ಸರಗೂರು: ಪಟ್ಟಣದ ಆರನೇ ವಾರ್ಡಿನ ನಿವಾಸಿಯಾದ ಟೆಂಪೋ ಡ್ರೈವರ್ ತಮ್ಮಯ್ಯಶಟ್ಟಿ (48) ಎಂಬುವವರು ಕಳೆದ ಜನವರಿ 17 ರಿಂದ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಸಹಕರಿಸುವಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ತಮ್ಮಯ್ಯಶಟ್ಟಿ ಅವರು ಜ.17ರಂದು ಮನೆಯಿಂದ ಹೋದವರು ವಾಪಸ್ ಬಂದಿಲ್ಲ. ಸಂಬಂಧಿಕರ ಮನೆ ಹಾಗೂ ಸಂಭಾವ್ಯ ಎಲ್ಲಾ ಸ್ಥಳಗಳಲ್ಲಿ ಹುಡುಕಾಡಿದರೂ ಅವರು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಾಪತ್ತೆಯಾದ ವ್ಯಕ್ತಿಯ ಅತ್ತೆ ಮಗ ಎಸ್.ಆರ್.ಆನಂದ್ ಅವರು, ತಮ್ಮ ಸಂಬಂಧಿಕನನ್ನು ಪತ್ತೆ ಮಾಡಿಕೊಡಬೇಕೆಂದು ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪತ್ತೆಯಾದ ವ್ಯಕ್ತಿಯ ಚಹರೆ ವಿವರ:
- ಎತ್ತರ: 5.5 ಅಡಿ.
- ಮುಖದ ಚಹರೆ: ಬಿಳಿ ಬಣ್ಣ, ಕೋಲು ಮುಖ.
- ಗುರುತುಗಳು: ಎಡಕೈಯಲ್ಲಿ ‘ರಾಜಮ್ಮ’ ಮತ್ತು ಬಲಕೈಯಲ್ಲಿ ‘ನಾರಾಯಣ’ ಎಂದು ಹೆಸರು ಹಚ್ಚೆ ಹಾಕಿಸಿಕೊಂಡಿದ್ದಾರೆ.
- ಧರಿಸಿದ್ದ ಬಟ್ಟೆ: ನೀಲಿ ಬಣ್ಣದ ಶರ್ಟ್ ಹಾಗೂ ಸಿಮೆಂಟ್ ಬಣ್ಣದ ಜೀನ್ಸ್ ಪ್ಯಾಂಟ್.
ಸಂಪರ್ಕಿಸಲು ವಿನಂತಿ: ಈ ವಿವರವುಳ್ಳ ವ್ಯಕ್ತಿಯು ಎಲ್ಲಿಯಾದರೂ ಕಂಡುಬಂದಲ್ಲಿ ಕೂಡಲೇ ಸರಗೂರು ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08228-265542 ಅಥವಾ ಮೊಬೈಲ್ ಸಂಖ್ಯೆ: 9480805064 ಕ್ಕೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


