ಮದುವೆ ಆಗು ಅಂತ ಕೇಳಿದ್ದಕ್ಕೆ ಕೊಲೆ ಮಾಡಿ 35 ತುಂಡುಗಳಾಗಿ ಕತ್ತರಿಸಿದ್ದ ಅಫ್ತಾಬ್ ಅಮೀನ್ ಪೂನೂವಾಲಾ ಪ್ರೇಯಸಿ ಶವ ಮನೆಯಲ್ಲಿದ್ದಾಗಲೇ ಮತ್ತೊಬ್ಬಳನ್ನು ಮನೆಗೆ ಕರೆದುಕೊಂಡು ಬಂದಿದ್ದ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡೇಟಿಂಗ್ ಆಪ್ ನಲ್ಲಿ ಶ್ರದ್ಧಾಳ ಪರಿಚಯ ಮಾಡಿಕೊಂಡಿದ್ದ ಅಫ್ತಾಬ್, ಸ್ನೇಹಕ್ಕೆ ತಿರುಗಿದ ನಂತರ ಮುಂಬೈನಲ್ಲಿ ಆಕೆಯ ಜೊತೆ ಇದ್ದ. ನಂತರ ದೆಹಲಿಯಲ್ಲಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ.
ಶ್ರದ್ಧಾಳನ್ನು ಕೊಂದು 35 ತುಂಡುಗಳಾಗಿ ಕತ್ತರಿಸಿ ಪ್ರತಿದಿನ ರಾತ್ರಿ 2 ಗಂಟೆಗೆ ಮೆಹ್ರೂಲ್ ಕಾಡಿನಲ್ಲಿ 18 ದಿನಗಳ ಕಾಲ ಬಿಸಾಡಿದ್ದ.
ಶ್ರದ್ಧಾಳ ದೇಹದ ತುಂಡುಗಳು ಮನೆಯಲ್ಲಿ ಇದ್ದಾಗಲೇ ಡೇಟಿಂಗ್ ಆಪ್ ನಲ್ಲಿ ಪರಿಚಯ ಆದ ಮತ್ತೊಬ್ಬ ಮಹಿಳೆಯನ್ನು ಅಫ್ತಾಬ್ ಮನೆಗೆ ಕರೆದುಕೊಂಡು ಬಂದಿದ್ದ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಇದೀಗ ಅಪ್ತಾಬ್ ನನ್ನು ಬಂಧಿಸಿ ಜೈಲಿನಲ್ಲಿ ಇರಿಸಿದ್ದು ದಿನದ 24 ಗಂಟೆ ಸಿಸಿಟಿವಿ ನಿಗಾದಲ್ಲಿ ಇದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz