ಸರಗೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವಂತೆ, ಹಾಗೂ ಪರಿಶಿಷ್ಟರು, ಹಿಂದುಳಿದವರ ಕಲ್ಯಾಣಕ್ಕಾಗಿ ನ್ಯಾ.ಎಚ್.ಎನ್.ನಾಗಮೋಹನ್‍ದಾ ಸ್ ವರದಿಯನ್ನು ಕೂಡಲೇ ಜಾರಿಗೊಳಿಸುವಂತೆ ನಾಯಕ ಸಮಾಜದ ಸ್ವಾಮೀಜಿಗಳು ನಡೆಸುತ್ತಿರುವ ಧರಣಿ ಸತ್ಯಗ್ರಹವನ್ನು ಬೆಂಬಲಿಸಿ ಪಟ್ಟಣದಲ್ಲಿ ತಾಲ್ಲೂಕಿನ ನಾಯಕ ಸಂಘಟನೆಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಮೊದಲ ಮುಖ್ಯರಸ್ತೆ, ಎರಡನೇ ಮುಖ್ಯರಸ್ತೆ ನಂತರ ಸಂತೇಮಾಳದಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಬಳಿಕ ಬಸ್‍ನಿಲ್ದಾಣದ ಎದುರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ನಂತರ ತಾಲ್ಲೂಕು ಕಚೇರಿಗೆ ಆಗಮಿಸಿ ತಾಹಸೀಲ್ದಾರ್ ಚಲುವರಾಜು ರವರು ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಪುರದಕಟ್ಟೆ ಬಸವರಾಜು, ಬಿಜೆಪಿ ಸರಕಾರ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸಂವಿಧಾನ ಬದ್ಧವಾಗಿ ಸರಕಾರ ನೀಡಬೇಕಾಗಿರುವ ಪರಿಶಿಷ್ಟರ ಶೇ.7.5, ಪರಿಶಿಷ್ಟ ಜಾತಿಗೆ ಶೇ.17 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಪಪಂ ಸದಸ್ಯ ನಾಯಕ ಸಂಘ ಉಪಾಧ್ಯಕ್ಷ ಶ್ರೀನಿವಾಸ ಮಾತನಾಡಿ, ಸರ್ಕಾರ ಮೀಸಲಾತಿಯನ್ನು ನೀಡದೆ ಜನಾಂಗದವರಿಗೆ ವಂಚಿಸುತ್ತಿದೆ. ಮೀಸಲಾತಿ ಪಡೆಯುವ ಸಲುವಾಗಿ ಸಮಾಜದ ಶ್ರೀಪ್ರಸನಾನಂದ ಸ್ವಾಮೀಜಿಗಳು ನೂರು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ . ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ. ಆದ್ದರಿಂದ ಅವರ ಹೋರಾಟವನ್ನು ಬೆಂಬಲಿಸಿ ಅವರ ಮಾರ್ಗದರ್ಶನದಂತೆ ರಾಜ್ಯದಾದ್ಯಂತ ಹೋರಾಟ ಮಾಡುತ್ತಿದ್ದೇವೆ. ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂವಿಧಾನ ರಕ್ಷಣಾ ಸಮಿತಿಯ ಅಧ್ಯಕ್ಷ ಶಿವಣ್ಣ ಮಾತನಾಡಿ, ಸಂವಿಧಾನ ನಮ್ಮನ್ನು ರಕ್ಷಣೆ ಮಾಡಬೇಕಿತ್ತು. ಆದರೆ ಇಂದು ನಾವು ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂಬ ಸ್ಥಿತಿಗೆ ಬಿಜೆಪಿ ಸರ್ಕಾರ ತಂದು ನಿಲ್ಲಿಸಿದೆ ಎಂದರು.
ಪ್ರತಿಭಟನೆಗೆ ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಸಾಥ್ ನೀಡಿದರು. ಜೊತೆಗೆ ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಾಥ್ ನೀಡಿದರು. ಮನವಿ ಪತ್ರವನ್ನು ಸ್ವೀಕರಿಸಿ ಬಳಿಕ ಮಾತನಾಡಿದ ತಹಸೀಲ್ದಾರ್ ಚಲುವರಾಜು, ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸಿದ್ದೀರಾ? ನಿಮ್ಮ ಮನವಿಯನ್ನು ನಾನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಅಂಕನಾಯಕ, ಕಾರ್ಯದರ್ಶಿ ಸಿದ್ದರಾಜು, ಸಂವಿಧಾನ ರಕ್ಷಣಾ ಸಮಿತಿಯ ಗ್ರಾಮೀಣಾ ಮಹೇಶ್, ಆದಿ ಜಾಂಬವ ಸಮಿತಿಯ ಕುರ್ಣೇಗಾಲ ಬೆಟ್ಟಸ್ವಾಮಿ, ಗೌರವಾಧ್ಯಕ್ಷ ಬಸವನಾಯಕ, ಖಜಾಂಚಿ ಎಸ್.ಎ.ನಾಗೇಂದ್ರ, ನಿರ್ದೇಶಕರಾದ ಪಾಪಣ್ಣ, ಕುನ್ನಪಟ್ಟಣ ಪಿ.ಬೆಟ್ಟನಾಯಕ, ಕುಮಾರ್, ಸತ್ಯರಾಜ್, ಕಾನೂನು ಸಲಹೆಗಾರ ಶಂಕರ್, ನಾಯಕ ಸಮಾಜದ ಟೌನ್ ಅಧ್ಯಕ್ಷ ಬೆಟ್ಟನಾಯಕ, ಮುಖಂಡರಾದ ಎಚ್.ಎಸ್.ರಮೇಶ್, ಸಿ.ಬಸವರಾಜು, ನಾಯಕ ಸಂಘ ಅಧ್ಯಕ್ಷ ಬಸವರಾಜು ನಾಯಕ ಸಂಘದ ನಿರ್ದೇಶಕ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ಸಾಗರೆ ಶಂಕರ್, ಸಂ ಸಂರಕ್ಷಣಾ ಸಮಿತಿ ಅಧ್ಯಕ್ಷ ಸರಗೂರು ಶಿವಣ್ಣ, ಬಿಡುಗಲು ಶಿವಣ್ಣ, ಮುಖಂಡರು ರಮೇಶ್, ಚನ್ನೀಪುರ ಮಲ್ಲೇಶ್, ಹಳೆಹೆಗ್ಗುಡಿಲು ಸೋಮಣ್ಣ, ನಾಯಕ ಸಂಘದ ಮಾಜಿ ಅಧ್ಯಕ್ಷ ಶಂಭುಲಿಂಗನಾಯಕ, ಆದಿಜಾಂಬವ ಸಂಘದ ಅಧ್ಯಕ್ಷ ವೆಂಕಟಪ್ಪ, ದಲಿತ ಮುಖಂಡರು ಕೃಷ್ಣ ಯ್ಯಹೊಸಹೆಗ್ಗುಡಿಲು ಸಿದ್ದರಾಜು., ಗ್ರಾಪಂ ಸದಸ್ಯ ಚಲುವಪ್ಪ, ನವೀನ್ ಕುಮಾರ್ ಸೋಮಣ್ಣ ಸಾಗರೆ ಸಹಿತ ಗ್ರಾಮದ ವಿವಿಧ ಸಂಘಟನೆ ಮುಖಂಡರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5