ತುಮಕೂರು: ದಲಿತ ಶೋಷಿತ ತಳ ಸಮುದಾಯಗಳ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಎಸ್ಸಿ, ಎಸ್ಟಿ ಉಪಯೋಜನಾ ಕಾಯ್ದೆಯನ್ನು 2002- 23 ನೇ ಸಾಲಿನ ಬಜೆಟ್ ನಲ್ಲಿ ಸೇರಿಸಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಡಿಎಸ್ 4 ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಡಿಎಸ್ 4 ಮುಖಂಡ ಸತೀಸ್ ಕಂಟಲಗೆರೆ, ಸರ್ವಧರ್ಮ ಸಹಿಷ್ಣುತೆಯಿಂದ ಸ್ವಾಭಿಮಾನದಿಂದ ಸಮಾನವಾಗಿ ಬದುಕುತ್ತಿರುವ ಈ ಭಾರತದಲ್ಲಿ, ಎಸ್ಸಿ ಎಸ್ಟಿ ಸಮುದಾಯಗಳಿಗೆ ಸ್ವಾತಂತ್ರ್ಯ ನಂತರ ಅಂಬೇಡ್ಕರ್ ಅವರು ಸರ್ವರಿಗೂ ಸಮಪಾಲು ಸಮಬಾಳು ಎಂಬ ಸಾಮಾಜಿಕ ಕಳಕಳಿಯಿಂದ ಸಂವಿಧಾನದಡಿಯಲ್ಲಿ ಎಲ್ಲಾ ಸಮುದಾಯ ಗಳು ಜಾತಿ, ಧರ್ಮ, ಗಳ ಒಳಿತಿಗಾಗಿ ಮೀಸಲಾತಿ ಇಟ್ಟಿದ್ದಾರೆ. ಆದರೆ ಇತ್ತೀಚಿನ ಆಳುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಳ ಸಮುದಾಯಗಳ ಓಟ್ ಬ್ಯಾಂಕ್ ಬಳಸಿಕೊಂಡು ಅವರ ಅಭಿವೃದ್ಧಿ ಯೋಜನೆ ಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈ ಕೂಡಲೇ ಸರ್ಕಾರಗಳು ತಮ್ಮ ಬಜೆಟ್ ನಲ್ಲಿ ಎಸಿ, ಎಸ್ಟಿ ಸಮುದಾಯಗಳಿಗೆ ಮೀಸಲಿರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಶಿರಾ ತಾಲ್ಲೂಕಿನ ರಂಗನಾಥ್,ಶಿವಾಜಿನಗರ ತಿಪ್ಪೇಸ್ವಾಮಿ, ಕಾರೇಹಳ್ಳಿ ರಂಗನಾಥ್, ಚೈತ್ರ ಸೇರಿದಂತೆ ಇತರರು ಉಪಸ್ಥಿತಿ ಇದ್ದರು.
ವರದಿ: ಮಾರುತಿ ಪ್ರಸಾದ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


