ಸರಗೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎರಡನೇ ವಾರ್ಡಿನ ಸದಸ್ಯೆ ಚೈತ್ರ ಸ್ವಾಮಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಹಾಗೂ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ಆಯೋಜಿಸಿದ್ದ ಪಕ್ಷ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಎರಡನೇ ವಾರ್ಡಿನ ಸದಸ್ಯೆ ಚೈತ್ರ ಸ್ವಾಮಿ ಹಾಗೂ ಪತಿಯಾದ ಸ್ವಾಮಿ ಕೂಡಾ ಕಾಂಗ್ರೆಸ್ ಗೆ ಬರಮಾಡಿಕೊಳ್ಳಲಾಯಿತು.
ನಂತರ ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಹಾಗೂ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಮಾತನಾಡಿ, ಕಾಂಗ್ರೆಸ್ ತತ್ವ, ಆದರ್ಶ ಮತ್ತು ನೈತಿಕ ಮೌಲ್ಯಗಳನ್ನು ಮೆಚ್ಚಿ ಯಾರೇ ಬಂದರೂ ಪಕ್ಷಕ್ಕೆ ಸ್ವಾಗತಿಸಲಾಗುವುದು, ಈ ಸಭೆ ಶಾಸಕ ಅನಿಲ್ ಚಿಕ್ಕಮಾದುರವರ ಸಮ್ಮುಖದಲ್ಲಿ ನಡೆಯಬೇಕಾದ ಸಭೆ, ಕಾರಣಾಂತರದಿಂದ ಇಲ್ಲದ ಕಾರಣ ಪ.ಪಂ. ಸದಸ್ಯರು ಹಾಗೂ ಪಟ್ಟಣ ಮುಖಂಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ತೊರೆದ ಕಾಂಗ್ರೆಸ್ ಪಕ್ಷಕ್ಕೆ ಚೈತ್ರ ಸ್ವಾಮಿ ರವರಿಗೆ ಪಕ್ಷದ ಶಾಲು ಹೊದಿಸಿ ಹಾಗೂ ಬಾವುಟ ಹಿಡಿದು ಬರಮಾಡಿಕೊಂಡೆವು ಎಂದರು.
ಪಕ್ಷವನ್ನು ಸೇರ್ಪಡೆಗೊಂಡ ನಂತರ ಮಾತನಾಡಿದ ಪಪಂ ಸದಸ್ಯ ಚೈತ್ರ ಸ್ವಾಮಿ, ಪಟ್ಟಣ ಅಭಿವೃದ್ಧಿಗೋಸ್ಕರ ಪಕ್ಷವನ್ನು ಸೇರ್ಪಡೆಗೊಂಡಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ತಾಲೂಕಿನ ಕಾಂಗ್ರೆಸ್ ಪಕ್ಷದ ಶಾಸಕರಾದ ಅನೀಲ್ ಚಿಕ್ಕಮಾದುರವರು ಇದ್ದು, ಪಟ್ಟಣದಲ್ಲಿ ಬಿಜೆಪಿ ಪಕ್ಷದ ಆಡಳಿತವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಯಾವುದೇ ಅಭಿವೃದ್ಧಿ ಕೆಲಸಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿಲ್ಲ. ಜೆಡಿಎಸ್ ಪಕ್ಷದಲ್ಲಿ ಇದ್ದು ನಮ್ಮ ವಾರ್ಡಿನಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಶಾಸಕರ ಜೊತೆಗೂಡಿ ಪಟ್ಟಣವನ್ನು ಅಭಿವೃದ್ಧಿಗೊಳಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಪಕ್ಷಕ್ಕೆ ಬಂದಿದ್ದಾನೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಬರುವುದರಿಂದ ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರವನ್ನು ತನ್ನ ವಶಪಡಿಸಿಕೊಳ್ಳಲು ಗ್ರಾಮ ಮತ್ತು ಪಟ್ಟಣದ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಮಾಡಬೇಕು ಎಂಬ ದೃಷ್ಟಿಯಿಂದ ಕಾರ್ಯಕರ್ತರಿಗೆ ಹೆಚ್ಚಿನ ಪಕ್ಷದಲ್ಲಿ ಮಾನ್ಯತೆ ನೀಡುತ್ತಾ ಬರುತ್ತಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಮನವರಿಕೆ ಮಾಡಿಕೊಂಡು ಸರಗೂರು ನೂತನವಾಗಿ ತಾಲೂಕುಯಾಗಿದೆ ಅದರಿಂದ ನಾಲ್ಕು ಇಲಾಖೆ ಇವೆ.ಎಲ್ಲಾ ಇಲಾಖೆಗಳು ಬರಬೇಕು ಹಾಗೂ ಕ್ಷೇತ್ರಕ್ಕೆ ಅಭಿವೃದ್ಧಿಗೊಳಿಸಲು ಅನುದಾನವನ್ನು ಹೆಚ್ಚಿನ ಬಿಡುಗಡೆ ಮಾಡಬೇಕು ಮನವಿ ಮಾಡಿಕೊಳ್ಳುತ್ತೇನೆ.
— ಅನೀಲ್ ಚಿಕ್ಕಮಾದು, ಶಾಸಕ
ಈ ಸಂದರ್ಭದಲ್ಲಿ ಪಪಂ ಸದಸ್ಯರು ಶ್ರೀನಿವಾಸ್, ಚೆಲುವ ಕೃಷ್ಣ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಟೌನ್ ಮಾಜಿ ಅಧ್ಯಕ್ಷ ಮಂಜುನಾಥ, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಸಮಿತಿ ಜಿಲ್ಲಾ ಕಾರ್ಯದರ್ಶಿ ಮಕ್ ಪಿರುಲ್ಲಾ, ಮುಖಂಡರು ಬಿಲ್ಲಯ್ಯ, ಕೃಷಿ ಪತ್ತಿನ ಸಹಕಾರ ಸಂಘ ಉಪಾಧ್ಯಕ್ಷ ಜೆಲೀಲ್,ಆರ್ಯ ಮಹೇಶ್, ಅಮೀರ್ ಸುಹೇಲ್, ಗೋಪಾಲಯ್ಯ, ರಂಗಸ್ವಾಮಿ, ನಾಗರಾಜರಾಮ್, ಪ್ರಸಾದ್, ಉಮೇಶ್,ಜಯೀದ್, ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


