ಯಮಕನಮರಡಿ: ಹತ್ತರಗಿ ಗ್ರಾಮದ ಸರ್ವೇ ನಂ. 445 ರಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿದ ಯಮಕನಮರಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ, ಬಿಜೆಪಿ ಮುಖಂಡ ರವೀಂದ್ರ ಹಂಜಿ ಅವರ ವಿರುದ್ಧ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಕಿರಣ ರಜಪೂತ್ ಆಗ್ರಹಿಸಿದರು.
ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಮಕನಮರಡಿ ಅರ್ಬನ್ ಬ್ಯಾಂಕ್, ರಾಜೀವ್ ಗಾಂಧಿ ಆಸ್ಪತ್ರೆ, ವಿದ್ಯಾ ವರ್ಧಕ್ ಸಂಸ್ಥೆ ಹೆಸರಲ್ಲಿ ಒಟ್ಟರೆ 8 ಗುಂಟೆ ಜಾಗ ಸರ್ವೇ ನಂ. 445ರಲ್ಲಿ 1996ರಲ್ಲಿ ಖರೀದಿ ಮಾಡಿದ್ದಾರೆ. ಆದರೆ ಈ ಮೂರು ಸಂಸ್ಥೆಗಳ ಹೆಸರಲ್ಲಿ ಹೆಚ್ಚುವರಿಯಾಗಿ 26 ಗುಂಟೆ ಜಾಗ ಅತಿಕ್ರಮಣ ಮಾಡಿದ್ದಾರೆಂದು ದಾಖಲೆ ಸಮೇತ ಆರೋಪ ಮಾಡಿದರು.
ಈ ಜಾಗ ಖರೀದಿಸುವಾಗ ಐದು ಜನ ಬಿಡುದಾರರು ಭಾಗವಹಿಸಿದ್ದು, ಅವರ ಗಮನಕ್ಕೆ ಬಾರದೆ ನಕಲಿ ಸಹಿ ಮಾಡಿ 4 ಗುಂಟೆ ಜಾಗವನ್ನು ಖರೀಸಿದ್ದಾರೆ. 2007-2008ರಿಂದ 2023ರವರೆ ಸಾಲಿನಲ್ಲಿ ಇದೇ ಆಸ್ತಿಗೆ ಸಂದಂಧಿಸಿದಂತೆ ಗ್ರಾಪಂಗೆ ತೆರಿಗೆ ಕಟ್ಟಿದ್ದು, 2011-12ರಲ್ಲಿ 4 ಗುಂಟೆ ಜಾಗ ಮಾರಾಟಕ್ಕೆ ಸಹಕಾರ ಇಲಾಖೆಯಿಂದ ಪರವಾನಿಗೆ ಪಡೆದು ಲಿಲಾವು ಮುಖಾಂತರ ಮಾರಾಟ ಮಾಡಿದ್ದೇವೆ ಎಂಬ ದಾಖಲೆಗಳನ್ನು ಸೃಷ್ಟಿಸಿದ್ದಾರೆ. 2018ರಲ್ಲಿ ರಾಜೀವ್ ಗಾಂಧಿ ಆಸ್ಪತ್ರೆ ಹೆಸರಿನಲ್ಲಿ ಹತ್ತರಗಿ ಗ್ರಾಪಂನಲ್ಲಿ ದಾಖಲಾಗಿದ್ದ 4 ಗುಂಟೆ ಜಾಗದ ನೋಂದಣಿಯನ್ನು ರದ್ದುಗೊಳಿಸಬೇಕೆಂದು ಪಿಡಿಓಗೆ ಯಮಕನಮರಡಿ ಅರ್ಬನ್ ಬ್ಯಾಂಕ್‌ನಿಂದ ಪತ್ರ ಬರೆದಿರುತ್ತಾರೆ. ಒಟ್ಟಾರೇ ರವೀಂದ್ರ ಹಂಜಿಯವರು ಮಾಡಿದ್ದ ಅಕ್ರಮಗಳನ್ನು ತನಿಖೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯಮಕನಮರಡಿ -ಹತ್ತರಗಿ ಗ್ರಾಮಸ್ಥರಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಅತಿಕ್ರಮಣ ಕುರಿತು ಸಬಂಧಪಟ್ಟ ಇಲಾಖೆಗೆ ಹಾಗೂ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹುಕ್ಕೇರಿ ತಹಶೀಲ್ದಾರ್, ಪಂಚಾಯತ್ ರಾಜ್ಯ ಇಲಾಖೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸರ್ಕಾರದ ಆದೇಶದಂತೆ ಈಗಾಗಲೇ ಸರ್ವೇ ಮಾಡಿಸಲಾಗಿದ್ದು, ಸರ್ಕಾರಿ ಜಾಗ ಅತಿಕ್ರಮಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದರು.
ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳು ಈ ಸರ್ವೇ ನಂ. ವಿವರ ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಹತ್ತರಗಿ ಗ್ರಾಮದ ಸರ್ವೇ ನಂ 445ರಲ್ಲಿಅನಧಿಕೃತ ಒತ್ತುವರಿಯಾಗಿ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಇದು ನಮ್ಮ ವ್ಯಾಪ್ತಿಗೆ ಬರುವದಿಲ್ಲ ಎಂದು ಒಬ್ಬರ ಮೇಲೆ ಇನ್ನೊಬ್ಬರು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಶೀಘ್ರವೇ ಬಿಜೆಪಿ ಮುಖಂಡ ರವೀಂದ್ರ ಹಂಜಿ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಇದೇ ವೇಳೆ ಕಿರಣ ರಜಪೂತ್, ಸಾಮಾಜಿಕ ಕಾರ್ಯಕರ್ತ ಶಿವಶಂಕರ ಜುಟ್ಟಿ, ವೀರಣ್ಣ ಬಿಸಿರೊಟ್ಟಿ, ರಾಜೇಸಾಬ್ ಅಬ್ದುಲ್ ಗಣಿ ಪಣಿಬಂದ್ ಎಚ್ಚರಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


