ಪಾವಗಡ: ಉತ್ತಮವಾದ ಆರೋಗ್ಯವನ್ನು ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಕಲ್ಪಿಸಿಕೊಡುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡುತ್ತಿದ್ದು ಸಾರ್ವಜನಿಕರು ಈ ಶಿಬಿರಗಳಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಪಾವಗಡ ಎಸ್ ಬಿ ಐ ವ್ಯವಸ್ಥಾಪಕ ಚಂದ್ರಶೇಖರ್ ತಿಳಿಸಿದರು.
ಸೇವಾ ಟ್ರಸ್ಟ್, ಹೆಲ್ಪ್ ಸೊಸೈಟಿ, ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಪಾವಗಡ ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತಿನ್ನುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಕಲುಷಿತವಾಗಿದೆ ಪ್ರಸ್ತುತ ದಿನಗಳಲ್ಲಿ ಬರುವ ರೋಗಗಳು ಪ್ರಾಥಮಿಕ ಅಂತದಲ್ಲಿ ಹೆಚ್ಚಿನ ಪ್ರಭಾವ ಬೀರದಿದ್ದರೂ ಅವುಗಳನ್ನು ಕಡೆಗಣಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಮಾರಣಾಂತಿಕವಾಗಿ ಜೀವಕ್ಕೆ ಕತ್ತು ತರಬಹುದು. ಇಂದಿನ ಯುಗದಲ್ಲಿ ಮಕ್ಕಳು ಹೆಚ್ಚಾಗಿ ಟಿ.ವಿ. ಹಾಗೂ ಮೊಬೈಲ್ ಬಳಕೆಯಿಂದ ಕಣ್ಣಿನ ದೃಷ್ಟಿ ಅಪಾಯದ ಅಂಚಿಗೆ ತಲುಪುತ್ತಿದೆ. ಗ್ರಾಮೀಣ ಭಾಗದ ಜನರು ರೋಗಗಳ ಬಗ್ಗೆ ಅರಿವಿಲ್ಲದೆ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ನಿರ್ಲಕ್ಷ ತೋರುತ್ತಿದ್ದು, ಗ್ರಾಮೀಣ ಭಾಗದ ಜನಸಾಮಾನ್ಯರ ಅರೋಗ್ಯ ರಕ್ಷಣೆ ಮಾಡಲು ಹೆಲ್ಪ್ ಸೊಸೈಟಿ ಸಂಸ್ಥೆ ಬಹಳಷ್ಟು ಶಿಬಿರಗಳನ್ನು ಆಯೋಜಿಸಿದ್ದು, ಈ ಬಾರಿ ಸೇವಾ ಟ್ರಸ್ಟ್ ಪ್ರಪ್ರಥಮವಾಗಿ ಶಿಬಿರ ಆಯೋಜಿಸಿದ್ದು, ಅತೀ ಹೆಚ್ಚು ಜನರು ಇದರ ಪ್ರಯೋಜನ ಪಡೆದುಕೊಂಡಿರುವುದಕ್ಕೆ ಶಿಬಿರ ಯಶಸ್ಸು ಕಂಡಿದೆ ಹಾಗೂ ಮುಂದೆ ಮುಂದೆ ಮತ್ತಷ್ಟು ಶಿಬಿರ ನಡೆಸಲಿ ಎಂದು ತಿಳಿಸಿ ಸಾರ್ವಜನಿಕರು ಸಹ ಬ್ಯಾಂಕಿನ ಸೌಲಭ್ಯಗಳಾದ ಹಲವಾರು ವಿಮೆಗಳನ್ನು ಜಾರಿಗೆ ತಂದಿದ್ದು ಹದಿನೆಂಟರಿಂದ ಎಪ್ಪತ್ತು ವರ್ಷ ವಯಸ್ಸಿನ ಎಲ್ಲರಿಗೂ ಸಹ ಬ್ಯಾಂಕಿನ ಹಲವಾರು ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಬಿ ಐ ಬ್ಯಾಂಕಿನ ನಾಗಲಕ್ಷ್ಮಮ್ಮ ಮಾತನಾಡುತ್ತ, ಈ ಶಿಬಿರದಲ್ಲಿ ಆಯ್ಕೆಯಾದವರಿಗೆ ಅವರದೇ ಉಚಿತ ವಾಹನದಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ನಂತರ ತಮ್ಮ ಗ್ರಾಮಗಳಿಗೆ ಕರೆ ತಂದು ಬಿಡುವ ಸೌಲಭ್ಯ ಕಲ್ಪಿಸಿದ್ದಾರೆ ಈ ಭಾಗದ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಹೇಳಿದರು.
ಶಿಬಿರದ ಪ್ರಯೋಜಕರಾದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಸೇವಾ ಟ್ರಸ್ಟ್ ನಿರ್ದೇಶಕಿ ಸಂದ್ಯಾ, ನಿರ್ದೇಶಕರಾದ ಅಮಿಲಿನೇಣಿ ನರಸಿಂಹಮೂರ್ತಿ, ಅಮಿಲಿನೇಣಿ ನರೇಶ್, ರಘುಪತಿ ನಾಯ್ಡು, ಬೇಕರಿ ನಾಗರಾಜ್, ಮಾನಂ ಗೌತಮ್, ಭವ್ಯ, ಶಶಿಕಲಾ, ಶಂಕರ್ ಕಣ್ಣಿನ ಆಸ್ಪತ್ರೆಯ ನೇತ್ರಾಧಿಕಾರಿ ಪವಿತ್ರ, ಶಂಕರ್ ಕಣ್ಣಿನ ಆಸ್ಪತ್ರೆ ವೈದ್ಯರಾದ ನಿಕಿತಾ, ಅರುಣ್ ಕುಮಾರ್, ಯೋಜನಾಧಿಕಾರಿ ಹರೀಶ್, ಸಾರ್ವಜನಿಕ ಆಸ್ಪತ್ರೆಯ ರಮೇಶ್, ಮಂಜುನಾಥ್, ಕೃಷ್ಟಪ್ಪ, ಓಂಕಾರ್, ಗುರುನಾಥ್ ಹಾಗೂ ಹೆಲ್ಪ್ ಸೊಸೈಟಿ ಪದಾಧಿಕಾರಿಗಳು, ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಜರಿದ್ದರು.
ಈ ಶಿಬಿರದಲ್ಲಿ 180 ರೋಗಿಗಳಿಗೆ ತಪಾಸಣೆ ನಡೆಸಿದ್ದು, ಶಸ್ತ್ರ ಚಿಕಿತ್ಸೆಗೆ 65 ರೋಗಿಗಳು ಆಯ್ಕೆಯಾಗಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q