ಪಾವಗಡ: ಪಾವಗಡ ತಾಲ್ಲೂಕಿನ ಪಳವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಮ್ಮನಹಳ್ಳಿಯ ಕಡು ಬಡ ಕುಟುಂಬದ ಮಹಿಳೆ ಪತಿಯನ್ನು ಕಳೆದುಕೊಂಡು ಜೀವನ ಸಾಗಿಸುತ್ತಿದ್ದು, ಈ ಮಹಿಳೆಗೆ ಸೇವಾ ಟ್ರಸ್ಟ್, ಹೆಲ್ಪ್ ಸೊಸೈಟಿ ಸಂಸ್ಥೆ ಸಹಾಯಕ್ಕೆ ಮುಂದಾಗಿದೆ.
ವೀರಮ್ಮನಹಳ್ಳಿಯ ಬಡ ಕುಟುಂಬದ ಮಹಿಳೆಯೋರ್ವರು ಮೂರು ಚಿಕ್ಕ ಮಕ್ಕಳ ಜೊತೆಯಲ್ಲಿ ಸೋರುತ್ತಿರುವ ಮನೆಯಲ್ಲಿ ವಾಸವಿದ್ದು, ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯ ಕಾರಣದಿಂದ ಗಂಡನನ್ನು ಕಳೆದುಕೊಂಡು ಪುಟ್ಟ ಮಕ್ಕಳ ಜೊತೆಯಲ್ಲಿ ಪಡ ಬಾರದ ಕಷ್ಟ ಪಡುತ್ತಿರುವ ಬಗ್ಗೆ ಸ್ಥಳೀಯ ಗ್ರಾಮದ ಲೋಕೇಶ್ ಎಂಬುವವರ ಮಾಹಿತಿ ಮೇರೆಗೆ ಪಟ್ಟಣದಿಂದ ಹತ್ತು ಕಿಲೋ ಮೀಟರ್ ದೂರದ ಗ್ರಾಮದ ಬಡ ಕುಟುಂಬದ ಬಳಿ ಧಾವಿಸಿದ ಸೇವಾ ಟ್ರಸ್ಟ್, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ನಿರ್ಗತಿಕ ಮಹಿಳೆಯ ಕಷ್ಟವನ್ನು , ಕೂಡಲೇ ಸೇವಾ ಟ್ರಸ್ಟ್ ತಂಡಕ್ಕೆ ಕರೆ ಮಾಡಿ ದವಸ ದಾನ್ಯ ಹಾಗೂ ದಿನಸಿ ಕಿಟ್ ಒಳಗೊಂಡ ಪದಾರ್ಥಗಳನ್ನು ಒದಗಿಸಿತು.
ಸೋರುತ್ತಿರುವ ಮನೆ ಮೇಲ್ಚಾವಣಿಗೆ ಗುಣಮಟ್ಟದ ಟಾರ್ಪಲ್ ತರಿಸಿ ಬಡ ಕುಟುಂಬದ ನೆರವಿಗೆ ಧಾವಿಸಿ ಸಹಾಯ ಹಸ್ತ ಚಾಚಿದ್ದು, ನಿಜವಾಗಲೂ ಸೇವಾ ಹಾಗೂ ಹೆಲ್ಪ್ ಎಂಬ ಹೆಸರಿನ ಟ್ರಸ್ಟಿಗೆ ತಕ್ಕಂತೆ ಹೆಸರು ಇಟ್ಟಿರುವುದು ಇಂತಹ ಕಾರ್ಯಕ್ಕೆ ಸಾಕ್ಷಿಯಾಗಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸ್ಥಳೀಯ ಗ್ರಾಮಸ್ಥರು ಸೇವಾ ಟ್ರಸ್ಟ್ ಹಾಗೂ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆಯಲ್ಲಿ ನಿಕಟ ಸಂಪರ್ಕ ಹೊಂದಿ ಸರ್ಕಾರದಿಂದ ಬರುವ ವಸತಿ ವ್ಯವಸ್ಥೆಗೆ ಶ್ರಮಿಸುವುದಾಗಿ ಈ ವೇಳೆಯಲ್ಲಿ ಸೇವಾ ಟ್ರಸ್ಟ್ ಅಧ್ಯಕ್ಷ ಮಾನಂ ಶಶಿಕಿರಣ್ ಬಡ ಮಹಿಳೆಗೆ ಧೈರ್ಯ ತುಂಬಿದರು.
ಇಂತಹ ಸೇವಾ ಕಾರ್ಯಕ್ಕೆ ಜೊತೆಯಾಗಿ ಸ್ಥಳೀಯ ಗ್ರಾಮದ ಮುಖಂಡ ಲೋಕೇಶ್ ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್ ಸಹ ಸಾಥ್ ನೀಡಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296