ಸರಗೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಿಸುವಂತೆ ಹಾಗೂ ಪರಿಶಿಷ್ಟರು, ಹಿಂದುಳಿದವರ ಕಲ್ಯಾಣಕ್ಕಾಗಿ ನ್ಯಾಯಧೀಶ ಎಚ್.ಎನ್.ನಾಗಮೋಹನ್ದಾಸ್ ವರದಿಯನ್ನು ಕೂಡಲೇ ಜಾರಿಗೊಳಿಸುವಂತೆ ನಾಯಕ ಸಮಾಜದ ಸ್ವಾಮೀಜಿಗಳು ನಡೆಸುತ್ತಿರುವ ಧರಣಿ ಸತ್ಯಗ್ರಹವನ್ನು ಪರಮ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರ ಹೋರಾಟವನ್ನು ಬೆಂಬಲಿಸಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಪುರದಕಟ್ಟೆ ಬಸವರಾಜು ಹೇಳಿದರು.
ನಾಯಕ ಸಮಾಜದ ಸಂಘದ ವತಿಯಿಂದ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸಂವಿಧಾನ ಬದ್ಧವಾಗಿ ಸರಕಾರ ನೀಡಬೇಕಾಗಿರುವ ಪರಿಶಿಷ್ಟರ ಶೇ.7.5, ಪರಿಶಿಷ್ಟ ಜಾತಿಗೆ ಶೇ.17 ಮೀಸಲಾತಿ ನೀಡಬೇಕು. ಆದರೆ, ಮೀಸಲಾತಿಯನ್ನು ನೀಡದೆ ಜನಾಂಗದವರಿಗೆ ವಂಚಿಸುತ್ತಿದೆ. ಮೀಸಲಾತಿ ಪಡೆಯುವ ಸಲುವಾಗಿ ಸಮಾಜದ ಶ್ರೀಪ್ರಸನಾನಂದ ಸ್ವಾಮೀಜಿಗಳು ನೂರು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ. ಆದ್ದರಿಂದ ಅವರ ಹೋರಾಟವನ್ನು ಬೆಂಬಲಿಸಿ ಅವರ ಮಾರ್ಗದರ್ಶನದಂತೆ ರಾಜ್ಯದಾಂದ್ಯತ ಹೋರಾಟ ಮಾಡುತ್ತಿದ್ದೇವೆ. ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಅಂಕನಾಯಕ, ಕಾರ್ಯದರ್ಶಿ ಸಿದ್ದರಾಜು, ಮಾಜಿ ನಾಯಕ ಸಮಾಜದ ಅಧ್ಯಕ್ಷ ಶಂಭುಲಿಂಗ ನಾಯಕ, ಗೌರವಾಧ್ಯಕ್ಷ ಬಸವನಾಯಕ, ಖಜಾಂಚಿ ಎಸ್.ಎ.ನಾಗೇಂದ್ರ, ನಿರ್ದೇಶಕರಾದ ಪಾಪಣ್ಣ, ಕುನ್ನಪಟ್ಟಣ ಪಿ.ಬೆಟ್ಟನಾಯಕ, ಕುಮಾರ್, ಸತ್ಯರಾಜ್, ಕಾನೂನು ಸಲಹೆಗಾರ ಶಂಕರ್, ನಾಯಕ ಸಮಾಜದ ಟೌನ್ ಅಧ್ಯಕ್ಷ ಬೆಟ್ಟನಾಯಕ, ಮುಖಂಡರಾದ ಎಚ್.ಎಸ್.ರಮೇಶ್, ಸಿ.ಬಸವರಾಜು, ಸಂಘದ ಮುಖಂಡರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


