ಸರಗೂರು: ತಾಲ್ಲೂಕಿನ ಪಟ್ಟಣದ 7 ನೇ ವಾರ್ಡಿನ ಇರುವ ಸತ್ಯಪ್ಪ ಕೊಂಡೋತ್ಸವ ಗಾಣಿಗ ಸಮಾಜ ವತಿಯಿಂದ ಮಂಗಳವಾರ ದಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಕೊಂಡೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಉತ್ಸವದ ಅಂಗವಾಗಿ ದೇವಾಲಯವನ್ನು ಸಿಂಗರಿಸಲಾಗಿತ್ತು. ಬೆಳಗ್ಗೆ ಮಡೆ ಸೇವೆ, ತಂಬಿಟ್ಟು ಆರತಿ ನಡೆಯಿತು.
ನಂತರ ಕಬಿನಿ ಜಲಾಶಯದ ಹೊಳೆಯಲ್ಲಿ ವಾದ್ಯ ಮೇಳದೊಂದಿಗೆ ಸತ್ಯಪ್ಪ ವಿಗ್ರಹವನ್ನು ಕಬಿನಿ ಜಲಾಶಯದ ಹೊಳೆಯ ಬಳಿ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು. ನಂತರ ಹರಕೆ ಹೊತ್ತವರ ಪೈಕಿ ನಾಲ್ವರು ಕೊಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು.
ಪಟ್ಟಣದ ಎಲ್ಲಾ ವಾರ್ಡಿನ ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗಿಯಾಗಿದ್ದರು. ಗ್ರಾಮದ ತುಂಬ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಎಲ್ಲೆಂದರಲ್ಲಿ ಭಕ್ತ ಸಮೂಹ ನೆರೆದಿತ್ತು. ಜಾತ್ರೆ ವಹಿವಾಟು ಜೋರಾಗಿತ್ತು.
ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಮುಖಂಡರು ವೆಂಕಟರಾಮು, ಶಿವಲಿಂಗ ಶೆಟ್ಟಿ, ಗುತ್ತಿಗೆದಾರ ಶಿವಣ್ಣ, ನಂಜುಂಡ, ಬಿಎಸ್ ಎನ್ ಎಲ್ ನಾಗರಾಜು, ಟೀ ಅಂಗಡಿ ವೆಂಕಟೇಶ್ , ಸಮಾಜದ ಯಜಮಾನರು ಹಾಗೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA