ಸೆಕ್ಸ್ ಮಾಡುವ ವೇಳೆ ಹೃದಯಾಘಾದಿಂದ ಉದ್ಯಮಿ ಮೃತಪಟ್ಟಿದ್ದು, ಕೊಲೆ ಪ್ರಕರಣದಲ್ಲಿ ಸಿಲುಕುವ ಭೀತಿಯಿಂದ ಮಹಿಳೆ ಉದ್ಯಮಿ ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
67 ವರ್ಷದ ಬೆಂಗಳೂರಿನ ಉದ್ಯಮಿ ಬಾಲಸುಬ್ರಹ್ಮಣ್ಯನ್ ಶವ ಜೆಪಿ ನಗರದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಆಪ್ತರ ಸಹಾಯದಿಂದ ಮಹಿಳೆ ಜೊತೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ ಉದ್ಯಮಿ ಬಾಲಸುಬ್ರಹ್ಮಣ್ಯನ್ ಸೆಕ್ಸ್ ಮಾಡುವ ವೇಳೆ ಕಾರ್ಡಿಯಕ್ ಅರೆಸ್ಟ್ ಆಗಿ ಮೃತಪಟ್ಟಿದ್ದಾರೆ. ಇದರಿಂದ ಕೊಲೆ ಪ್ರಕರಣದ ಭೀತಿಗೆ ಒಳಗಾದ ಮಹಿಳೆ ಪತಿ ಹಾಗೂ ಸೋದರನ ಸಹಾಯ ಕೇಳಿದ್ದಾಳೆ.
ಮೂವರು ಸೇರಿ ಬಾಲಸುಬ್ರಹ್ಮಣ್ಯನ್ ಅವರ ದೇಹವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಜೆಪಿ ನಗರದ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದಾರೆ. ಪೊಲೀಸರು ಬಾಲಸುಬ್ರಹ್ಮಣ್ಯನ್ ಅವರ ಫೋನ್ ಕಾಲ್ ಗಳ ಡಿಟೈಲ್ಸ್ ಹಾಗೂ ಲೋಕೆಷನ್ ಪರಿಶೀಲಿಸಿದಾಗ ಮಹಿಳೆಯ ಮನೆಗೆ ಪದೇಪದೆ ಭೇಟಿ ನೀಡಿರುವುದು ತೋರಿಸಿದೆ.
ಕುಟುಂಬದ ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ಆಂಜಿಯೊಪ್ಲಾಸ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಸುಬ್ರಹ್ಮಣ್ಯನ್ ವೈಯಕ್ತಿಕ ಕೆಲಸದ ಮೇಲೆ ಹೊರಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟ್ಟಿದ್ದರು.
ಪೊಲೀಸರು ಪೋಸ್ಟ್ ಮಾರ್ಟಂ ವರದಿಯನ್ನು ನಿರೀಕ್ಷಿಸುತ್ತಿದ್ದಾರೆ. ಅಲ್ಲದೇ ಮಹಿಳೆ, ಆಕೆಯ ಪತಿ ಹಾಗೂ ಸೋದರನ ವಿರುದ್ಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


