ಸಾಗರ: ಮಾನವನ ಬದುಕಿನ ಜಂಜಾಟ ದಿಂದ ಮುಕ್ತಿ ಪಡೆಯಲು ಸ್ವಾಧ್ಯಾಯದಿಂದ ಮಾನವನ ಆತ್ಮ ಕಲ್ಯಾಣ ಸಾಧ್ಯವಾಗಲಿದೆ, ಧಾರ್ಮಿಕ ಸಾಹಿತ್ಯದಿಂದ ಮಾನವನ ಮನಸ್ಸುಗಳು ಪರಿವರ್ತನೆಯಾಗಲಿವೆ ಎಂದು ಮುನಿಶ್ರೀ ಪಾಯಸಾಗರ ಮಹಾರಾಜ, ತಿಳಿಸಿದರು .
ಅವರಿಂದ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಕೊಳೂರು ಗ್ರಾಮದ ಕಂದ್ರವಳ್ಳಿಯ ಶ್ರೀಮಹಾವೀರ ಜಿನ ಮಂದಿರದ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿ, ಸಾಹಿತಿ ಸ್ವಾಮಿ ರಚಿಸಿದ ಮಹಾನ್ ಸಾಗರತ್ವ ಜೀವನ ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಧರ್ಮವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡಾಗ ಮಾತ್ರ ಜೀವನ ದರ್ಶನವಾಗುತ್ತದೆ. ಅಹಿಂಸೆ, ಶಾಂತಿ ಸಾರಿದ್ದ ಜೈನ ಧರ್ಮ ವಿಶ್ವ ಶ್ರೇಷ್ಠ ಧರ್ಮವಾಗಿದೆ ಎಂದು ಅವರು, ಜೈನ ಧರ್ಮದ ಸಿದ್ಧಾಂತಗಳ ಆಚರಣೆಯಿಂದ ಶಾಂತಿ ನೆಲೆಸಲು ಸಾಧ್ಯ ಎಂದರು. ಈ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ನಿತ್ಯ ಪಾಲನೆ ಮಾಡಬೇಕು ಇದರ ಆತ್ಮವಲೋಕನ ಮುಖೀನಾ ಸಾರ್ಥಕ ಜೀವನ ಸಾಧ್ಯ ಎಂದರು.
ಮಂಗಳ ಆಶೀರ್ವಾದ ನೀಡಿದ ಮಹಾನ್ ಸಾಗರರು ಆಶೀರ್ವದಿಸಿ ತ್ಯಾಗದಿಂದ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಸಾಧ್ಯ, ತೀರ್ಥಂಕರರು ಸಮಾಜಕ್ಕೆ ಬೆಳಕಾಗಿದ್ದು, ನಾವು ಆತ್ಮವಲೋಕನದಿಂದ ಸರಳ ಜೀವನ ಸಾಧ್ಯ ಎಂದರು.
ಮುನಿಶ್ರೀ ವಿಧಿತ ಸಾಗರ್ ಮಹಾರಾಜರು, ಮುನಿಶ್ರೀ ಸಮ್ಯಕ್ ಸಾಗರ ಅವರು ಮಹಾರಾಜರು ಉಪಸ್ಥಿತರಿದ್ದರು . ಸಿ.ಎಸ್ .ಓಂಕಾರ್ ಜೈನ್ ಪುಸ್ತಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜ್ಯೋತಿ ಸ್ವಾಮಿ ಇನ್ನಿತರರು ಬಂಧುಗಳು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.
ವರದಿ: ಜೆ.ರಂಗನಾಥ– ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx