ಬೆಂಗಳೂರು: ವಿದೇಶಿ ಮೂಲದ ಕಂಪನಿಯಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನಲೆ ಕಂಪನಿಯ ಹಿರಿಯ ಸಹದ್ಯೋಗಿ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಎಂ. ಜಿ ರಸ್ತೆ ಸಮೀಪದ ಮೇಗ್ರಾಥ್ ರಸ್ತೆಯಲ್ಲಿರುವ ವಿದೇಶಿ ಮೂಲದ ಲಿಬ್ರೆ ವೈರ್ ಲೆಸ್ ಟೆಕ್ನಾಲಜೀಸ್ ಪ್ರೇವೈಟ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಆರೋಪಿ ಪ್ರೇಮ್ ಚಂದರ್, ಕೆಲಸದ ವೇಳೆ ಮಹಿಳಾ ಟೆಕ್ಕಿ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದನಂತೆ ಎಂದು ಆರೋಪಿಸಲಾಗಿದೆ.


