ಕೊರಟಗೆರೆ : ಕೊರಟಗೆರೆ ಮುಂಜಾನೆ ಗೆಳೆಯರ ಬಳಗ ಮತ್ತು ಮಹಿಳಾ ಬಳಗದಿಂದ ಕುಟುಂಬ ನಿರ್ವಹಣೆಗೆ ಬಡ ಮಹಿಳೆಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲಾಯಿತು.
ಕೊರಟಗೆರೆ ತಾಲ್ಲೂಕಿನ ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಸಿದ್ದಗಿರಿ ನಂಜುಂಡಸ್ವಾಮಿಯವರು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಇವರು ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ಬೆಂಡೊಣೆ ಗ್ರಾಮದಲ್ಲಿ ವಾಸವಾಗಿದ್ದರು. ಇವರು ನಿಧನರಾದ ಮೇಲೆ ಇವರ ಪತ್ನಿ ಪದ್ಮಾವತಿಯವರು ವಿಕಲಚೇತನದ ಹೆಣ್ಣು ಮಗಳ ಪೋಷಣೆಯೊಂದಿಗೆ ಕಷ್ಟಕರ ಜೀವನ ನಡೆಸುತ್ತಿದ್ದರು, ಇದನ್ನು ಮನಗೊಂಡ ಕೊರಟಗೆರೆ ಮುಂಜಾನೆ ಗೆಳೆಯರ ಬಳಗ ಮತ್ತು ಮಹಿಳಾ ಬಳಗವು ಅವರ ಜೀವನ ನಿರ್ವಹಣೆಗೆ ಹೊಲಿಗೆ ಯಂತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ನೂತನ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ರುದ್ರೇಶ್, ನಿವೃತ್ತ ಜೀವ ವಿಮಾ ಅಧಿಕಾರಿ ಶಂಕರಲಿಂಗೇಗೌಡರನ್ನು ಸನ್ಮಾನಿಸಲಾಯಿತು.
ಗೆಳೆಯರ ಬಳಗದ ಅಧ್ಯಕ್ಷ ಎಲ್.ರಾಜಣ್ಣ, ಮಾಜಿ ಜಿ.ಪಂ ಸದಸ್ಯೆ ದಾಕ್ಷಾಯಿಣಿ, ಪ.ಪಂ.ಸದಸ್ಯ ಕೆ.ಆರ್.ಓಬಳರಾಜು, ಚಂದ್ರಕಲಾ, ಲಕ್ಷ್ಮೀ, ಜ್ಯೋತಿ, ಗಟ್ಲಹಳ್ಳಿ ಕುಮಾರ್, ವಿಜಯನರಸಿಂಹ, ಕೃಷ್ಣಮೂರ್ತಿ, ವಿಶ್ವಣ, ದಿನೇಶ್ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx