ಸರಗೂರು: ತಾಲೂಕಿನ ಪಟ್ಟಣದ 11 ನೇ ವಾರ್ಡಿನ ವ್ಯಾಪ್ತಿಯ ಬರುವ ಬಿಡುಗಲು ಗ್ರಾಮದ ಪಡವಲು ವೀರಕ್ತ ಮಠದದಲ್ಲಿ ಶನಿವಾರದಂದು ಶ್ರೀ ಹನುಮ ಸೇವಾ ಸಮಿತಿ ವತಿಯಿಂದ ಡಿ.20 ರಂದು ನಡೆಯಲಿರುವ ಎಂಟನೇ ವರ್ಷದ ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆಯ ಕರಪತ್ರವನ್ನು ವಿರಕ್ತ ಮಠದ ಮಹದೇವಸ್ವಾಮಿಗಳು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ನಂತರ ಮಾತನಾಡಿದ ಶ್ರೀ ಹನುಮ ಸೇವಾ ಸಮಿತಿ ಅಧ್ಯಕ್ಷ ಬಿಡಗಲು ರಾಜು, ಈ ಬಾರಿ ಎಚ್.ಡಿ.ಕೋಟೆಯಲ್ಲಿ ವಿಜೃಂಭಣೆಯಿಂದ ಶ್ರೀ ಹನುಮ ಜಯಂತ್ಯೋತ್ಸವ ನಡೆಯಲಿದ್ದು, ಮೆರವಣಿಗೆಯಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ಹಾಗೂ ಬೇರೆ ತಾಲೂಕಿನಿಂದ ಹನುಮ ಅಭಿಮಾನಿಗಳ ಕಾರ್ಯಕರ್ತರು ಭಾಗವಹಿಸಿದ್ದಾರೆ.
ಡಿ.18 ಗುರುವಾರ ಬೆಳಗ್ಗೆ 7:30 ರಿಂದ 9 ಗಂಟೆ ವರೆಗೆ ಹನುಮ ಮಾಲ ಧಾರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಾಲೆ ಧರಿಸುವ ಭಕ್ತರು ಪೂರ್ವಸಿದ್ಧತೆ ಮಾಡಿಕೊಂಡು ಆಯೋಜಕರು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಅದೇ ದಿನ ಪವಮಾನ ಹೋಮ ಬೆಳಿಗ್ಗೆ 9 ರಿಂದ 10:30ರವರಗೆ ಏರ್ಪಡಿಸಲಾಗಿದೆ. ಮಧ್ಯಾಹ್ನ 12 ಗಂಟೆ ಧಾರ್ಮಿಕ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಕ್ಷೇತ್ರಿಯ ಧರ್ಮ ಪ್ರಸಾರ ಪ್ರಮುಖ್ ಸೂರ್ಯನಾರಾಯಣ್ ರವರಿಂದ. 20 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ವಿವಿಧ ರೀತಿಯ ಕಲಾ ತಂಡಗಳ ಹನುಮ ಮೂರ್ತಿ ಭವ್ಯ ಮೆರವಣಿಗೆ ನಡೆಯುತ್ತದೆ.ಮೆರವಣಿಗೆ ಜೊತೆಯಲ್ಲಿ ಮುರುಗಾ ಮಠ ಶ್ರೀ ನಟರಾಜು ಸ್ವಾಮಿಗಳು, ಶ್ರೀ ಪಡುವಲ ವಿರಕ್ತ ಮಠದ ಶ್ರೀ ಮಹದೇವಸ್ವಾಮಿಗಳು, ದಡದಹಳ್ಳಿ ಮಠದ ಶ್ರೀಷಡಕ್ಷರಿ ಸ್ವಾಮಿಗಳು, ಬೀಚನಹಳ್ಳಿ ಪುರ ಪಟ್ಟದ ಮಠ ಶ್ರೀ ನಾಗೇಂದ್ರ ಸ್ವಾಮಿಗಳು, ಪುರದ ಮಠ ಶ್ರೀ ಚಂದ್ರಶೇಖರ ಸ್ವಾಮಿಗಳು, ಹಂಚೀಪುರ ಮಠದ ಶ್ರೀ ತೋಂಟದಾರ್ಯ ಸ್ವಾಮೀಜಿ, ಮಾದಪುರ ಮಠದ ಚಂದ್ರಮೌಳೇಶ್ವರ ಸ್ವಾಮಿಗಳು, ಜಕ್ಕಹಳ್ಳಿ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಭಾಗವಹಿಸಲಿದ್ದಾರೆ.
ಕನಕ ಭವನದ ಬಳಿ ಇರುವ ಬಣ್ಣಾರಿ ಅಮ್ಮನ ಪೂಜೆ ಸಲ್ಲಿಸಿ ನಂತರ ಗಣ್ಯರಿಂದ ಆಂಜನೇಯ ಸ್ವಾಮಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಶೋಭಾಯಾತ್ರೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಶ್ರೀ ಲಕ್ಷ್ಮೀ ವರದರಾಜ ಸ್ವಾಮಿ ದೇವಸ್ಥಾನದಲ್ಲಿ ಸಂಪನ್ನವಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಶ್ರೀ ಹನುಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಸಾದ ಮಿನಿಯೋಗ ಇರುತ್ತದೆ.
ಭಕ್ತರು ಹನುಮ ಮಾಲಾಧಾರಣೆ ಮಾಡುವುದು.ಹಾಗೂ ತಮ್ಮ ಮನೆ ಅಂಗಡಿ ದೇವಾಲಯ ರಸ್ತೆ ಬೀದಿಗಳಲ್ಲಿ ಕೇಸರಿ ಧ್ವಜ ಮತ್ತು ತೋರಣಗಳನ್ನು ಕಟ್ಟಿ ಸ್ವಾಗತಿಸುವುದು. ಶೋಭಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹನುಮ ಪಾತ್ರರಾಗಬೇಕೆಂದು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶ್ರೀ ಹನುಮ ಸೇವಾ ಸಮಿತಿ ಅಧ್ಯಕ್ಷ ಬಿಡಗಲು ರಾಜು, ಸಮಿತಿ ಮಾಜಿ ಅಧ್ಯಕ್ಷ ಶ್ರೀಕಾಂತ್ , ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್, ಸಂತೋಷ್, ಪ್ರಶಾಂತ್, ಶ್ರೀನಾಥ್, ಮಣಿ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


