ಹೆಚ್.ಡಿ.ಕೋಟೆ: ತಾಲ್ಲೂಕಿನ ಶಂಖಹಳ್ಳಿ ಗ್ರಾಮದ ಶಂಖಮ್ಮ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಡಿಯಲ್ಲಿ ಶಂಖಮ್ಮ ದೇವಸ್ಥಾನವನ್ನು ಸ್ವಚತಾ ಕಾರ್ಯಕ್ರಮವನ್ನು ಹಮ್ಮಿಕೂಳ್ಳಲಾಯಿತು.
ಮೈಸೂರು ಜಿಲ್ಲಾ ನಿರ್ದೆಶಕರಾದ ಲಕ್ಷಣ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಮ್ಮ ಊರಿನ ದೇವಸ್ಥಾನಗಳನ್ನೂ ನಾವೇ ಶುಚಿಯಾಗಿ ಇಡಬೇಕು ಏನ್ನುವ ಉದ್ದೇಶದಿoದ ಡಾ.ಡಿ.ವೀರೇoದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕರ್ನಾಟಕದಾದ್ಯಂತ ಸಂಕ್ರಾತಿ ಹಬ್ಬದ ಪ್ರಯುಕ್ತ ಎಲ್ಲ ದೇವಸ್ಥಾನಗಳ ಸ್ವಚ್ಛತೆಯನ್ನುಮಾಡಲು ಹಮ್ಮಿಕೂoಡಿರುತ್ತೇವೆ ಹಾಗೂ ತಾಲ್ಲೂಕಿನಲ್ಲಿ 70 ದೇವಸ್ಥಾನಗಳ ಸ್ವಚತೆ ಮಾಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕಿನ ಯೋಜನಾಧಿಕಾರಿಯವರಾದ ಶಶಿಧರ್ ಎಂ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಎಚ್.ಜಿ. ಸೇವಾಪ್ರತಿನಿದಿ ಭಾಗ್ಯಮ್ಮ ಹಾಗೂ ಶಂಖಮ್ಮ ಜ್ಞಾನವಿಕಾಸ ಸದಸ್ಯರು ಭಾಗವಹಿಸಿದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


