ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನಲ್ಲಿ ಹೃದಯ ವಿದ್ರಾವಕ ವಿಡಿಯೋವೊಂದು ಹರಿದಾಡುತ್ತಿದೆ. ಮನೆಯಲ್ಲಿ ತಾಯಿಯೊಬ್ರು ತನ್ನ ಮಗಳ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ನೋಡಿದವರ ಮನಸು ಕದಡದೇ ಇರದು. ಅತ್ಯಂತ ಕ್ರೂರವಾಗಿ ಮಹಿಳೆ ಮಗುವಿನ ಮೇಲೆ ತನ್ನ ವರ್ತನೆ ತೋರಿದ್ದಾಳೆ.
ಗುಜರಾತ್ ಮೂಲದ ತಾಯಿಯೊಬ್ಬರು ಮನೆಯಲ್ಲಿ ಅಡುಗೆ ಮಾಡುವಾಗ ಮಗು ಏನೋ ಕೀಟಲೆ ಮಾಡಿದೆ. ಇಷ್ಟಕ್ಕೆ ಸುಮ್ಮನಾಗದ ತಾಯಿ ಮಗಳನ್ನು ಚಪಾತಿ ಎತ್ತಿ ಹಾಕುವ ಸೌಟ್ನಿಂದ ಮನಬಂದಂತೆ ಥಳಿಸಿದ್ದಾಳೆ.
ಬಾಲಕಿಯ ಕತ್ತು ಅನ್ನು ಜೋರಾಗಿ ಹಿಸುಕಿ ಮೇಲೆ ಕುಳಿತ್ತಿದ್ದಾಳೆ. ತನ್ನ ಶಕ್ತಿ ಎಷ್ಟಿದಿಯೋ ಅಷ್ಟನ್ನು ಮಗುವಿನ ಮೇಲೆ ಪ್ರಯೋಗಿಸಿದ್ದಾಳೆ. ಮಗುವಿನ ಬಟ್ಟೆ ಹಿಡಿದು ಮೇಲೆ ಎತ್ತಿ ಎಳೆದಾಡಿದ್ದಾಳೆ. ನೆಲಕ್ಕೆ ಹಾಕಿ ಹೊಡೆದಿದ್ದಾಳೆ.
ಈ ವೇಳೆ ತಾಯಿಯಿಂದ ಮಗುವಿಗೆ ನರಕ ಸದೃಶ್ಯವಾಗಿದ್ದು ಕಿರುಚಾಡಿದೆ. ಪ್ರಾಣ ಉಳಿದರೆ ಸಾಕು ಎನ್ನುವಂತೆ ಮಗು ಭಯದಲ್ಲಿ ಒದ್ದಾಡಿದೆ ಎನ್ನಲಾಗಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು ವಿಡಿಯೋ ಮಾಡುತ್ತಿರುವವರು ಯಾಕೆ ಬಾಲಕಿಯನ್ನು ಬಿಡಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಬಾಲಕಿಯ ತಂದೆಯೇ ಈ ವಿಡಿಯೋವನ್ನು ಚಿತ್ರೀಕರಿಸಿ ಶೇರ್ ಮಾಡಿರಬಹುದು ಎಂದು ಕೆಲವರು ಊಹೆ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA