ಸ್ಯಾಂಡಲ್ ವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಅದ್ಬುತ ಸಿನಿಮಾಗಳು ತೆರೆ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಆಗಸ್ಟ್ ತಿಂಗಳಿನಲ್ಲಿ ಸಿನಿಮಾಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿದೆ. ಯಾಕಂದ್ರೆ ಸಾಲು ಸಾಲು ಒಳ್ಳೊಳ್ಳೆ ಸಿನಿಮಾಗಳು ತೆರೆಕಂಡಿದೆ ಜೊತೆ ರಿಲೀಸ್ ಆಗಲು ಬಾಕಿಯಿದೆ.
ಡಾಲಿ ಧನಂಜಯ, ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಯಶ ಶಿವಕುಮಾರ್ ನಟನೆಯ “ಮಾನ್ಸೂನ್ ರಾಗ” ಸಿನಿಮಾ ಇದೇ ಆಗಸ್ಟ್ 19ರಂದು ತೆರೆಯ ಮೇಲೆ ರಂಗೇರಿಸಲು ಸಿದ್ಧವಾಗಿದೆ.”ಮಾನ್ಸೂನ್ ರಾಗ”ಸಿನಿಮಾದ ಟ್ರೀಲರ್ ಮತ್ತು ಹಾಡುಗಳಿಂದಲೇ ಜನಮನ ಗೆದ್ದಿದೆ.
‘ಸೆಕ್ಸ್ ವರ್ಕರ್’ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಳ್ಳೋದ್ರ ಮೂಲಕ ವಿಭಿನ್ನ ಕಥೆಯನ್ನ ತೆರೆಯ ಮೇಲೆ ಹೇಳಲು ಹೊರಟಿದ್ದಾರೆ. ಈ ಸಿನಿಮಾದಲ್ಲಿ ಸೆಕ್ಸ್ ವರ್ಕರ್ ಪಾತ್ರದಲ್ಲಿ ಕಾಣಿಸಿಕೊಳ್ಳೋ ರಚಿತಾ ರಾಮ್ ಮೇಲೆ ಡಾಲಿಗೆ ಲವ್ ಆಗೋ ಸೂಚನೆ ಟ್ರೇಲರ್ ಮೂಲಕ ಸಿಕ್ಕಿದೆ. ಟ್ರೇಲರ್ ನೋಡಿದ್ರೆ ಅದ್ಬುತ ಸ್ಟೋರಿ ಈ ಚಿತ್ರದಲ್ಲಿ ಇರೋದು ಪಕ್ಕಾ ಆಗಿದೆ.ಸಿನಿಮಾದ ಟೈಟಲ್ ಹೇಳುವಂತೆ ಆಲ್ ಮೋಸ್ಟ್ ಸಿನಿಮಾ ಮಳೆಯಲ್ಲೇ ಶೂಟಿಂಗ್ ಆಗಿದೆ ಅನ್ನೋದನ್ನ ಸಾಕಷ್ಟು ಬಾರಿ ಚಿತ್ರತಂಡ ಹೇಳಿಕೊಂಡಿದೆ.
ಮಾನ್ಸೂನ್ ರಾಗ” ಸಿನಿಮಾ ಗಂಗೂಬಾಯಿ ಸಿನಿಮಾ ಮುಂಚೆಯೇ ತೆರೆಗೆ ತರೋ ಪ್ಲಾನ್ ಮಾಡಿತ್ತು ಚಿತ್ರತಂಡ.ಆದ್ರೆ ಹಲವು ಕಾರಣಗಳಿಂದ ಸಿನಿಮಾ ಬೇಗ ರಿಲೀಸ್ ಮಾಡಲು ಸಾಧ್ಯವಾಗಿಲ್ಲ.
ಮಾನ್ಸೂನ್ ರಾಗ ಸಿನಿಮಾ ಕೂಡ 70-80ರ ದಶಕದಲ್ಲಿ ನಡೆಯುವಂಥ ಕಥೆಯನ್ನು ಹೊಂದಿದ್ದು, ವೀರೆಂದ್ರನಾಥ್ ನಿರ್ದೇಶನ ಮಾಡಿದ್ದು, ಎ.ಆರ್. ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ. ಸಂಭಾಷಣೆಯನ್ನು ಗುರು ಕಶ್ಯಪ್ ಬರೆದಿದ್ದಾರೆ.
ಸದ್ಯ ಯಶಾ ಶಿವಕುಮಾರ್ ಪಾತ್ರವೇ ಇಷ್ಟು ಕಾಡ್ತಿದೆ ಅಂದ್ರೆ, ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಪಾತ್ರ ಕಿಕ್ ಎರಿಸೋದ್ರಲ್ಲಿ ಡೌಟ್ ಇಲ್ಲ.. ಜೊತೆಗೆ ನಟರಾಕ್ಷಸನ ನಟನೆ ಬಾಕ್ಸ್ ಆಫೀಸ್ನ ಕಿಲ್ ಮಾಡೋದ್ರಲ್ಲಿ ಡೌಟ್ ಇಲ್ಲ ಅಂತಿದ್ದಾರೆ ಗಾಂಧಿನಗರದ ಮಂದಿ. ಈ ಸಿನಿಮಾಗೆ ಅನೂಪ್ ಸೀಳಿನ್ ಮ್ಯೂಸಿಕ್ ಇದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz