ ಮಾನವೀಯಕ್ಕರ್.
“ಸಲಹೆ ಸಮಿತಿ”
ಪತ್ರಿಕಾ ಮಾಧ್ಯಮ ಸತೀಶ್ ಆರಾಧ್ಯ ಕೋಟೆ, ಸಾಕರ ವರ್ಗ ಚಂದ್ರಕುಮಾರ್ ಕಾಳಿಹುಂಡಿ, ಸಂಘಟನೆ ಚಾ ಶಿವಕುಮಾರ್ ಕೋಟೆ, ವರ್ತಕರು ರಾಜೇಶ್ ಶರ್ಮಾ ಕೋಟೆ, ಶ್ರಮಿಕ ವರ್ಗ ಆಟೋ ಗೋಪಾಲ ಕೋಟೆ, ದಾನಿಗಳು/ ಸೇವೆ ಧಣಿಕಾಂತ್, ಕೋಟೆ ಕರಾಟೆ ಪ್ರೇಮ ಸಾಗರ್ ಯರಹಳ್ಳಿ, ಕ್ರೀಡೆ ನಾಗೇಂದ್ರ ಮುಳ್ಳೂರು, ಕಲೆ ಅಮ್ಮ ರಾಮಚಂದ್ರ ದೇವಲಾಪುರ, ಸಂಘಟನೆ/ಸೇವೆ ಜಿವಿಕಾ ಬಸವರಾಜು ಕೆ.ಎಮ್.ಹಳ್ಳಿ, ಸಂಘಟನೆ/ ಪತ್ರಿಕಾ ಮಾಧ್ಯಮ ದೊಡ್ಡಸಿದ್ದು ಹಾದನೂರು, ಸೇವೆ (ಎನ್ ಜಿ ಓ ಸಂಸ್ಥೆ) ಡೊಮಿನಿಕ್ ನಾಗನಹಳ್ಳಿ, ಆರೋಗ್ಯ ಸೇವೆ ಪ್ರಸಾದ್ ಕೋಟೆ, ಕೃಷಿ/ ಸಂಘಟನೆ ನಾಗರಾಜ್ ಚನ್ನಿಪುರ, ಪುಟ್ಟಬಸವನಾಯಕ ಕೋಟೆ, ಕ್ರೀಡೆ ಶಿವಣ್ಣನಾಯಕ ಜಿಯಾರ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy