ಪಾವಗಡ: ನಿಡಗಲ್ಲು ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿ.ಕೆಪುರ ಕ್ಲಸ್ಟರ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಇದೇ ವೇಳೆ ಮಾತನಾಡಿದ ದೈಹಿಕ ಶಿಕ್ಷಕರಾದ ಲಕ್ಷ್ಮೀ ನಾರಾಯಣ, ಶಾಲೆಯಲ್ಲಿ ಉತ್ತಮವಾದ ಗುಣಮಟ್ಟದ ಬೋಧನೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ಇದನ್ನು ತಮ್ಮ ಮಕ್ಕಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಮುಖ್ಯವಾಗಿ ಸರ್ಕಾರಿ ಶಾಲೆಯಲ್ಲಿ ನಮ್ಮ ಮಕ್ಕಳು ಓದುವುದರಿಂದ ಕನ್ನಡ ಉಳಿಸುವಂತೆ ಮಾಡಬಹುದು ಎಂದು ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ರತ್ನಮ್ಮ ಕೊಂಡಪ್ಪನವರು ಈ ಸರ್ಕಾರಿ ಶಾಲೆಗೆ ಧ್ವನಿ ವರ್ಧಕ ಉಚಿತವಾಗಿ ನೀಡಿದರು. ಇದೇ ಶಾಲೆಯ ಶಿಕ್ಷಕರಾದ ಪೃಥ್ವಿ ಮೌನಿಕ ಇವರ ಕುಟುಂಬದಿಂದ ಅನ್ನ ದಾನ ಮಾಡಿದರು.
ಕಾರ್ಯಕ್ರಮದಲ್ಲಿ ಚಿದಾನಂದ ಸ್ವಾಮಿ ದೈಹಿಕ ಶಿಕ್ಷಣ ಪರಿವೀಕ್ಷಕರು ಪಾವಗಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪವನ್ ಕುಮಾರ್ ರೆಡ್ಡಿ, ಚಿದಾನಂದ ಸ್ವಾಮಿ ಟಿ.ಪಿ.ಇ.ಓ. ಪಾವಗಡ, ರಂಗನಾಥ ಇ ಸಿ ಓ., ದೇವರಾಜು ಬಿ.ಆರ್.ಸಿ., ಎಲ್ ಮೂರ್ತಿ. ಸಿ.ಆರ್. ಪಿ., ಎಚ್.ನಾಗರಾಜು ತಾ.ದೈ.ಶಿ. ಸಂಘದ ಅದ್ಯಕ್ಷರು, ಶಿವಣ್ಣ ಸಿ ಆರ್ ಪಿ. ಜನ ಪ್ರತಿನಿಧಿಗಳು, ಮುಖ್ಯ ಶಿಕ್ಷಕರಾದ ವಿಶ್ವೇಶ್ವರಯ್ಯ ನವರು, ಸುದರ್ಶನ ಗ್ರಾ.ಪಂ.ಪಿ ಡಿ ಒ., ಸಹ ಶಿಕ್ಷಕರು ಶ್ರೀನಿವಾಸ್, .ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಲಿ ಸದಸ್ಯರು ರಾಮಪ್ಪ ಹಾಗೂ ಕಮಿಟಿ ಸದಸ್ಯರುಗಳು. ನಾಗರಿಕರು ಭಾಗವಹಿಸಿದರು.
ವರದಿ: ರಾಮಪ್ಪ ಸಿ.ಕೆ.ಪುರ ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA