ಜಗದೀಶ ಶೆಟ್ಟರ್ ಬಿಜೆಪಿಗೆ ಬಂದಿರುವುದೇನೂ ಆಪರೇಷನ್ ಕಮಲ ಅಲ್ಲ. ಕಾಂಗ್ರೆಸ್ ಪಕ್ಷದೊಳಗಿನ ಉಸಿರುಗಟ್ಟುವ ವಾತಾವರಣವನ್ನು ತಡೆದುಕೊಳ್ಳಲಾರದೆ ಮರಳಿ ತಮ್ಮ ಗೂಡು ಸೇರಿದ್ದಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಅವರು ಸಂಘ ಪರಿವಾರದ ಹಿನ್ನೆಲೆಯಿಂದ ಬೆಳೆದು ಬಂದಿದ್ದಾರೆ. ಮುಸ್ಲಿಮರ ಓಲೈಕೆ ಹಾಗೂ ಹಿಂದೂಗಳ ಕಡೆಗಣನೆಯನ್ನು ನೋಡಿ ಅವರಿಗೆ ಉಸಿರುಗಟ್ಟುವ ವಾತಾವರಣ ಉಂಟಾಗಿತ್ತು ಎಂದರು.
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ, ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮೊದಲಾದ ಕಾರಣಗಳಿಂದ ಇನ್ನಷ್ಟು ನಾಯಕರು ಬಿಜೆಪಿ ಕಡೆ ಬರಲಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನೇನಿದ್ದರೂ ‘ಕಾಂಗ್ರೆಸ್ ಚೋಡೊ’ ಎಂಬ ಘೋಷಣೆ ಕೇಳಿ ಬರಲಿದೆ. ಆಮ್ ಆದ್ಮಿ ಪಕ್ಷ, ಮಮತಾ ಬ್ಯಾನರ್ಜಿಯವರ ಪಕ್ಷ ಕಾಂಗ್ರೆಸ್ ನಾಲಾಯಕ್ ಎಂದು ಓಡಿಸಿದೆ. ಕಾಂಗ್ರೆಸ್ ಪಕ್ಷವನ್ನು ದೆಹಲಿಯಿಂದಲೂ ಹೊರಗೆ ಹಾಕಲಾಗುತ್ತದೆ ಎಂದರು.


