ಸರಗೂರು: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಡಾ ಅಲೀಲ್ ಪಾಷಾ ತಿಳಿಸಿದರು.
ಸರಗೂರು ತಾಲ್ಲೂಕಿನ ಹಾದನೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಮಹೇಂದ್ರ ವಹಿಸಿ ಮಾತನಾಡಿ, ಪ್ರಸ್ತುತ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಏಕ ರೂಪ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುವ ಕಾರಣ ಗುಣಮಟ್ಟದ ಶಿಕ್ಷಣ ಸಮನಾಗಿ ಮಕ್ಕಳಿಗೆ ದೊರೆಯುತ್ತಿದೆ. ಇದರ ಜತೆಯಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತಿರುವುದು ಮಕ್ಕಳನ್ನು ಉತ್ತೇಜಿಸಿದಂತಾಗುತ್ತಿದೆ ಎಂದರು.
ಶಾಲಾ ವಾರ್ಷಿಕೋತ್ಸವಗಳಲ್ಲಿ ಸಾಂಸ್ಕೃತಿಕ ಕಲೆಗಳನ್ನು ಮಕ್ಕಳಿಂದ ಪ್ರದರ್ಶಿಸುವ ಮೂಲಕ ಅವರಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಿದಂತಾಗುತ್ತಿದೆ. ಈ ನಿಟ್ಟಿನಲ್ಲಿ ದೇಶೀಯ ಪರಂಪರೆಯನ್ನು ಬಿಂಬಿಸುವ ಕಲೆಗಳು ವಿದ್ಯಾರ್ಥಿಗಳಿಂದ ಮೂಡಿ ಬರಲು ಶಿಕ್ಷಕರ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯ ಪ್ರಕಾಶ್ ಮಾತನಾಡಿ, ಆಧುನಿಕ ಯುಗಕ್ಕೆ ಮಾರುಹೋಗುತ್ತಿರುವ ಯುವ ಜನತೆಗೆ ಐತಿಹಾಸಿಕ ವಿಚಾರವನ್ನು ತಿಳಿ ಹೇಳುವ ಅಗತ್ಯ ಇದೆ. ಪಠ್ಯದಲ್ಲಿ ಸಾಮಾಜಿಕ ವಾದ ಎಲ್ಲಾ ವಿಚಾರಗಳನ್ನು ಏಕಕಾಲದಲ್ಲಿ ಹೇಳಲು ಸಾಧ್ಯವಿಲ್ಲ.ಆದರೆ ಕಲೆಗಳ ಮುಖೇನಾ ತಿಳಿಸಲು ಸಾಧ್ಯವಿದೆ ಎಂದು ಹೇಳಿದರು.
ಗ್ರಾಪಂ ಶಿವರಾಜು ಅರಸು ರತ್ನಮ್ಮ ರಾಜೇಶ್,ಭಾಗ್ಯಕೆಂಪಸಿದ್ದ, ಯಜಮಾನರು ರಾಜಣ್ಣ, ಶಿವಮೂರ್ತಿ, ಸತೀಶ್, ಸಿದ್ದರಾಜು, ಮಾಜಿ ಗ್ರಾಪಂ ಅಧ್ಯಕ್ಷ ಸಿದ್ದರಾಜು, ಸದಸ್ಯರು ಮಹದೇವಸ್ವಾಮಿ, ಮಹದೇವಸ್ವಾಮಿ, ನಿವೃತ್ತಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡಯ್ಯ, ಶಿಕ್ಷಕರು ನಾರಾಯಣಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಮಹೇಂದ್ರ, ಸಮಿತಿ ಸದಸ್ಯರು ಶಿವು, ನಂಜುಂಡಿ, ಪಾಪಣ್ಣ, ರಾಮಕೃಷ್ಣ, ಹೊಂಳಮ್ಮ,ರೂಪಾ, ಚಿನ್ನಮ್ಮ,ಶಿಕ್ಷಕರು ಶಾಂತಮ್ಮ, ಪ್ರಸನ್ನ ಕುಮಾರ್, ಕೃಷ್ಣಮೂರ್ತಿ, ಸಿದ್ದರಾಜು,ಗೌರಿಶ್, ಪ್ರಮೀಳಾ,ಮುಖಂಡರೂ ಹಾದನೂರುಚಂದ್ರ, ಚಿನ್ನಯ್ಯ,ಕೆಂಪಸಿದ್ದ, ಗ್ರಾಮದ ಗ್ರಾಮಸ್ಥರು ಹಾಗೂ ಶಾಲೆ ಮಕ್ಕಳು ಸೇರಿದಂತೆ ಭಾಗವಹಿಸಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


