ತುಮಕೂರು: ನನಗೆ ಮುಖ್ಯಮಂತ್ರಿ ಆಗೋ ಅಭಿಲಾಷೆ ಇಲ್ಲ. ಆದ್ರೆ ನಮ್ಮ ಸಮಾಜದಿಂದ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಅನ್ನೋದು ನಮ್ಮ ಆಸೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ವಾಲ್ಮೀಕಿ ಸಮುದಾಯದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ನಾಯಕ ಸಮುದಾಯದವರು ಕೆಲವರು ಬಂದಿಲ್ಲ ಅಂದ್ರೆ ಅವರು ನಮ್ಮ ಸಮಾಜದ ಪರವಾಗಿಲ್ಲ ಅಂತಲ್ಲ. ಅವರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಇದ್ದಾರೆ ಎಂದರು.
ಪೂಜ್ಯ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಸಮುದಾಯದ ಬೇಡಿಕೆಗಳನ್ನು ತಿಳಿಸಿದ್ದಾರೆ. ಆ ಅನಿಸಿಕೆಗಳನ್ನ ಈಡೇರಿಸುವ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಮುಖ್ಯಮಂತ್ರಿಯವರನ್ನ ಭೇಟಿ ಮಾಡಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡ್ತೀವಿ ಅನ್ನೋ ಭರವಸೆಯಿದೆ. 2008ರ ವಿಧೇಯಕದಿಂದ ಹೆಚ್ಚಿನ ಶಾಸಕರು ಆಯ್ಕೆಯಾಗಲು ಸಾಧ್ಯವಾಗಿದೆ ಎಂದರು.
1998ರಲ್ಲಿ ನಾನು ಒಳ್ಳೆ ರೀತಿಯಲ್ಲೋ, ಕೆಟ್ಟ ರೀತಿಯಲ್ಲೋ ವಿಧಾನ ಪರಿಷತ್ ಸದಸ್ಯನಾದೆ. ನಮ್ಮ ಜಿಲ್ಲೆಯಲ್ಲಿರುವ ಅಸಹಾಯಕ ಸಮುದಾಯಗಳು ನನಗೆ ಈ ಸ್ಥಾನಮಾನ ನೀಡಿದ್ದಾರೆ. ಎಲ್ಲಾ ಜಾತಿಯವರು ನನಗೆ 80ರಿಂದ 90% ಮತ ನನಗೆ ನೀಡಿ ನನ್ನನ್ನ ಗೆಲ್ಸಿದ್ದಾರೆ ಎಂದರು.
ಸಿದ್ದರಾಮಯ್ಯನವ್ರು ಮೂರು ಜನ ಎಸ್ ಟಿ ಸಮುದಾಯದವ್ರನ್ನ ಮಂತ್ರಿ ಆಗಿದ್ದಾರೆ. ನಮ್ಮದೇ ಕಾಂಗ್ರೆಸ್ ಮುಖ್ಯಮಂತ್ರಿ ಒಬ್ಬರು ಒಂದೇ ಒಂದು ಮಂತ್ರಿ ಸ್ಥಾನ ಕೊಟ್ಟಿರಲಿಲ್ಲ. ಸಿದ್ದರಾಮಯ್ಯ ನಮ್ಮ ಸಮಾಜಕ್ಕೆ ಕೊಟ್ಟಿರೋ ಗೌರವ ಅದುವೆಂದರು.
ಮುಂದಿನ ದಿನಗಳಲ್ಲಿ ಅಹಿಂದ ಸಮುದಾಯದವರು ಎಲ್ಲಾ ಒಟ್ಟಾದಾಗ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಗೋಕೆ ಸಾಧ್ಯ. ನಮ್ಮ ಜಿಲ್ಲೆಯಲ್ಲಿ ಬಲಾಡ್ಯರು ಹೆಚ್ಚಿದ್ದಾರೆ. ಮೊದಲೆಲ್ಲ ನಮ್ಮ ಸಮುದಾಯದಲ್ಲಿ ಒಬ್ಬರೋ, ಇಬ್ಬರದ್ದು ಕಾರು ಇರ್ತಿದ್ವು. ಈಗ ಇಲ್ಲಿ ನೋಡಿದ್ರೆ ಜನಗಳಿಗಿಂತ ಜಾಸ್ತಿ ಕಾರುಗಳಿವೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


