ಸರಗೂರು: ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಈ ದಿನ ಜನಿಸಿದರು ಎಂಬುದಕ್ಕಾಗಿ ಈ ದಿನಕ್ಕೆ ವಾಲ್ಮೀಕಿ ಜಯಂತಿ ಎನ್ನುವ ಹೆಸರು ಬಂದಿದೆ ಎಂದು ಪಪಂ ಸದಸ್ಯ ಶ್ರೀನಿವಾಸ ತಿಳಿಸಿದರು.
ಪಟ್ಟಣದ 9 ನೇ ವಾರ್ಡಿನ ಚಿಕ್ಕ ದೇವಮ್ಮ ಸರ್ಕಲ್ ಬಳಿ ನಾಯಕ ಸಮಾಜದ ಹಾಗೂ ಯುವಕರು ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ವಾಲ್ಮೀಕಿ ಫೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರ ಜನ್ಮದಿನವನ್ನು ಶರದ್ ಪೂರ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಆದಾಗ್ಯೂ, ಶರದ್ ಪೂರ್ಣಿಮೆಯ ದಿನದಂದು ಲಕ್ಷ್ಮಿ ಮತ್ತು ಚಂದ್ರನನ್ನು ಪೂಜಿಸಲಾಗುತ್ತದೆ.
ವಾಲ್ಮೀಕಿ ಜಯಂತಿ ಪ್ರಖ್ಯಾತ ಋಷಿ ಮತ್ತು ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನಕ್ಕೆ ಮೀಸಲಾದ ದಿನವಾಗಿದೆ. ಅವರು ಭಗವಾನ್ ಶ್ರೀರಾಮನ ಪರಮ ಭಕ್ತರಾಗಿದ್ದರು ಎನ್ನುವ ನಂಬಿಕೆಯಿದೆ ಎಂದರು.
ಈ ದಿನದ ಮೂಲಕ, ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರು ನೀಡಿದ ಜ್ಞಾನ ಮತ್ತು ಶಿಕ್ಷಣಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ರಾಮಾಯಣದ ಮೂಲಕ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಬಗ್ಗೆ ತಿಳಿಸಿದ ಮಹಾನ್ ಸಂತರೇ ವಾಲ್ಮೀಕಿ ಮಹರ್ಷಿಗಳು.
ಈ ಸಂದರ್ಭದಲ್ಲಿ ಶ್ರೀನಿವಾಸ್, ನವೀನ್ ಕುಮಾರ್, ವೆಂಕಟೇಶ್, ಬೆಟ್ಟನಾಯಕ, ಚನ್ನಪ್ಪನಾಯಕ, ಶಿವಣ್ಣ, ಏಕದಂತ ಗ್ರೂಪ್ಸ್ ಹಾಗೂ ವಿನಾಯಕ ಗ್ರೂಪ್ಸ್ ನ ಸದಸ್ಯರು ಹಾಗೂ ನಾಯಕ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿ
ಸರಗೂರು: ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರದಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಹಮ್ಮಿಕೊಂಡಿದ್ದು ವಾಲ್ಮೀಕಿ ಫೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ಸರಳವಾಗಿ ಆಚರಣೆ ಮಾಡಲಾಯಿತು.
ಪಪಂ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರು ಶ್ರೀನಿವಾಸ, ಚೆಲುವ ಕೃಷ್ಣ, ನೂರಳಾಸ್ವಾಮಿ, ಮುಖ್ಯಾಧಿಕಾರಿ ಎಸ್.ಕೆ.ಸಂತೋಷ ಕುಮಾರ್, ಮುಖಂಡರು ನವೀನ್, ಶ್ರೀನಾಥ್, ಸ್ವಾಮಿ, ಸಿಬ್ಬಂದಿ ವರ್ಗದವರು ಪಳಿನಿಸ್ವಾಮಿ, ರಾಮು, ಶಿವಪ್ರಸಾದ್, ಅರುಣ್ ಆರಾಧ್ಯ, ಅರ್ಜುನ್, ನಾಗೇಶ್, ಶಶಿ, ಹಾಗೂ ಪೌರಕಾರ್ಮಿಕರು ಇನ್ನೂ ಇತರರು ಇದ್ದರು.
ಜೆಎಸ್ ಎಸ್ ಶಿಕ್ಷಣ ಸಂಸ್ಥೆ ವತಿಯಿಂದ ವಾಲ್ಮೀಕಿ ಜಯಂತಿ:
ಸರಗೂರು: ಪಟ್ಟಣದ ಜೆಎಸ್ ಎಸ್ ಶಿಕ್ಷಣ ಸಂಸ್ಥೆಗಳು ಸರಗೂರು ವತಿಯಿಂದ ಮಂಗಳವಾರ ದಂದು ಆದಿಕವಿ ಮಹರ್ಷಿ ವಾಲ್ಮೀಕಿ ರವರ ಜಯಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ನಂತರ ಮಾತನಾಡಿದ ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಕೆ .ಎಸ್., ರಾಮಾಯಣವನ್ನು ರಚಿಸಿದ ಕಾರಣ ವಾಲ್ಮೀಕಿಯನ್ನು “ಆದಿ ಕವಿ” (ಮೊದಲ ಕವಿ) ಎಂದು ಗೌರವಿಸಲಾಗುತ್ತದೆ. ಅವರು ಸಂಸ್ಕೃತದ ಒಬ್ಬ ಋಷಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ ಎಂದರು.
ವಾಲ್ಮೀಕಿ ಮುನಿಯು ತಮಸಾ ನದಿಯ ದಡದಲ್ಲಿದ್ದಾಗ ಅಲ್ಲಿಗೆ ನಾರದರು ಬರುತ್ತಾರೆ. ಆಗ ಅವರು ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳಿಗೆ ವಿವರಿಸುತ್ತಾರೆ. ಅದನ್ನು ವಾಲ್ಮೀಕಿ ಶ್ಲೋಕರೂಪದಲ್ಲಿ ಪ್ರಸ್ತುತ ಪಡಿಸುತ್ತಾರೆ ಎಂಬ ಮಾತು ಇದೆ. ಇದರೊಂದಿಗೆ ತಮಸಾ ನದಿಯ ದಡದಲ್ಲಿ ಸಂತೋಷದಿಂದ ಹಾರಾಡುತ್ತಿದ್ದ ಜೋಡಿ ಕ್ರೌಂಚ ಪಕ್ಷಿಗಳಿಗೆ ಬೇಡನೊಬ್ಬ ಬಾಣ ಹೂಡುತ್ತಾನೆ. ಆಗ ಗಂಡು ಪಕ್ಷಿ ಪ್ರಾಣ ಕಳೆದುಕೊಳ್ಳುತ್ತದೆ. ಹೆಣ್ಣು ಕ್ರೌಂಚ ಪಕ್ಷಿಯ ನೋವು ಕಂಡ ವಾಲ್ಮೀಕಿ ಮಹರ್ಷಿ ಬೇಡನಿಗೆ ಶೋಕದಿಂದ ಶಾಪ ಕೊಡಲು ಮುಂದಾಗುತ್ತಾರೆ, ಶಾಪವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ. ಇದು ರಾಮಾಯಣ ರಚಿಸಲು ಮೂಲವಾಯಿತು ಎಂಬ ಮಾತು ಇದೆ ಎಂದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ನಾಗರತ್ನ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಜಯಣ್ಣ, ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC