ಬೆಂಗಳೂರು: ಬ್ರಿಟನ್ನಿನಲ್ಲಿದ್ದಾಗ ಸಾವರ್ಕರ್ ಗೋ ಮಾಂಸ ತಿಂದಿದ್ದರು, ಅವರು ಗೋಪೂಜೆಯನ್ನು ವಿರೋಧಿಸುತ್ತಿದ್ದರು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗೋವು ಮಾತೆಯಲ್ಲ, ಅದು ಅದರ ಕರುವಿನ ಮಾತೆ ಎಂದು ಸಾವರ್ಕರ್ ಹೇಳಿದ್ದರು.
ಭಗತ್ ಸಿಂಗ್ ನಿಜವಾದ ದೇಶಭಕ್ತರು, ಸಾವರ್ಕರ್ ಅಲ್ಲ. ರವಿಕುಮಾರ್ ಇದರ ಇತಿಹಾಸವನ್ನು ಓದಿಕೊಳ್ಳಲಿ ಎಂದಿದ್ದಾರೆ.
ಇನ್ನು ಜನೋತ್ಸವ ಮಾಡಲು ಸರ್ಕಾರದ ಪ್ರಯತ್ನ ನಡೆದಿತ್ತು. ಜನರ ಆಕ್ರೋಶದಿಂದ ಎರಡು ಮೂರು ಬಾರಿ ಮುಂದೂಡಿಕೆಯಾಗಿದೆ. ಇದೀಗ ಜನೋತ್ಸವ ಬಿಟ್ಟು ಸಾವರ್ಕರ್ ಉತ್ಸವ ಮಾಡುತ್ತಿದ್ದಾರೆ. ಬಿಜೆಪಿಯವರದ್ದು ವಾಟ್ಸಾಪ್ ಯೂನಿರ್ಸಿಟಿ ಹಾಗಾಗಿ ಅದರಲ್ಲಿ ಏನೂ ಇರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy