ಔರಾದ: ಭೀಮವಾದ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ರಚನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ತಾಲೂಕು ಪ್ರವಾಸ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕರಾದ ಸಂಜೀವ ಕುಮಾರ್ ಮೇತ್ರೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಬೀದರ ಜಿಲ್ಲೆಯ ಎಲ್ಲಾ ತಾಲೂಕಿನ, ಗ್ರಾಮಗಳಲ್ಲಿರುವ ದಲಿತ, ಹಿಂದುಳಿದವರು, ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ನಡೆಸಬೇಕು, ಯುವಕರನ್ನು ಸಂಘಟಿಸುವ ಉದ್ದೇಶದಿಂದ ಇಂದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.
ಔರಾದ ತಾಲೂಕು ಸಂಚಾಲಕರಾಗಿ ತುಕಾರಾಮ ಹಸನ್ಮುಖಿ, ತಾಲೂಕು ಸಂಘಟನಾ ಸಂಚಾಲಕರಾಗಿ ಬಸವರಾಜ್ ಅಲ್ಲಾಪುರ, ಮಲ್ಲಿಕಾರ್ಜುನ ಜೋನ್ನೇಕೆರಿ ಹಾಗೂ ತಾಲೂಕು ಖಜಾಂಚಿಯಾಗಿ ಘಾಳ್ಳೇಪ್ಪಾ ಸೇಂಬೆಳ್ಳಿ ಇವರುಗಳನ್ನು ರಾಜ್ಯ ಸಂಚಾಲಕ ಬಿ.ಎನ್. ವೆಂಕಟೇಶ್ ರವರ ಆದೇಶ ಮೇರೆಗೆ ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಸಂಜುಕುಮಾರ್ ಮೇತ್ರೆ, ಡಿ.ಜೆ. ಬಂದಿ, ಸುಧಾಕರ್ ಅಲ್ಲಾಪುರೆ, ಗಣಪತಿ ಸೇಂಬೆಳ್ಳಿ, ಸಂಜುಕುಮಾರ್ ಲಾಧ, ಸುನಿಲ್ ಮಿತ್ರ,ದತ್ತಾತ್ರಿ ಚಿಕ್ಲಿ, ಘಾಳೇಪ್ಪ ಸೇಂಬೆಳ್ಳಿ, ಮಲ್ಲಿಕಾರ್ಜುನ ಜೋನ್ನೇಕೆರಿ, ಮತ್ತಿತರರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್