ನವದೆಹಲಿ: ವಸಾಹತುಶಾಹಿ ಇತಿಹಾಸ ನೆನಪಿಸುವ ಸೇಂಟ್ ಜಾರ್ಜ್ ಕ್ರಾಸ್ ಕೈಬಿಟ್ಟು, ಭಾರತೀಯ ನೌಕಾಪಡೆ ನೂತನ ಧ್ವಜವನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಸೆ. 2 ರಂದು ಪ್ರಧಾನಿ ಮೋದಿ ಹೊಸ ಧ್ವಜವನ್ನು ಅನಾವರಣಗೊಳಿಸಲಿದ್ದಾರೆ.
ಭಾರತದ ಶ್ರೀಮಂತ ಕಡಲ ಪರಂಪರೆ ಅನುಸಾರವಾಗಿ ನೌಕಾ ಪಡೆಯ ಹೊಸ ಧ್ವಜ ವಿನ್ಯಾಸ ಗೊಳಿಸಲಾಗಿದೆ.
ಸೆಪ್ಟೆಂಬರ್ 2ರಂದು ಪ್ರಧಾನಿ ಮೋದಿ ಅವರು ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಐಎನ್‌ಎಸ್ ವಿಕ್ರಾಂತ್ ಎಂದು ಮೊದಲ ಸ್ವದೇಶಿ ವಿಮಾನವಾಹಕ ನೌಕೆಯನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಅದನ್ನು ದೇಶಕ್ಕೆ ಹಸ್ತಾಂತರಿಸಲಿದ್ದಾರೆ. ಈ ಸಮಯದಲ್ಲಿ, ವಸಾಹತುಶಾಹಿ ಭೂತಕಾಲವನ್ನು ತೆಗೆದುಹಾಕುವ ಮತ್ತು ಶ್ರೀಮಂತ ಭಾರತೀಯ ಕಡಲ ಪರಂಪರೆಗೆ ಅನುಗುಣವಾಗಿ ಭಾರತೀಯ ನೌಕಾಪಡೆಯ ಹೊಸ ಧ್ವಜವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ.
ನೌಕಾಪಡೆ ಇತಿಹಾಸ: ಭಾರತದಲ್ಲಿ ಅ.2 1934 ರಂದು ರಾಯಲ್ ಇಂಡಿಯನ್ ನೇವಿ ಎಂಬ ಹೆಸರಿನಲ್ಲಿ ನೌಕಾಪಡೆ ಆರಂಭಿಸಲಾಯಿತು. 1950ರ ಜ. 26ಕ್ಕೆ ದೇಶವನ್ನು ಗಣರಾಜ್ಯ ಎಂದು ಘೋಷಿಸಿದ ಬಳಿಕ ‘ರಾಯಲ್’ ಪದ ಬಿಟ್ಟು ‘ಭಾರತೀಯ ನೌಕಾಪಡೆ’ ಎಂಬ ಹೆಸರು ಮಾತ್ರ ಉಳಿಸಿಕೊಳ್ಳಲಾಯಿತು.
ಧ್ವಜದಲ್ಲಿರುವ ನೌಕೆಯಲ್ಲಿ ಕಿರೀಟದ ಲಾಂಛನ ತೆಗೆದು ಆಶೋಕ ಚಕ್ರವುಳ್ಳ ಸಿಂಹದ ರಾಷ್ಟ್ರೀಯ ಲಾಂಛನ ಅಳವಡಿಸಲಾಯಿತು. ಅದರ ನಂತರವೂ ನೌಕಾಪಡೆಯು ಸಮಾನಾಂತರ ಹಾಗೂ ಲಂಬ ಕೆಂಪು ಅಡ್ಡಪಟ್ಟಿಗಳಿರುವ ಬಿಳಿ ಬಣ್ಣದ ಸೇಂಟ್ ಜಾರ್ಜ್ ಕ್ರಾಸ್ ಅನ್ನೇ ಧ್ವಜವಾಗಿ ಬಳಸಿಕೊಳ್ಳುತ್ತಿದೆ. ಈಗ ಈ ಧ್ವಜವನ್ನು ಕೈಬಿಡಲಾಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy