ಹಿರಿಯೂರು: ಹಿರಿಯೂರು ನಗರದಲ್ಲಿ ಮೊದಲ ಹಂತದ ಒಳಚರಂಡಿ ವ್ಯವಸ್ಥೆ ಜಾರಿಗೆ ಸಚಿವರಾದ ಎಂ.ಟಿ.ಬಿ. ನಾಗರಾಜ್ ಮತ್ತು ಬೈರತಿ ಬಸವರಾಜ್ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
‘2018ರಲ್ಲಿ ಹಿರಿಯೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆ ಜಾರಿಗೆ ಡಿಪಿಆರ್ ತಯಾರಿಸಲಾಗಿತ್ತು. ಆದರೆ ಎರಡೂವರೆ ವರ್ಷ ಕೋವಿಡ್ ನಿಂದ ಒಳಚರಂಡಿ ಕಾಮಗಾರಿ ಪ್ರಗತಿ ಸಾಧ್ಯವಾಗಿರಲಿಲ್ಲ. ಒಳಚರಂಡಿ ವ್ಯವಸ್ಥೆ ಕಾಮಗಾರಿ ನಡೆಸುವಾಗ ಇತರೆ ನಗರಗಳಲ್ಲಿ ನಾಗರಿಕರು ಏನೇನು ತೊಂದರೆ ಅನುಭವಿಸಿದ್ದಾರೆ. ಕಾಮಗಾರಿ ನಡೆಸುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ, ಅಲ್ಲಿನ ಲೋಪದೋಷಗಳು ಇಲ್ಲಿ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು’ ಎಂದು ತಿಳಿಸಿದರು.
‘ಒಳಚರಂಡಿ ಕಾಮಗಾರಿ ಕೆಲಸವು ಸುಲಭವಾಗಿ ನಡೆಯುವಂತದಲ್ಲ. ಮ್ಯಾನ್ ಹೋಲ್ ನಿರ್ಮಿಸುವಾಗ ಸಾರ್ವಜನಿಕರ ವಿರೋಧ ವ್ಯಕ್ತವಾಗಬಹುದು. ಅಂತಹ ಸಂದರ್ಭಗಳಲ್ಲಿ ಆಯಾ ವಾರ್ಡ್ ಸದಸ್ಯರು ಮುಂದೆ ನಿಂತು ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ಎಂದು ಮನವಿ ಮಾಡಿದರು.ಈ ಕಾಮಗಾರಿಯು ₹ 122 ಕೋಟಿ ವೆಚ್ಚದಲ್ಲಿ ನಡೆಯುತಿದೆ.
‘ವೇದಾವತಿ ಬಡಾವಣೆಯಲ್ಲಿ ನಡೆಯುವ ಸಂತೆಯನ್ನು ಚಳ್ಳಕೆರೆ ರಸ್ತೆಯಿಂದ ಸ್ವಲ್ಪ ದೂರಕ್ಕೆ ಸ್ಥಳಾಂತರಿಸಿದಲ್ಲಿ ಸಂಚಾರ ಅಡಚಣೆ, ವಾಹನ ನಿಲುಗಡೆ ಸಮಸ್ಯೆ ತಪ್ಪಿಸಬಹುದು’ ಎಂದು ನಿತ್ಯಾನಂದ ಯಾದವ್ ಹೇಳಿದರು. ಸಭೆಯಲ್ಲಿ ಒಳಚರಂಡಿ ವ್ಯವಸ್ಥೆ ಜಾರಿಗೆ, 2020-21ನೇ ಸಾಲಿನ ಬೀದಿ ದೀಪಗಳ ನಿರ್ವಹಣೆ ಟೆಂಡರ್‌ಗೆ ಅನುಮೋದನೆ ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಷಂಸುನ್ನೀಸಾ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಪೌರಾಯುಕ್ತ ಉಮೇಶ್ ಹಾಗೂ ಸದಸ್ಯರು ಉಪಸ್ಧಿತರಿದ್ದರು ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


