nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಜಯೇಂದ್ರ, ಅಶೋಕ್ ಮನೆ ಮುಂದೆನೇ ಕಸ ಹಾಕಿಸ್ತೀನಿ: ಡಿಸಿಎಂ ಡಿ.ಕೆ.ಶಿವಕುಮಾರ್ ತೀವ್ರ ಎಚ್ಚರಿಕೆ

    February 18, 2026

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ಸರ್ಕಾರದ ನಡೆ ‘ಹೇಡಿತನಕ್ಕೆ ಸಾಕ್ಷಿ’ ಎಂದು ಜೆಡಿಎಸ್ ವಾಗ್ದಾಳಿ

    February 18, 2026

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ‘ನಾಲಾಯಕ್ ಸರ್ಕಾರ’:  ಬಿ.ವೈ. ವಿಜಯೇಂದ್ರ ಆಕ್ರೋಶ

    February 18, 2026
    Facebook Twitter Instagram
    ಟ್ರೆಂಡಿಂಗ್
    • ವಿಜಯೇಂದ್ರ, ಅಶೋಕ್ ಮನೆ ಮುಂದೆನೇ ಕಸ ಹಾಕಿಸ್ತೀನಿ: ಡಿಸಿಎಂ ಡಿ.ಕೆ.ಶಿವಕುಮಾರ್ ತೀವ್ರ ಎಚ್ಚರಿಕೆ
    • ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ಸರ್ಕಾರದ ನಡೆ ‘ಹೇಡಿತನಕ್ಕೆ ಸಾಕ್ಷಿ’ ಎಂದು ಜೆಡಿಎಸ್ ವಾಗ್ದಾಳಿ
    • ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ‘ನಾಲಾಯಕ್ ಸರ್ಕಾರ’:  ಬಿ.ವೈ. ವಿಜಯೇಂದ್ರ ಆಕ್ರೋಶ
    • ಕಮಿಷನ್ ಆರೋಪ ಸುಳ್ಳಾದರೆ ಕೇಸ್ ಹಾಕಿ: ಕಾಂಗ್ರೆಸ್ ಸರ್ಕಾರಕ್ಕೆ ಆರ್.ಅಶೋಕ್ ಸವಾಲು
    • ಮಕ್ಕಳ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಹಿರಿದು: ಡಾ.ಕೆ.ಟಿ.ತಿಪ್ಪೇಸ್ವಾಮಿ
    • ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು
    • ಹೆಚ್‌ ಐವಿ ಪೀಡಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ: ಗಿರೀಶ್
    • ಜೀತ ಪದ್ಧತಿ ನಿರ್ಮೂಲನೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ: ನ್ಯಾ.ದಿವ್ಯಶ್ರೀ ಸಿ.ಎಂ.
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸೇವಾ ನ್ಯೂನತೆ ಎಸಗಿದ ಎಸ್ ಬಿ ಐ ಬ್ಯಾಂಕ್ ಗಳಿಗೆ 2 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ವೇದಿಕೆ
    ರಾಜ್ಯ ಸುದ್ದಿ December 3, 2022

    ಸೇವಾ ನ್ಯೂನತೆ ಎಸಗಿದ ಎಸ್ ಬಿ ಐ ಬ್ಯಾಂಕ್ ಗಳಿಗೆ 2 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ವೇದಿಕೆ

    By adminDecember 3, 2022No Comments2 Mins Read
    dANDA

    ಸೇವಾ ನ್ಯೂನತೆ ಎಸಗಿದ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಇರುವ ಮಾರ್ಕೆಟ್ ಬ್ರಾಂಚ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅಶೋಕ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೆ ದಂಡ ವಿಧಿಸಿ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

    ಮೈಸೂರಿನ ವಿಶ್ವೇಶ್ವರ ನಗರ ಎರಡನೇ ಹಂತದ ಸಿಐಟಿಬಿ ಕಾಲೋನಿಯ ಮಲ್ಲಿಗೆ ರಸ್ತೆಯ ನಿವಾಸಿ ರಾಮೋಜಿ ರಾವ್ ಅವರ ಮಗನಾದ ‘ಮಾಜಿ ಯೋಧ’ ಕೃಷ್ಣೋಜಿ ರಾವ್ ಅವರು ಮನೆಯನ್ನು ಖರೀದಿ ಮಾಡಲು ಮತ್ತು ಆ ಮನೆಯನ್ನು ನವೀಕರಣ ಮಾಡುವ ಸಲುವಾಗಿ 2003 ಹಾಗೂ 2013 ರ ಸಮಯದಲ್ಲಿ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಾರ್ಕೆಟ್ ಬ್ರಾಂಚ್ ಹಾಗೂ ಅಶೋಕ ರಸ್ತೆಯ ಬ್ರಾಂಚ್ ನಲ್ಲಿ ರೂ.3,55,000/- ಹಾಗೂ ರೂ.6,40,000/- ಗಳನ್ನು ಸಾಲವಾಗಿ ಪಡೆದಿದ್ದರು.


    Provided by
    Provided by

    ಸಾಲ ಮಂಜೂರು ಮಾಡುವ ಸಮಯದಲ್ಲಿ ಕೃಷ್ಣೋಜಿ ರಾವ್ ತಮ್ಮ ಮನೆಯ ಹಕ್ಕು ಪತ್ರ, ಕ್ರಯಪತ್ರ ಹಾಗೂ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಬ್ಯಾಂಕಿಗೆ ಭದ್ರತೆಯಾಗಿ ನೀಡಿದ್ದರು. ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನವಾಯಿತು.

    ಕೃಷ್ಣೋಜಿ ರಾವ್ ಅವರು 31.07.2021 ರಲ್ಲಿ ಸೇವೆಯಿಂದ/ಸೇನೆಯಿಂದ ನಿವೃತ್ತಿಯಾದ ನಂತರ ಬಂದ ಹಣದ ಮೊತ್ತದಿಂದ 10.08.2021ರಂದು ಬ್ಯಾಂಕಿನಿಂದ ಪಡೆದ ಸಾಲವನ್ನು ಪೂರ್ತಿಯಾಗಿ,ಗೌರವಯುತವಾಗಿ ತೀರಿಸಿ ಸಾಲದ ಖಾತೆಯನ್ನೂ ಮುಕ್ತಿಗೊಳಿಸಿದ್ದರು. ಈ ವಿಚಾರವಾಗಿ10.08.2021ರಂದು ಎಸ್ ಬಿ ಐ ಸಾಲ ತೀರುವಳಿ ಪತ್ರವನ್ನೂ ನೀಡಿತ್ತು.

    ಸಾಲ ತೀರಿಸಿದ ಪ್ರಯುಕ್ತ ತಾನು ಬ್ಯಾಂಕಿಗೆ ಭದ್ರತೆಯಾಗಿ ನೀಡಿದ್ದ ತನ್ನ ಮನೆಯ ಹಕ್ಕು ಪತ್ರ,ಕ್ರಯ ಪತ್ರ ಹಾಗೂ ಖಾತಾ ಸಂಬಂದಿ ದಾಖಲೆಗಳನ್ನು ಹಿಂದಿರುಗಿಸುವಂತೆ ಕೋರಿ ಕೃಷ್ಣೋಜಿ ರಾವ್ ಅವರು 26.10.2021ರಂದು ಬ್ಯಾಂಕಿಗೆ ಮನವಿ ಪತ್ರ ಸಲ್ಲಿಸಿದರೂ ಕೂಡ ಎಸ್ ಬಿ ಐ ಕುಂಟು ನೆಪ ಹೇಳುತ್ತಾ ಕಾಲಹರಣ ಮಾಡುವ ಜೊತೆಗೆ ಕೃಷ್ಣೋಜಿ ರಾವ್ ರವರಿಗೆ ಮನೆಯ ದಾಖಲೆಗಳನ್ನು ಹಿಂದಿರುಗಿಸಲೇ ಇಲ್ಲ.

    ಇದರಿಂದ ಮನನೊಂದ ಕೃಷ್ಣೋಜಿ ರಾವ್ ಅವರು ತನ್ನ ಮನೆಯ ಹಕ್ಕುಪತ್ರ, ಕ್ರಯಪತ್ರ ಹಾಗೂ ಖಾತಾ ಸಂಬಂಧಿ ದಾಖಲೆಗಳನ್ನು ಹಿಂದಿರುಗಿಸಲು ನಿರ್ದೇಶನ ನೀಡುವ ಜೊತೆಗೆ ತನಗೆ ಮನಸಿಕ ಹಿಂಸೆ ನೀಡಿ ಸೇವಾ ನ್ಯೂನತೆ ಎಸಗಿದ ತಪ್ಪಿಗಾಗಿ ರೂ.16,00,000ಗಳನ್ನು ಖರ್ಚು ಸಹಿತ ಪರಿಹಾರ ನೀಡುವಂತೆ ಬ್ಯಾಂಕಿಗೆ ಆದೇಶಿಸಬೇಕೆಂದು ಕೋರಿ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

    ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎರಡೂ ಬ್ರಾಂಚ್ ಗಳು ಸೇವಾ ನ್ಯೂನತೆ ಎಸಗಿವೆ ಎಂದು ತೀರ್ಮಾನಿಸಿ ಕೃಷ್ಣೋಜಿ ರಾವ್ ಅವರು ಸಾಲ ಪಡೆಯುವಾಗ ಬ್ಯಾಂಕಿಗೆ ಭದ್ರತೆಯಾಗಿ ನೀಡಿದ್ದ ತಮ್ಮ ಮನೆಯ ಹಕ್ಕು ಪತ್ರ,ಕ್ರಯಪತ್ರ ಹಾಗೂ ಖಾತಾ ಸಂಬಂಧಿ ದಾಖಲೆಗಳನ್ನು ಎರಡು ತಿಂಗಳೊಳಗೆ ಹಿಂದಿರುಗಿಸುವಂತೆ ಆದೇಶಿಸುವ ಜೊತೆಗೆ ಸೇವಾ ನ್ಯೂನತೆ ಎಸಗಿದ ತಪ್ಪಿಗಾಗಿ 2 ಲಕ್ಷ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ವಾರ್ಷಿಕ 6% ಬಡ್ಡಿಯೊಂದಿಗೆ ಪಾವತಿಸುವಂತೆ ಎಸ್ ಬಿಐ ನ ಎರಡೂ ಬ್ರಾಚುಗಳಿಗೆ ನಿರ್ದೇಶಿಸಿದೆ.

    ಅಲ್ಲದೆ ಪ್ರಕರಣದ ಖರ್ಚಿನ ಬಾಬ್ತು ರೂ 5,000 ಗಳನ್ನು 2 ತಿಂಗಳೊಳಗೆ ಪಾವತಿಸುವಂತೆ ಆದೇಶಿದೆ. ಇದಕ್ಕೆ ತಪ್ಪಿದಲ್ಲಿ ವಾರ್ಷಿಕ ರೂ 2,05,000 ಕ್ಕೆ ವಾರ್ಷಿಕ 10% ಬಡ್ಡಿ ಕೊಡಬೇಕಾಗುತ್ತದೆಂದೂ ಗ್ರಾಹಕರ ವೇದಿಕೆಯು ಎಚ್ಚರಿಸಿದೆ. ಫಿರ್ಯಾದುದಾರ ಕೃಷ್ಣೋಜಿ ರಾವ್ ಅವರ ಪರವಾಗಿ ವಕೀಲರಾದ ಪ್ರತಾಪರುದ್ರಮೂರ್ತಿ ಹಾಗೂ ಸುಂದರದಾಸ್.ಡಿ ವಕಾಲತ್ತು ವಹಿಸಿದ್ದರು.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

     

    admin
    • Website

    Related Posts

    ವಿಜಯೇಂದ್ರ, ಅಶೋಕ್ ಮನೆ ಮುಂದೆನೇ ಕಸ ಹಾಕಿಸ್ತೀನಿ: ಡಿಸಿಎಂ ಡಿ.ಕೆ.ಶಿವಕುಮಾರ್ ತೀವ್ರ ಎಚ್ಚರಿಕೆ

    February 18, 2026

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ಸರ್ಕಾರದ ನಡೆ ‘ಹೇಡಿತನಕ್ಕೆ ಸಾಕ್ಷಿ’ ಎಂದು ಜೆಡಿಎಸ್ ವಾಗ್ದಾಳಿ

    February 18, 2026

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ‘ನಾಲಾಯಕ್ ಸರ್ಕಾರ’:  ಬಿ.ವೈ. ವಿಜಯೇಂದ್ರ ಆಕ್ರೋಶ

    February 18, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ವಿಜಯೇಂದ್ರ, ಅಶೋಕ್ ಮನೆ ಮುಂದೆನೇ ಕಸ ಹಾಕಿಸ್ತೀನಿ: ಡಿಸಿಎಂ ಡಿ.ಕೆ.ಶಿವಕುಮಾರ್ ತೀವ್ರ ಎಚ್ಚರಿಕೆ

    February 18, 2026

    ಬೆಂಗಳೂರು: ರಾಜಧಾನಿಯ ಕಸ ವಿಲೇವಾರಿ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಈಗ ‘ಕಸದ ಕಿಚ್ಚು’ ಹತ್ತಿಕೊಂಡಿದೆ. ಬೆಂಗಳೂರಿನ ಕಸವನ್ನು ದೊಡ್ಡಬಳ್ಳಾಪುರಕ್ಕೆ ಸಾಗಿಸುವುದನ್ನು…

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ಸರ್ಕಾರದ ನಡೆ ‘ಹೇಡಿತನಕ್ಕೆ ಸಾಕ್ಷಿ’ ಎಂದು ಜೆಡಿಎಸ್ ವಾಗ್ದಾಳಿ

    February 18, 2026

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ‘ನಾಲಾಯಕ್ ಸರ್ಕಾರ’:  ಬಿ.ವೈ. ವಿಜಯೇಂದ್ರ ಆಕ್ರೋಶ

    February 18, 2026

    ಕಮಿಷನ್ ಆರೋಪ ಸುಳ್ಳಾದರೆ ಕೇಸ್ ಹಾಕಿ: ಕಾಂಗ್ರೆಸ್ ಸರ್ಕಾರಕ್ಕೆ ಆರ್.ಅಶೋಕ್ ಸವಾಲು

    February 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.