ಶಾರುಖ್ ಖಾನ್ ಅವರು ಸಾಂಪ್ರಾದಾಯಿಕ ಉಡುಗೆಯನ್ನು ಧರಿಸಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರೊಂದಿಗೆ ತಿರುಪತಿಗೆ ಭೇಟಿ ನೀಡಿದರು. ಶಾರುಖ್ ಅವರೊಂದಿಗೆ ಪುತ್ರಿ ಸುಹಾನಾ ಖಾನ್ ಮತ್ತು ಪತ್ನಿ ಗೌರಿ ಇದ್ದರು. ‘ಜವಾನ್’ ಸಿನಿಮಾ ಬಿಡುಗಡೆಗೂ ಮುನ್ನವೇ ತಿರುಪತಿ ಭೇಟಿ. ಮೊನ್ನೆಯಷ್ಟೇ ಶಾರುಖ್ ‘ಜವಾನ್’ ಸಿನಿಮಾದ ಟ್ರೇಲರ್ ಲಾಂಚ ಕಾರ್ಯಕ್ರಮ ಚೆನ್ನೈ ನಲ್ಲಿ ನೆರವೇರಿತು.
ಅಟ್ಲಿ ನಿರ್ದೇಶನದ ‘ಜವಾನ್’ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ. ಇದು ನಯನತಾರಾ ಅವರ ಬಾಲಿವುಡ್ ಚೊಚ್ಚಲ ಚಿತ್ರವೂ ಹೌದು. ಇತರ ತಾರಾಗಣದಲ್ಲಿ ವಿಜಯ್ ಸೇತುಪತಿ, ಪ್ರಿಯಾಮಣಿ, ಯೋಗಿ ಬಾಬು ಮತ್ತು ಜಾಫರ್ ಸಾದಿಕ್ ಇದ್ದಾರೆ.
ಜವಾನ್ ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಿಗೆ ಬರಲಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿರುವ ಜವಾನ್ ಚಿತ್ರದ ಮುಂಗಡ ಬುಕಿಂಗ್ ಇದೇ ಶುಕ್ರವಾರ ಆರಂಭವಾಗಿದೆ. ಸಂಗೀತ ತಡೆಯಲಾಗದು. ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ನಿರ್ಮಿಸಿದ್ದಾರೆ.