ಕೊರಟಗೆರೆ : ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ‘ನಮ್ಮ ಸಂಸ್ಕೃತಿ ನಮ್ಮ ವೈಭವ’ ಎಂಬ ಕಾರ್ಯಕ್ರಮವನ್ನು ಹಾಗೂ ಶಾಲಾ ವಾರ್ಷಿಕೋತ್ಸವವನ್ನು ವಿಶೇಷವಾಗಿ ವಿಜೃಂಭಣೆಯಿಂದ ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕೆ ದಿವ್ಯಸಾಹಿತ್ಯವನ್ನು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪರಪೂಜ್ಯ ಶ್ರೀ ಹನುಮಂತನಾಥ ಸ್ವಾಮೀಜಿ ಹಾಗೂ ಶ್ರೀ ಶಿವಕುಮಾರ ಸ್ವಾಮಿ ಚಿಕ್ಕಣ್ಣ ಸ್ವಾಮಿ ಸುಕ್ಷೇತ್ರ ಹೆಟ್ಟೂರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ಕೆ.ನಾಗಣ್ಣ ಮಾತನಾಡಿ, ಹೊಸಕೋಟೆ ಗ್ರಾಮವು ತಾಲೂಕಿನ ವಿಶೇಷತೆ ಕೂಡ ಆಗಿದ್ದು, ಇದೇ ಗ್ರಾಮದಲ್ಲಿ ಓದಿ ಜಿಲ್ಲೆಯಾದ್ಯಂತ ಹೆಸರು ಮಾಡಿರುವ ಹಾಗೂ ಊರಿಗೆ ಕೀರ್ತಿ ತಂದಿರುವ ಮಾಜಿ ಜಿಲ್ಲಾ ಪಂಚಾ ಯಿತಿ ಅಧ್ಯಕ್ಷ ಪ್ರೇಮ ಮಾಲಿಂಗಪ್ಪನವರು ಹಾಗೂ ಅನೇಕ ಮಹನೀಯರು ಇದೇ ಊರಿನವರು. ಹೊಸಕೋಟೆ ಗ್ರಾಮವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ. ಮಕ್ಕಳ ಜಾನಪದ ವೇಷಭೂಷಣ ನೋಡಿದರೆ, ಹಿಂದಿನ ಕಾಲದ ಹಳೆಯ ಹಳ್ಳಿಯ ಸೊಬಗು ನಮ್ಮ ಮುಂದೆ ಎದ್ದು ಕಾಣುತ್ತದೆ. ಇಂತಹ ಪ್ರತಿಭೆಯನ್ನು ಅವರಲ್ಲಿ ಗುರುತಿಸಿ ಅವರನ್ನು ಸಿದ್ಧಪಡಿಸಿದ ಶಿಕ್ಷಕರಿಗೂ ಅವರ ತಂದೆ ತಾಯಿಗಳಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರು ನಾಹಿದ ಜಂ ಜಂ ಮಾತನಾಡಿ, ನಮ್ಮ ಮನೆಯಲ್ಲಿರುವ ಎಲ್ಲಾ ಮಕ್ಕಳನ್ನು ಮೊದಲು ನಾವು ಓದಲು ಬಿಡಬೇಕು ಅವರಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಮಕ್ಕಳು ಏನು ಬೇಕಾದರೂ ಸಾಧಿಸುತ್ತಾರೆ. 18 ವರ್ಷ ತುಂಬುವುದರ ಮುಂಚೆಯೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿದ್ದೀರಿ, ನಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ನಾವು ನಂಬಿಕೆ ಇಟ್ಟು ಒಳ್ಳೆಯ ಗುಣಮಟ್ಟದ ಶಿಕ್ಷಣ ಕೊಡಿಸಿದರೆ ಮುಂದಿನ ದಿನಗಳಲ್ಲಿ ಅದೇ ಹೆಣ್ಣು ಮಗು ನಿಮ್ಮನ್ನು ಸಾಕುತ್ತಾಳೆ ಎಂದು ಬಾಲ್ಯ ವಿವಾಹದ ಬಗ್ಗೆ ಮೂಢನಂಬಿಕೆ ಇರುವ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮಹಾಲಿಂಗಪ್ಪ, ವೆಂಕಟೇಶ್ ಮೂರ್ತಿ, ಮಲ್ಲಿಕಾರ್ಜುನ್, ಅರವಿಂದ್( ಉಪ್ಪಿ),ಕೃಷ್ಣಪ್ಪ, ಮಲ್ಲಿಕ್ ರಾವತ್ ನಲ್ಲಿ,ಮಂಜು, ಶಿವಲಿಂಗಯ್ಯ,ನರಸಿಂಹಯ್ಯ, ಮುತ್ತುರಾಜ್ ಹೊಸಕೋಟೆ,ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜ್,ಲಕ್ಷ್ಮಿದೇವಮ್ಮ, ಎಸ್ ಡಿ ಎಮ್ ಸಿ ಅಧ್ಯಕ್ಷ ಹನುಮಂತರಾಯಪ್ಪ, ಶಿಕ್ಷಣ ಸಂಯೋಜಕರು ಗಂಗಮ್ಮ. ಅನುಸೂಯಮ್ಮ,ಸಿಆರ್‌ಪಿ ಮುತ್ತುರಾಜ್,ಚಿಕ್ಕಪ್ಪಯ್ಯ, ಮುಖ್ಯ ಶಿಕ್ಷಕ ಕಾಂತಪ್ಪ,ದೇವರಾಜ್, ಹರೀಶ್,ಮಂಜುಳಾ ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4