ತುಮಕೂರು: ಜಿಲ್ಲೆಯ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿಯ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಹೊಣಕೆರೆ ಗ್ರಾಮದಲ್ಲಿ 2015-16 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರುದ್ರ ಭೂಮಿ ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರ ತುಮಕೂರು ಇವರಿಗೆ ಗುತ್ತಿಗೆ ನೀಡಿದ್ದು, ಈ ಕಾಮಗಾರಿಯನ್ನು ಕೈಗೆತ್ತಿಗೊಂದಿದ್ದು ಆದರೆ ಈವರೆಗೆ ಕಾಮಗಾರಿ ಪೂರ್ಣಗೊಳಿಸದೇ ನಿರ್ಲಕ್ಷ್ಯ ವಹಿಸಲಾಗಿದೆ.
ಸ್ಮಶಾನ ಸುತ್ತ ಕಾಂಪೌಂಡ್ ಹಾಗೂ ಒಂದು ಕಟ್ಟಡ ನಿರ್ಮಾಣವಾಗಿದೆ ಆದ್ರೆ ಈ ಕಾಮಗಾರಿ ಕೈಗೊಳ್ಳುವ ಮುನ್ನ ಈ ಸ್ಥಳದ ವೀಕ್ಷಣೆ ಮಾಡಿ ಸ್ಮಶಾನಕ್ಕೆ ಯೋಗ್ಯವಾಗಿದೆಯ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಲ್ಲಾಗಲಿ, ಕಂದಾಯ ಇಲಾಖೆಯ ಅಧಿಕಾರಿಗಳೇ, ಆಗಲಿ ಶಾಸಕರೆ ಆಗಲಿ ಇತರೆ ಜನಪ್ರತಿನಿಧಿಗಳೆ ಆಗಲಿ ಕಿಂಚಿತ್ತೂ ಚಿಂತಿಸದೇ ನಿರ್ಲಕ್ಷತೆ ತೋರಿದ್ದಾರೆ.
ಸ್ಮಶಾನದೊಳಗೆ ಕಂದಕ ತೋಡಿ ಬಳಸದಂತೆ ತಡೆದಿರುವುದು
ಈ ಜಾಗವನ್ನು ಗುರುತು ಮಾಡಿದ ವೇಳೆ ಯಾವುದೇ ತಾಲೂಕು ಮಟ್ಟದ ದಲಿತ ಮುಖಂಡಿಗಾಗಲಿ, ಊರಿನ ದಲಿತರಿಗಾಗಲಿ ಮಾಹಿತಿಯನ್ನೇ ನೀಡಿಲ್ಲ. ಈಗ ಗುರ್ತಿಸಿರುವ ಜಾಗದಲ್ಲಿ ಯಾರೋ ಕಿಡಿಗೇಡಿಗಳು ಸುಮಾರು 20ರಿಂದ 30 ಅಡಿ ಆಳದ ಕಂದಕವನ್ನು ತೋಡಿ ಕಟ್ಟೆಯಂತೆ ಮಾಡಿದ್ದಾರೆ ಈಗ ಸತತವಾಗಿ ಸುರಿದ ಮಳೆಯಿಂದ ಈ ಕಟ್ಟೆಯು ನೀರಿನಿಂದ ತುಂಬಿದೆ. ಕೆಲವು ದಿನಗಳ ಹಿಂದೆ ದಲಿತ ವ್ಯಕ್ತಿ ಮೃತರಾಗಿದ್ದು, ಅಂತ್ಯಸಂಸ್ಕಾರ ಮಾಡಲು ಅವರಿಗೆ ಸ್ವಂತ ಜಾಗವಿಲ್ಲದೆ ಇದೆ ಜಾಗದ ನೀರಿನಲ್ಲೇ ಸಂಸ್ಕಾರ ಮಾಡಿದ್ದಾರೆ.
ಅಂತ್ಯಸಂಸ್ಕಾರಕ್ಕೆ ಸ್ಥಳವಿಲ್ಲದೇ ನೀರಿನ ಬದಿಯಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿರುವುದು
ಈ ಜಾಗವನ್ನು ಗುರುತಿಸಿದ ಇಲಾಖೆಯವರಿಗೆ ಹಾಗೂ ಕಾಮಗಾರಿ ವಹಿಸಿಕೊಂಡ ಏಜೆನ್ಸಿಯವರಿಗೂ ದಲಿತರು ಹಿಡಿ ಶಾಪ ಹಾಕುತ್ತಿದ್ದಾರೆ. ಈ ಘಟನೆಯ ಬಗ್ಗೆ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳವರಿಗೂ ಮೇಲಧಿಕಾರಿಗಳ ಗಮನಕ್ಕೆ ತರಲು ಮುಂದಾಗಿದ್ದಾರೆ. ಜೊತೆಗೆ ಇದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲು ಕೂಡ ಚಿಂತಿಸಲಾಗಿದ್ದು, ತಕ್ಷಣವೇ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದರೆ, ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಬಳಕೆಯೇ ಆಗದೇ ಉಳಿದಿರುವ ಕಟ್ಟಡ
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700