ಚುನಾವಣಾ ಆಯೋಗವು ಇಂದು ಸರಣಿ ವಚ್ರ್ಯುವಲ್ ಸಭೆಗಳನ್ನು ನಡೆಸುತ್ತಿದ್ದು, ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭೌತಿಕ ರ್ಯಾಲಿಗಳು, ರೋಡ್ಷೋಗಳ ಮೇಲೆ ತಾನು ವಿಧಿಸಿರುವ ನಿಷೇಧವನ್ನು ಮುಂದುವರಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಿದೆ.
ಜ.8ರಂದು ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಿದ ಚುನಾವಣಾ ಆಯೋಗವು ಜ.15ರ ತನಕ ಭೌತಿಕ ರ್ಯಾಲಿಗಳು, ರಸ್ತೆ ಮತ್ತು ಬೈಕ್ ಶೋಗಳ ಮೇಲೆ ನಿಷೇಧ ಹೇರಿತ್ತು.
ಜ.15ರಂದು ಆಯೋಗವು ಈ ನಿಷೇಧವನ್ನು ಜ.22ರವರೆಗೆ ಮುಂದುವರಿಸಿತ್ತು. ಆದಾಗ್ಯೂ ಅದು ರಾಜಕೀಯ ಪಕ್ಷಗಳಿಗೆ ನಿರ್ಬಂಧಗಳನ್ನು ಕೊಂಚ ಸಡಿಲಿಸಿ ಗರಿಷ್ಠ 300 ಜನ ಅಥವಾ ಸಭಾಂಗಣದ ಪೂರ್ಣ ಸಾಮಥ್ರ್ಯದ ಶೇ.50ರಷ್ಟು ಜನರನ್ನೊಳಗೊಂಡು ಒಳಾಂಗಣ ಸಭೆಗಳನ್ನು ನಡೆಸಲು ಅನುಮತಿ ನೀಡಿತ್ತು.
ಚುನಾವಣಾ ಆಯೋಗವು ಕೇಂದ್ರ ಆರೋಗ್ಯ ಸಚಿವಾಲಯ, ತಜ್ಞರು, ಚುನಾವಣೆಗಳು ನಡೆಯಲಿರುವ ಪಂಚರಾಜ್ಯಗಳು ಮತ್ತು ಸಂಬಂಧಪಟ್ಟ ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರು ಮಾಹತಿ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅಕೃತ ಮೂಲಗಳು ತಿಳಿಸಿವೆ.
ವರದಿ :ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy