ಶಿವಮೊಗ್ಗದಲ್ಲಿ ಟಿವಿ, ಸ್ಟೇಬಲೈಸರ್ ಮಾರಾಟ ಮಾಡಿದ್ದು ಅದರ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ಕಬ್ಬಿಣದ ಚೇರ್ ನಿಂದ ಹಲ್ಲೆ (Assault) ನಡೆಸಿದ ಆರೋಪ ಕೇಳಿ ಬಂದಿದೆ. ನ್ಯೂ ಮಂಡ್ಲಿ ಗಂಧರ್ವ ನಗರದ ಚಾಲಕ ರವಿಕುಮಾರ್ ಮೇಲೆ ಹಲ್ಲೆಯಾಗಿದೆ.
ತೌಸು ಎಂಬಾತನಿಗೆ ರವಿಕುಮಾರ್ ಟಿವಿ ಮತ್ತು ಸ್ಟೇಬಲೈಸರ್ ಮಾರಾಟ ಮಾಡಿದ್ದರು. 4 ಸಾವಿರ ರೂ. ಕೊಡಬೇಕಿದ್ದ ತೌಸು 1 ಸಾವಿರ ರೂ. ಮಾತ್ರ ನೀಡಿದ್ದ. 10 ದಿನ ಕಳೆದರು ಬಾಕಿ 3 ಸಾವಿರ ರೂ. ಹಣ ಕೊಟ್ಟಿರಲಿಲ್ಲ. ಜು.28ರಂದು ತೌಸು ಓ.ಟಿ.ರಸ್ತೆಯ ಬಾರ್ ನಲ್ಲಿದ್ದಾಗ ರವಿಕುಮಾರ್ ಹಣ ಕೇಳಿದ್ದಾರೆ. ಆಗ ತೌಸು ಅವಾಚ್ಯವಾಗಿ ನಿಂದಿಸಿದ್ದು, ಆತನ ಜೊತೆಗಿದ್ದವನು ಕಬ್ಬಿಣದ ಚೇರ್ ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


