ತಿಪಟೂರು: ಪ್ರಾಚೀನ ಕಾಲದಿಂದಲೂ ಭರತನಾಟ್ಯ ಮತ್ತು ನೃತ್ಯಕ್ಕೆ ತನ್ನದೇ ಪರಂಪರೆ ಇದ್ದು, ಇಂದಿಗೂ ಉಳಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಕೊರತೆ ಇದ್ದು, ನಾವುಗಳು ತುಂಬಾ ವಿದ್ಯಾಭ್ಯಾಸಕ್ಕೆ ಕಷ್ಟ ಪಡುತ್ತಿದ್ದ ಕಾಲ ಇಂದು ದೂರವಾಗಿ, ಉತ್ತಮ ಶಿಕ್ಷಣ ಕೊಡುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಕೆ.ಷಡಕ್ಷರಿ ಅಭಿಪ್ರಾಯಪಟ್ಟರು.
ನಗರದ ಕೆ.ಎಚ್.ಬಿ.ಕಾಲೋನಿಯ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ಸಭಾಂಗಣದಲ್ಲಿ, ಠಾಗೂರ್ ವಿದ್ಯಾ ಸಂಸ್ಥೆ ವತಿಯಿಂದ ಠಾಗೂರ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಹಾಗೂ ಠಾಗೂರ್ ವಿಕಿರಣo–2025 ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಠಾಗೂರ್ ವಿದ್ಯಾ ಸಂಸ್ಥೆ ಬಹಳ ವರ್ಷಗಳಿಂದ ತಿಪಟೂರಿನ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದು, ಉತ್ತಮ ಬೋಧನೆ ಮತ್ತು ಫಲಿತಾಂಶ ನೀಡುವುದರಲ್ಲಿ ಯಶಸ್ವಿಯಾಗಿದೆ. ಖಾಸಗಿಯವರು ಶಿಕ್ಷಣ ಕ್ಷೇತ್ರಕ್ಕೆ ಬಂದಿರುವುದರಿಂದ, ಶಿಕ್ಷಣ ಕ್ಷೇತ್ರ ಬದಲಾಗಿ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ಪರಿಶ್ರಮ ಪಡುತ್ತಿದ್ದಾರೆ. ಶಿಕ್ಷಕರುಗಳು ಗುಣಮಟ್ಟ ಶಿಕ್ಷಣ ನೀಡಿದಲ್ಲಿ,ವಿದ್ಯಾರ್ಥಿಗಳು ಯಶಸ್ವಿನ ಮೆಟ್ಟಿಲು ಏರುತ್ತಾರೆ ಎಂದು ತಿಳಿಸಿದರು.
ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ರಂಗಾಯಣದ ನಂಟನ್ನು ಬೆಳೆಸಿಕೊಂಡು, ರಂಗಭೂಮಿಯನ್ನು ಪೋಷಿಸಿ,ಬೆಳೆಸಲು ಪೋಷಕರು ತಮ್ಮ ಮಕ್ಕಳಿಗೆ ಸಲಹೆ, ಸೂಚನೆ ನೀಡಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳು ಸೇರಿದಂತೆ ನಾಟಕ, ರಂಗಭೂಮಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕಡೆ ಗಮನಹರಿಸಿದಾಗ, ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲಕರವಾಗಲಿದೆ ಎಂದು ಕಿವಿಮಾತು ತಿಳಿಸಿದರು.
ಠಾಗೂರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಆರ್.ಅನಿಲ್ ಮಾತನಾಡಿ, ಮಕ್ಕಳ ಅಭಿವೃದ್ಧಿಯಲ್ಲಿ ಪೋಷಕರಷ್ಟೇ ಪಾತ್ರ ಶಿಕ್ಷಕರು ಅಳವಡಿಸಿಕೊಂಡಾಗ, ವಿದ್ಯಾರ್ಥಿಗಳನ್ನು ವಿಚಾರವಂತರನ್ನಾಗಿ ಹಾಗೂ ಸಾಧಕರನ್ನಾಗಿ ಮಾಡಲು ಸಾಧ್ಯವಾಗಿ,ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಪ್ರತಿಯೊಂದು ನೃತ್ಯದಲ್ಲಿ, ಸಮಾಜಕ್ಕೆ ಒಳ್ಳೆಯ ಸಂದೇಶಗಳು ರವಾನೆ ಆಗುತ್ತವೆ ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಠಾಗೂರ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಅನಿಲ್, ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ಡಾ.ಚಂದ್ರಮೌಳಿ, ಆಂಧ್ರಪ್ರದೇಶದ ಪ್ರೊ.ಡಾ.ಮುರುಗಯ್ಯ, ವೈದ್ಯರಾದ ಡಾ.ರಮೇಶ್ ಬಾಬು, ಡಾ.ಜಿ.ಎಸ್. ಶ್ರೀಧರ್, ಹೋಟೆಲ್ ಉದ್ಯಮಿ ಗುರುರಾಜ್ ಧನ್ಯ, ದಾವಣಗೆರೆ ಬಾಪೂಜಿ ಡೆಂಟಲ್ ಕಾಲೇಜಿನ ಪ್ರೊ.ಡಾ.ಬಿ.ಎಂ.ದೀಪಕ್ ಮತ್ತು ಶಾಲಾ ಶಿಕ್ಷಕ ಸತೀಶ್ ಸೇರಿದಂತೆ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ಹಾಗೂ ಪೋಷಕರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


